ವಿಜಯವಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ದುರ್ಗಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದಿನ ಶಾಕಾಂಬರಿ ದೇವಿ ಉತ್ಸವ ಆರಂಭಗೊಂಡಿದೆ. ಮುಂದಿನ ಮೂರು ದಿನಗಳ ಕಾಲ ಶಾಕಾಂಬರಿ ದೇವಿ ಉತ್ಸವ ನಡೆಯಲಿದ್ದು, ತರಕಾರಿ ಮತ್ತು ಹಣ್ಣುಗಳಿಂದ ದೇವಿ ಅಲಂಕರಿಸಲಾಗಿದೆ.
ವೈದಿಕ ಕಾಲದಲ್ಲಿ ದುರ್ಗಮಾಸುರ ಎಂಬ ರಾಕ್ಷಸನು ಎಲ್ಲ ವೇದಗಳನ್ನ ತನ್ನಲ್ಲಿ ಅಡಗಿಸಿಕೊಂಡಿದ್ದನಂತೆ. ಇದರಿಂದಾಗಿ ಎಲ್ಲ ದೇವತೆಗಳು ವೇದ, ಪೂಜೆ, ಯಾಗ, ವಿಧಿ - ವಿಧಾನ ಮರೆತು ಇಡೀ ಜಗತ್ತೇ ಕ್ಷಾಮದಿಂದ ನರಳುತ್ತಿತ್ತು. ಈ ಸಂದರ್ಭದಲ್ಲಿ ದೇವಿ ಶಾಕಾಂಬರಿ ಉದ್ಭವವಾಗಿ ಜನರ ಹಸಿವು ನೀಗಿಸಿದಳು ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಹೀಗಾಗಿ, ಪ್ರತಿವರ್ಷ ಅದ್ಧೂರಿಯಾಗಿ ಉತ್ಸವ ನಡೆಸಲಾಗುತ್ತದೆ.
ಸಾವಿರಾರು ಭಕ್ತರು ಶಾಕಾಂಬರಿ ದೇವಿಗೆ ಪೂಜೆ ಸಲ್ಲಿಸುತ್ತಿದ್ದು, ಅದಕ್ಕಾಗಿ ತರಕಾರಿ, ಹಣ್ಣು ಮತ್ತು ಸೊಪ್ಪು ಉಚಿತವಾಗಿ ನೀಡುತ್ತಿದ್ದಾರೆ. ಇಂದಿನಿಂದ ದೇವಾಲಯದಲ್ಲಿ ಅನ್ನ-ಪ್ರಸಾದ ಸಹ ಆರಂಭಗೊಂಡಿದೆ.
ಇದನ್ನೂ ಓದಿರಿ: ಹಾಡಹಗಲೇ ನಗರಸಭೆ ಅಧ್ಯಕ್ಷೆಯ ಪತಿ ಹತ್ಯೆ: ಕೈ ಮುಖಂಡನ ಭೀಕರ ಕೊಲೆಗೆ ಬೆಚ್ಚಿದ ಕಲಬುರಗಿ