ಲಖನೌ: ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಹತ್ಯೆ ಕುರಿತು ಮಾತನಾಡಿರುವ ವರಿಷ್ಠೆ ಮಾಯಾವತಿ, ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಮಾಫಿಯಾ ಅತೀಕ್ ಅಹ್ಮದ್ ಅವರ ಪತ್ನಿ, ಬಿಎಸ್‌ಪಿ ನಾಯಕಿ ಶೈಸ್ತಾ ಪರ್ವೀನ್ ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಪಕ್ಷದಿಂದ ಹೊರಹಾಕಲಾಗುವುದು ಎಂದು ತಿಳಿಸಿದ್ದಾರೆ.
ಸರಣಿ ಟ್ವೀಟ್ಗಳನ್ನು ಮಾಡಿರುವ ಮಾಯಾವತಿ, ಜೈಲಿನಲ್ಲಿರುವ ಮಾಜಿ ಸಂಸದ ಅಹ್ಮದ್ ಅವರನ್ನು ಸಮಾಜವಾದಿ ಪಕ್ಷದ ಉತ್ಪನ್ನ ಎಂದು ಉಲ್ಲೇಖಿಸಿದ್ದು, "ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆಯಲ್ಲಿ ಅತೀಕ್ ಅವರ ಪತ್ನಿ ತಪ್ಪಿತಸ್ಥರೆಂದು ಸಾಬೀತಾದರೆ ಅವರನ್ನು ಬಿಎಸ್ಪಿಯಿಂದ ಹೊರಹಾಕುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ಮೇಯರ್ ಸ್ಥಾನಕ್ಕೆ ಅವರನ್ನು ಕಣಕ್ಕಿಳಿಸುವ ಯೋಜನೆಯೊಂದಿಗೆ ಮಾಯಾವತಿ ಇದೇ ವರ್ಷ ಜನವರಿ 5 ರಂದು ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರು.
-
1.प्रयागराज में राजू पाल की वर्षाे पहले हुई हत्या के मुकदमे का अहम गवाह अधिवक्ता उमेश पाल व उनके गनर की हत्या के मामले में अतीक अहमद के लड़के एवं उनकी पत्नी के ऊपर एफआईआर दर्ज किये जाने की भी सूचना प्रकाशित हुई है। 1/4
— Mayawati (@Mayawati) February 27, 2023 " class="align-text-top noRightClick twitterSection" data="
">1.प्रयागराज में राजू पाल की वर्षाे पहले हुई हत्या के मुकदमे का अहम गवाह अधिवक्ता उमेश पाल व उनके गनर की हत्या के मामले में अतीक अहमद के लड़के एवं उनकी पत्नी के ऊपर एफआईआर दर्ज किये जाने की भी सूचना प्रकाशित हुई है। 1/4
— Mayawati (@Mayawati) February 27, 20231.प्रयागराज में राजू पाल की वर्षाे पहले हुई हत्या के मुकदमे का अहम गवाह अधिवक्ता उमेश पाल व उनके गनर की हत्या के मामले में अतीक अहमद के लड़के एवं उनकी पत्नी के ऊपर एफआईआर दर्ज किये जाने की भी सूचना प्रकाशित हुई है। 1/4
— Mayawati (@Mayawati) February 27, 2023
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಉಮೇಶ್ ಪಾಲ್ ಮತ್ತು ಅವರ ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದ ಒಂದು ದಿನದ ನಂತರ ಪೊಲೀಸರು ಶನಿವಾರ ಅಹ್ಮದ್, ಅವರ ಪತ್ನಿ ಶೈಸ್ತಾ, ಅವರ ಇಬ್ಬರು ಪುತ್ರರು, ಅವರ ಕಿರಿಯ ಸಹೋದರ ಖಾಲಿದ್ ಅಜೀಮ್ ಅಲಿಯಾಸ್ ಅಶ್ರಫ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಯಾಗರಾಜ್ ಪೊಲೀಸರು ಉಮೇಶ್ ಪಾಲ್ ಅವರ ಹತ್ಯೆಯಲ್ಲಿ ಅತೀಕ್ ಅಹ್ಮದ್ ಅವರ ಕೈವಾಡವಿರುವ ಬಗ್ಗೆ ಒತ್ತಿ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಇಬ್ಬರು ಪುತ್ರರನ್ನು ಬಂಧಿಸಲಾಗಿದೆ. ಮಾಜಿ ಸಂಸದ ಮತ್ತು ಐದು ಬಾರಿ ಶಾಸಕರಾಗಿರುವ ಅಹ್ಮದ್ ಅವರು 2016 ರಲ್ಲಿ ಪ್ರಯಾಗರಾಜ್‌ನ ಕೃಷಿ ಸಂಶೋಧನಾ ಸಂಸ್ಥೆಯೊಂದರ ಅಧ್ಯಾಪಕರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪ್ರಸ್ತುತ ಗುಜರಾತ್ ಜೈಲಿನಲ್ಲಿದ್ದಾರೆ.
"ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶೈಸ್ತಾ ಪರ್ವೀನ್ ಮತ್ತು ಅವರ ಇಬ್ಬರು ಪುತ್ರರ ವಿರುದ್ಧ ಎಫ್‌ಐಆರ್ ದಾಖಲಿಸಿದ ವರದಿಗಳನ್ನು ತಮ್ಮ ಪಕ್ಷವು ಗಮನಿಸಿದೆ. ವರ್ಷಗಳ ಹಿಂದೆ ಪ್ರಯಾಗರಾಜ್‌ನಲ್ಲಿ ನಡೆದ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ವಕೀಲ ಉಮೇಶ್ ಪಾಲ್ ಮತ್ತು ಆತನ ಗನ್ನರ್ ಹತ್ಯೆಗೆ ಸಂಬಂಧಿಸಿದಂತೆ ಅತೀಕ್ ಅಹ್ಮದ್ ಅವರ ಮಗ ಮತ್ತು ಅವರ ಪತ್ನಿ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಬಗ್ಗೆಯೂ ಮಾಹಿತಿ ಪ್ರಕಟಿಸಲಾಗಿದೆ" ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ತಪ್ಪಿತಸ್ಥರೆಂದು ಸಾಬೀತಾದ ಮೇಲೆ ಪರ್ವೀನ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗುವುದು ಎಂದು ಭರವಸೆ ನೀಡಿರುವ ಮಾಯಾವತಿ, "ಇದನ್ನು ಗಂಭೀರವಾಗಿ ಪರಿಗಣಿಸಿ, ಅತಿಕ್ ಅಹ್ಮದ್ ಅವರ ಪತ್ನಿ ಶೈಸ್ತಾ ಪರ್ವೀನ್ ಅವರನ್ನು ಪಕ್ಷದಿಂದ ಹೊರಹಾಕಲು ನಿಎಸ್ಪಿ ನಿರ್ಧರಿಸಿದೆ. ಸದ್ಯ ನಡೆಯುತ್ತಿರುವ ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ ತಕ್ಷಣ ಅವರನ್ನು ಪಕ್ಷದಿಂದ ಹೊರಹಾಕಲಾಗುವುದು" ಎಂದಿದ್ದಾರೆ.
"ಅತೀಕ್ ಅಹ್ಮದ್ ಸಮಾಜವಾದಿ ಪಕ್ಷದ ಉತ್ಪನ್ನ ಮತ್ತು ಅವರು ಆ ಪಕ್ಷದ ಸಂಸದ ಮತ್ತು ಶಾಸಕರಾಗಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಅಲ್ಲದೆ, ರಾಜು ಪಾಲ್ ಅವರ ಪತ್ನಿ ಕೂಡ ಬಿಎಸ್‌ಪಿಯಿಂದ ಎಸ್‌ಪಿಗೆ ಪಕ್ಷಾಂತರವಾಗಿದ್ದಾರೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಉಮೇಶ್ ಪಾಲ್ ಹಾಗೂ ಅವರ ಗನ್ಮ್ಯಾನ್ಗಳ ಮೇಲೆ ಗುಂಡಿನ ದಾಳಿ ನಡೆಸಿದ ಸಿಸಿಟಿವಿ ದೃಶ್ಯವನ್ನು ನಿನ್ನೆ ಉತ್ತರ ಪ್ರದೇಶದ ಪೊಲೀಸರು ಪರಿಶೀಲಿಸಿದ್ದಾರೆ. ಈ ವೇಳೆ ನಾಲ್ವರು ದಾಳಿಕೋರರಲ್ಲಿ ಅತೀಕ್ ಅಹ್ಮದ್ ಅವರ ಪುತ್ರ ಅಸದ್ ಅಹ್ಮದ್, ಅತೀಕ್ ಅಹ್ಮದ್ ಅವರ ಆಪ್ತ ಸಹಾಯಕ ಗುಡ್ಡು ಮುಸ್ಲಿಂ, ಅರ್ಮಾನ್ ಮತ್ತು ಮೊಹಮ್ಮದ್ ಗುಲಾಮ್ ಎಂಬುದನ್ನು ಗುರುತಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಪ್ರಶಾಂತ್ ಕುಮಾರ್ ಮತ್ತು ಎಸ್‌ಟಿಎಫ್ ಎಡಿಜಿ ಅಮೃತ್ ಅಭಿಜತ್ ಪ್ರಯಾಗರಾಜ್‌ನಲ್ಲಿ ಬೀಡುಬಿಟ್ಟಿದ್ದಾರೆ. ಉಮೇಶ್ ಪಾಲ್ ಮೇಲಿನ ದಾಳಿಯಲ್ಲಿ ಏಳು ಮಂದಿ ಭಾಗಿಯಾಗಿದ್ದು, ಈ ಪೈಕಿ ನಾಲ್ವರನ್ನು ಇದುವರೆಗೆ ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ. ನಾಲ್ವರು ದಾಳಿಕೋರರ ಪೈಕಿ ಮೂವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಉಮೇಶ್ ಪಾಲ್ ಗನ್‌ಮ್ಯಾನ್ ಸ್ಥಿತಿ ಗಂಭೀರ: ಗ್ರೀನ್ ಕಾರಿಡಾರ್ ಮೂಲಕ ಲಖನೌ ಆಸ್ಪತ್ರೆಗೆ ಶಿಫ್ಟ್