ಶಹದೋಲ್ (ಮಧ್ಯಪ್ರದೇಶ): ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಲೆ ಸಾಕಷ್ಟು ಏರಿಕೆಯಾಗಿದೆ. ಟೊಮೆಟೊ ಈಗಾಗಲೇ ಶತಕ ಗಡಿದಾಟಿದೆ. ಇದೀಗ ಅದರ ಪರಿಣಾಮ ಶ್ರೀಸಾಮಾನ್ಯನ ಸಂಬಂಧದ ಮೇಲೂ ಬೀರಿದೆ. ಹೌದು, ಶಹದೋಲ್ ಜಿಲ್ಲೆಯಲ್ಲೊಂದು ಪ್ರಕರಣ ಮುನ್ನೆಲೆಗೆ ಬಂದಿದೆ. ಪತ್ನಿಗೆ ಕೇಳದೇ ಪತಿಯು ಉಪಹಾರ ತಯಾರಿಸುವ ವೇಳೆ ಟೊಮೆಟೊ ಹಾಕಿದ್ದಾನೆ. ಈ ವಿಚಾರಕ್ಕೆ ಪತ್ನಿ ಕೋಪಗೊಂಡು ಮನೆ ಬಿಟ್ಟು ಹೋಗಿದ್ದಾಳೆ. ಪತಿ ದೂರಿನ ಮೇರೆಗೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಬಂಧಗಳ ಮೇಲೆ ಪರಿಣಾಮ ಬೀರುದ ಟೊಮೆಟೊ: ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಲೆ ಗಗನ ಮುಖಿಯಾಗಿದೆ. ಅದರ ಪರಿಣಾಮ ಈಗ ವ್ಯಕ್ತಿಯೊಬ್ಬರ ಸಂಬಂಧಗಳ ಮೇಲೂ ಆಗಿದೆ. ಅಂತಹ ಒಂದು ಪ್ರಕರಣವು ಶಾಹದೋಲ್ ಜಿಲ್ಲೆಯ ಧನ್‌ಪುರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಧನಪುರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಮ್ಹೋರಿ ಗ್ರಾಮದ ನಿವಾಸಿ ಸಂದೀಪ್ ಬರ್ಮನ್ ಸಣ್ಣ ಢಾಬಾ ನಡೆಸುತ್ತಿದ್ದಾರೆ. ಅವರು ಉಪಾಹಾರ ಸೇವೆಯನ್ನು ಒದಗಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ, ಪತ್ನಿ ಕೇಳದೇ ಪತಿಯು ಅಡುಗೆಗೆ ಟೊಮೆಟೊ ಹಾಕಿದ್ದ. ತಡ ಮಾಡದೇ, ಪತ್ನಿಯು ಸಿಟ್ಟು ಮಾಡಿಕೊಂಡು ಮನೆ ತೊರೆದು ಹೋಗಿದ್ದಾಳೆ.
ಟೊಮೆಟೊ ವಿಚಾರಕ್ಕೆ ಮನೆ ಬಿಟ್ಟು ಹೋದ ಪತ್ನಿ: ಪತಿ ಉಪಹಾರಕ್ಕೆ ಟೊಮೆಟೊ ಹಾಕಿದ್ದಕ್ಕೆ, ಪತ್ನಿಯ ಮನಸ್ತಾಪಗೊಂಡು, ತನ್ನ ಪುಟ್ಟ ಮಗಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ. ಹೆಂಡತಿ ಮಗಳೊಂದಿಗೆ ಚಿಕ್ಕಮ್ಮನ ಮನೆಗೆ ಹೋಗಿದ್ದಾಳೆ. ಇದರಿಂದ ನೊಂದ ಪತಿ ಧನಪುರಿ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮತ್ತೊಂದೆಡೆ, ಧನಪುರಿ ಪೊಲೀಸ್ ಠಾಣೆ ಪ್ರಭಾರಿ ಸಂಜಯ್ ಜೈಸ್ವಾಲ್ ಮಾತನಾಡಿ, "ತನ್ನ ಹೆಂಡತಿಯು ಉಪಹಾರಕ್ಕೆ ಟೊಮೆಟೊ ಹಾಕಿದ್ದಕ್ಕೆ, ಮುನಿಸಿಕೊಂಡು ಎಲ್ಲೋ ಹೋಗಿದ್ದಾಳೆಂದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ತನ್ನ ಸಂಬಂಧಿಕರೊಬ್ಬರ ಬಳಿಗೆ ಹೋಗಿದ್ದಾಳೆ. ಆತನೊಂದಿಗೆ ಮಾತನಾಡಿದ ನಂತರ ಆಕೆಯನ್ನು ಸಮಾಲೋಚಿಸಲಾಗಿದೆ. ಮಹಿಳೆ ಶೀಘ್ರದಲ್ಲೇ ಹಿಂದಿರುಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಶಹದೋಲ್ ಜಿಲ್ಲೆಯಲ್ಲಿ ₹120ಗೆ ಕೆಜಿ ಟೊಮೆಟೊ: ಇತ್ತೀಚಿನ ಕೆಲವು ದಿಗಳಿಂದ ಟೊಮೆಟೊ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಟೊಮೆಟೊ ಶತಕ ಬಾರಿಸಿದ್ದರೂ ಅದರ ದರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಶಹದೋಲ್ ಜಿಲ್ಲೆಯಲ್ಲಿ ಸದ್ಯ ಪ್ರತಿ ಕೆ.ಜಿಗೆ ₹120 ದರದಲ್ಲಿ ಟೊಮೆಟೊ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಹೆಚ್ಚುತ್ತಿರುವ ಟೊಮೆಟೊ ಬೆಲೆಯಿಂದ ಜೇಬಿಗೆ ಕತ್ತರಿ ಬೀಳುವುದರ ಜೊತೆಗೆ ಜನಸಾಮಾನ್ಯರ ಬಾಂಧವ್ಯವೂ ಹಳಸಲು ಆರಂಭಿಸಿದೆ.
ಇದನ್ನೂ ಓದಿ: ಗ್ರೇಟರ್ ನೋಯ್ಡಾದ ಗ್ಯಾಲಕ್ಸಿ ಪ್ಲಾಜಾದಲ್ಲಿ ಅಗ್ನಿ ಅವಘಡ: ಕಟ್ಟಡದ ಮೂರನೇ ಅಂತಸ್ತಿನಿಂದ ಜಿಗಿದ ಇಬ್ಬರು ಸೇಫ್