ಚೆನ್ನೈ (ತಮಿಳುನಾಡು): ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮಿಳುನಾಡಿನ ಚೆನ್ನೈನಲ್ಲಿ ಉಬರ್ ಆಟೋ ಚಾಲಕನನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್ 25ರಂದು ರಾತ್ರಿ ಸಂತ್ರಸ್ತೆಯು ತನ್ನ ಸ್ನೇಹಿತೆಯೊಂದಿಗೆ ಇಸಿಆರ್ (ಈಸ್ಟ್ ಕೋಸ್ಟ್ ರೋಡ್)ನಿಂದ ತಾವು ತಂಗಿರುವ ಹೋಟೆಲ್‌ಗೆ ಪ್ರಯಾಣಿಸಿದ್ದರು. ಆದರೆ, ಡ್ರಾಪ್ ಪಾಯಿಂಟ್ನಲ್ಲಿ ಆಟೋ ಚಾಲಕ ಅನುಚಿತವಾಗಿ ವರ್ತಿಸಿ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.
ಅಲ್ಲದೇ, ಈ ಬಗ್ಗೆ ಟ್ವಿಟರ್ನಲ್ಲಿ ಆರೋಪಿ ಆಟೋ ಚಾಲಕನ ಫೋಟೋ ಸಮೇತವಾಗಿ ವಿದ್ಯಾರ್ಥಿನಿ ಗ್ರೇಟರ್ ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಅಂತೆಯೇ, ಚೆಮ್ಮಂಚೇರಿ ಠಾಣೆ ಪೊಲೀಸರು ಇಲ್ಲಿನ ಪಾಲವಕ್ಕಂ ಪ್ರದೇಶದ ಸೆಲ್ವಂ (40) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು, ಸಂತ್ರಸ್ತೆ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಉಬರ್ ಸಂಸ್ಥೆ ಕೂಡ ಹೆಚ್ಚಿನ ಮಾಹಿತಿಯನ್ನು ನೀಡುವಂತೆ ಕೋರಿದೆ.
ಇದನ್ನೂ ಓದಿ: ವಾಮಾಚಾರ ಮಾಡಿದ ಅತ್ತೆ ಕೊಚ್ಚಿ ಕೊಂದ ಸೋದರಳಿಯ.. ಹೀಗೊಂದು ಭೀಕರ ಹತ್ಯೆ