ETV Bharat / bharat

ಉತ್ತರಪ್ರದೇಶ ಇಕ್ಕಟ್ಟಿಗೆ ದೂಡಿದ ಕೊರೊನಾ:ಆಕ್ಸಿಜನ್​ ಪೂರೈಸಲು ಯೋಗಿ ಸರ್ಕಾರದ ಹರಸಾಹಸ - oxygen backups in hospital

ಕಳೆದ ವರ್ಷ ಏಕಾಏಕಿ ಎದುರಾದ ಕೊರೊನಾ ಮೊದಲ ಅಲೆಯ ಬಿಕ್ಕಟ್ಟಿನಿಂದಲೇ ಜನರು ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ, ಈ ಮಧ್ಯೆ ಕೊರೊನಾ 2ನೇ ಅಲೆ ಬಂದು ಅಪ್ಪಳಿಸಿದ್ದು, ಇಡೀ ರಾಷ್ಟ್ರವನ್ನು ಕಂಗೆಡೆಸಿದೆ. ಕೋವಿಡ್​-19 ವೈರಸ್​​ನ ಎರಡನೇ ಅಲೆಯು ಹೆಚ್ಚು ಅಪಾಯಕಾರಿ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅದು ಈಗಾಗಲೇ ಜನರ ಅನುಭವಕ್ಕೆ ಬಂದಿದೆ ಕೂಡ.

Severe oxygen crunch leaves UP on edge
ಆಕ್ಸಿಜನ್ ಪೂರೈಕೆ ಕೊರತೆ
author img

By

Published : Apr 20, 2021, 6:10 AM IST

ಲಖನೌ:ಉತ್ತರ ಪ್ರದೇಶದಲ್ಲಿ ರಾಕೆಟ್​ ವೇಗದಲ್ಲಿ ಕೊರೊನಾ ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯಾದ್ಯಂತ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಯುಪಿ ಸರ್ಕಾರದ ದೊಡ್ಡ ಸವಾಲು ಆಮ್ಲಜನಕವನ್ನು ಪೂರೈಸುವುದು. ಜನರ ಜೀವ ಉಳಿಸಲು ಆಕ್ಸಿಜನ್​ ಅತ್ಯಗತ್ಯ, ಇದು ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸುಲಭವಾಗಿ ಲಭ್ಯವಿದೆಯಾದರೂ ಜನರು ಆಕ್ಸಿಜನ್​ ಸಿಲಿಂಡರ್​ಗಳಿಗಾಗಿ ಒಂದೆಡೆಯಿಂದ ಮತ್ತೊಂದು ಕಡೆಗೆ ಅಲೆದಾಡುತ್ತಿದ್ದಾರೆ. ಅಕ್ರಮ ಆಕ್ಸಿಜನ್​ ಮಾರಾಟಗಾರರು ಈ ಪರಿಸ್ಥಿಯ ಲಾಭ ಪಡೆದು ದುಡ್ಡು ಮಾಡುತ್ತಿದ್ದಾರೆ. ಸರ್ಕಾರ ಏನನ್ನೂ ಮಾಡದ ಸ್ಥಿತಿಯಲ್ಲಿದೆ. ಹೀಗಾಗಿ ನಿಗದಿತ ಬೆಲೆಗಳಿಗಿಂತ ಹೆಚ್ಚಿನ ಬೆಲೆಗೆ ಜನರು ಮಾರುಕಟ್ಟೆಯಿಂದ ಆಮ್ಲಜನಕದ ಸಿಲಿಂಡರ್‌ಗಳನ್ನು ಖರೀದಿಸುತ್ತಿದ್ದಾರೆ.

ಕೊರೊನಾ ಸೋಂಕಿತರ ಪ್ರಮಾಣ ನಿರೀಕ್ಷೆ ಮೀರಿ ಹೆಚ್ಚುತ್ತಿದ್ದು, ರಾಜ್ಯದ ಆರೋಗ್ಯ ವ್ಯವಸ್ಥೆಗಳು ಸಂಪೂರ್ಣವಾಗಿ ಅಸಹಾಯಕವಾಗಿವೆ. ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಎಲ್ಲ ಆಸ್ಪತ್ರೆಗಳು ಕಿಕ್ಕಿರಿದು ತುಂಬಿವೆ. ಹೀಗಾಗಿ ಹೊಸ ರೋಗಿಗಳನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಯಲ್ಲಿ ಬೆಡ್​ಗಳು ಖಾಲಿ ಇಲ್ಲ. ಆಸ್ಪತ್ರೆಯಲ್ಲಿ ನೋಡಿದಲ್ಲೆಲ್ಲಾ ಆಮ್ಲಜನಕ ಸಿಗದೇ ರೋಗಿಗಳು ಸಾಯುತ್ತಿರುವ ದೃಶ್ಯಗಳು ಗೋಚರಿಸುತ್ತಿವೆ. ಇದು ಕೇವಲ ರಾಜಧಾನಿ ಲಖನೌದ ದುಃಸ್ಥಿತಿಯಲ್ಲ, ಇಡೀ ರಾಜ್ಯದಲ್ಲಿ ಇಂಥದ್ದೇ ಸನ್ನಿವೇಶ ಎದುರಾಗಿದೆ. ಕೋವಿಡ್ -19 ವಿರುದ್ಧದ ಯುದ್ಧದಲ್ಲಿ ಸೋತ ರೋಗಿಗಳು ಮತ್ತು ಅವರ ದುಃಖಿತ ಪ್ರೀತಿಪಾತ್ರರ, ಆಪ್ತರ ಕಿರುಚಾಟ, ಕಣ್ಣೀರು ರಾಜ್ಯದ ಆರೋಗ್ಯ ವ್ಯವಸ್ಥೆಯ ಹಾಗೂ ಸರ್ಕಾರದ ಆರೋಗ್ಯ ಸ್ಥಿತಿ ಹದಗೆಟ್ಟಿರುವುದನ್ನು ಸೂಚಿಸುತ್ತಿದೆ. ಹೆಚ್ಚುತ್ತಿರುವ ಸೋಂಕು ಪ್ರಕರಣಗಳಿಗೆ ಜನರ ನಿರ್ಲಕ್ಷ್ಯವೂ ಕಾರಣವಾಗಿದ್ದರೂ, ಸರ್ಕಾರದ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಇತ್ತ ಜನ ವೈದ್ಯಕೀಯ ನೆರವಿಗಾಗಿ ಅಂಗಾಲಾಚುತ್ತಿದ್ದರೆ, ಅತ್ತ ಇಡೀ ಮತ್ರಿಮಂಡಲ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಐದು ರಾಜ್ಯಗಳಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತವಾಗಿದೆ.

Severe oxygen crunch leaves UP on edge
ಆಕ್ಸಿಜನ್ ಪೂರೈಕೆ ಕೊರತೆ

ಲಖನೌದಲ್ಲಿ ಎದುರಾಗಿದೆ ಆಕ್ಸಿಜನ್​ ಬಿಕ್ಕಟ್ಟು:

ರಾಜಧಾನಿಯಲ್ಲಿ ಕೊರೊನಾದ ಭೀಕರತೆ ದಿನದಿಂದ ದಿನಕ್ಕೆ ನಡುಕ ಹುಟ್ಟಿಸುತ್ತಿದೆ. ಕೋವಿಡ್​ ಆಸ್ಪತ್ರೆಗಳ ಎಲ್ಲಾ ಬೆಡ್​ಗಳು ಬಹುತೇಕ ಫುಲ್​ ಆಗಿವೆ. ಅಲ್ಲದೇ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಮತ್ತು ಆಮ್ಲಜನಕದ ಕೊರತೆಯಿಂದಾಗಿ, ಮನೆಯಲ್ಲೇ ಐಸೋಲೇಶನ್​ಗೆ ಒಳಗಾಗಿರುವ ಸೋಂಕಿತರ ಆರೋಗ್ಯವೂ ಕ್ಷೀಣಿಸುತ್ತಿದೆ. ನಗರದ ಆಮ್ಲಜನಕ ಸ್ಥಾವರ ಪ್ರತಿದಿನ 4,500 ಸಿಲಿಂಡರ್‌ಗಳನ್ನು ತುಂಬುವ ಸಾಮರ್ಥ್ಯ ಹೊಂದಿದ್ದರೆ, ಸಿಲಿಂಡರ್​​ ಬೇಡಿಕೆ 5,500 ರಷ್ಟಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ ಲಖನೌ ನಗರ ಒಂದರಲ್ಲೇ 5,551 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 22 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ವಾರಾಣಸಿಯಲ್ಲಿ ಕೇವಲ ಶೇ.70 ರೋಗಿಗಳಿಗೆ ಮಾತ್ರ ಆಕ್ಸಿಜನ್ ಲಭ್ಯ:

ಕಳೆದ 24 ಗಂಟೆಗಳಲ್ಲಿ ವಾರಣಾಸಿಯಲ್ಲಿ 1,597 ಪಾಸಿಟಿವ್​ ಪ್ರಕರಣಗಳು ವರದಿಯಾಗಿವೆ. ಸೋಮವಾರ ಬೆಳಗ್ಗೆ 11 ಗಂಟೆಯೊಳಗಾಗಿ 1,148 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ, ಒಟ್ಟು ಸಕ್ರಿಯ ಕೋವಿಡ್​ ಪ್ರಕರಣಗಳ ಸಂಖ್ಯೆ 16,143 ಕ್ಕೆ ತಲುಪಿದೆ. ಭಾನುವಾರ ಒಂದೇ ದಿನ 10 ಜನ ಕೊರೊನಾಗೆ ಬಲಿಯಾಗಿದ್ದಾರೆ. ಈ ಮಧ್ಯೆ 2011 ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆಂದೇ ಕಾಯ್ದಿರಿಸಲಾಗಿದೆ. ಇವುಗಳಲ್ಲಿ 1,200 ಬೆಡ್​ಗಳು ಆಕ್ಸಿಜನ್​ ವ್ಯವಸ್ಥೆ ಹೊಂದಿವೆ. ಆದಾಗ್ಯೂ ಕೇವಲ 70 ಪ್ರತಿಶತ ರೋಗಿಗಳಿಗೆ ಮಾತ್ರ ಬೆಡ್​ ನೀಡಲು ಸಾಧ್ಯವಾಗುತ್ತಿದೆ. ಪ್ರಸ್ತುತ ಚಂದೌಲಿಯ ಆಮ್ಲಜನಕ ಘಟಕದಿಂದ ಆಕ್ಸಿಜನ್​ ಸರಬರಾಜಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಅಲ್ಲದೇ ಮಿರ್ಜಾಪುರ ಮತ್ತು ಮಧ್ಯಪ್ರದೇಶದ ರೇವಾದಲ್ಲಿರುವ ಹೊಸ ಆಮ್ಲಜನಕ ಸ್ಥಾವರಗಳಿಂದ ನಿತ್ಯ 200 ರಿಂದ 300 ಸಿಲಿಂಡರ್ ಸರಬರಾಜು ಮಾಡಲಾಗುತ್ತಿದೆ. ಸುತ್ತಮುತ್ತಲಿನ ಜಿಲ್ಲೆಗಳಿಂದ ನಿತ್ಯ 3,250 ಸಿಲಿಂಡರ್‌ಗಳಿಗೆ ಆರ್ಡರ್​ ಕೊಡಲಾಗಿದೆ.

ಮಥುರಾದಲ್ಲಿ ರೋಗಿಗಳಿಗೆ 600 ಬೆಡ್ ಮೀಸಲು:

ಮಥುರಾದಲ್ಲಿ ಸಹ ಸೋಂಕಿತರ ಸಂಖ್ಯೆ ಏರುಮುಖವಾಗಿದೆ. ಕಳೆದ 24 ಗಂಟೆಗಳಲ್ಲಿ, 454 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದರೆ, ಇಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ 133 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ರೋಗಿಗಳಿಗೆ 600 ಹಾಸಿಗೆಗಳನ್ನು ಕಾಯ್ದಿರಿಸಿದೆ. ಜಿಲ್ಲೆಯಲ್ಲಿ ಪ್ರತಿದಿನ 18 ರಿಂದ 20 ಸಿಲಿಂಡರ್ ಆಮ್ಲಜನಕವನ್ನು ಸೋಂಕಿತರಿಗೆ ಪೂರೈಸಲಾಗುತ್ತಿದೆ.

ವೈದ್ಯಕೀಯ ಕಿಟ್‌ಗಳ ಕೊರತೆಯನ್ನು ಪರೀಕ್ಷಿಸಲು ಸಿಎಂ ಯೋಗಿ ಸೂಚನೆ:

ಮನೆಯಲ್ಲಿಯೇ ಐಸೋಲೇಶನ್​ಗೆ ಒಳಗಾಗಿರುವ ರೋಗಿಗಳಿಗೆ ಯಾವುದೇ ಜೀವರಕ್ಷಕ ಔಷಧಗಳ ಅಥವಾ ವೈದ್ಯಕೀಯ ಕಿಟ್‌ಗಳ ಕೊರತೆ ಇರಬಾರದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಹೇಳಿದ್ದಾರೆ. ರೆಮ್ಡೆ‌ಸಿವಿರ್​​ನ ಅಂದಾಜು ಬೇಡಿಕೆಯನ್ನು ಕಂಪನಿಗಳಿಗೆ ಕಳುಹಿಸಬೇಕು. ಹಾಗೆಯೇ ಔಷಧಗಳ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಬಾರದು ಎಂಬುದನ್ನು ಸಹ ನೆನಪಿನಲ್ಲಿಡಬೇಕು ಎಂದಿದ್ದಾರೆ.

ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬ್ಯಾಕಪ್:

ಹೆಚ್ಚುತ್ತಿರುವ ಸೋಂಕು ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂದಿನ 15 ದಿನಗಳ ನಿರೀಕ್ಷಿತ ಬೇಡಿಕೆಗೆ ಅನುಗುಣವಾಗಿ ಆಮ್ಲಜನಕದ ಸಂಗ್ರಹವನ್ನು ನಿರ್ವಹಿಸಲು ಸೂಚನೆ ನೀಡಿದ್ದಾರೆ. ಪ್ರತೀ ಆಸ್ಪತ್ರೆಯಲ್ಲಿ ಕನಿಷ್ಠ 36 ಗಂಟೆಗಳ ಆಮ್ಲಜನಕದ ಬ್ಯಾಕಪ್ ಇರಬೇಕು ಎಂದು ಸೂಚಿಸಿದ್ದಾರೆ. ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಲು ಯಾವುದೇ ವಿಳಂಬ ಮಾಡಬಾರದು ಎಂದೂ ಆದಿತ್ಯನಾಥ್​ ಹೇಳಿದ್ದಾರೆ.

24 ಗಂಟೆಗಳಲ್ಲಿ 129 ಸಾವುಗಳು,30,596 ಹೊಸ ಪ್ರಕರಣಗಳು:

ಇಲ್ಲಿಯವರೆಗೆ ಹೋಲಿಸಿದರೆ, ರಾಜ್ಯದಲ್ಲಿ ಭಾನುವಾರ ಗರಿಷ್ಠ ಸಂಖ್ಯೆಯ ಸೋಂಕಿತರು ಪತ್ತೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 30,596 ಹೊಸ ಪಾಸಿಟಿವ್​ ಕೇಸ್​ಗಳು ಪತ್ತೆಯಾಗಿದ್ದರೆ, 129 ಸೋಂಕಿತರು ಸಾವನ್ನಪ್ಪಿದ್ದಾರೆ. ಇದೇ ವೇಳೆ, 9041 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗಳಿಗೆ ಮರಳಿದ್ದಾರೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣ ಭಾನುವಾರ 12.93 ಕ್ಕೆ ತಲುಪಿದೆ. ಏಪ್ರಿಲ್​ 14 ರಂದು ಈ ಪ್ರಮಾಣ 9.76 ರಷ್ಟಿತ್ತು. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 2,36,492 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ, ಒಟ್ಟು 3,82,66,474 ಮಾದರಿಗಳನ್ನು ಈವರೆಗೆ ತನಿಖೆ ಮಾಡಲಾಗಿದೆ.

ದೇಶದಲ್ಲಿ 24 ಗಂಟೆಗಳಲ್ಲಿ 2.73 ಮಂದಿಗೆ ಸೋಂಕು:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್​ ಸೋಂಕಿಗೆ ಒಳಗಾದವರ ಅಂಕಿ- ಅಂಶಗಳನ್ನು ನೋಡುವುದಾದರೆ, ಭಾರತದಲ್ಲಿ 2,73,810 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ, ದೇಶದಲ್ಲಿ ಈವರೆಗೆ ಒಟ್ಟು 1,50,61,919 ಕೋವಿಡ್​ ಪ್ರಕರಣಗಳು ಪತ್ತೆಯಾಗಿವೆ.ಇದೇ ವೇಳೆ 24 ಗಂಟೆಗಳಲ್ಲಿ 1,619 ಸಾವುಗಳು ಸೇರಿದಂತೆ ಒಟ್ಟು ದೇಶದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 1,78,769 ಕ್ಕೆ ಏರಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 19,29,329 ಆಗಿದ್ದರೆ, ಗುಣಮುಖರಾದವರ ಸಂಖ್ಯೆ 1,29,53,821 ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.