ETV Bharat / bharat

ಹಕ್ಕಿ ಜ್ವರ ಭೀತಿ: ದೇಶಾದ್ಯಂತ ಸಾವಿರಾರು ಪಕ್ಷಿಗಳು ಬಲಿ, ಮುನ್ನೆಚ್ಚರಿಕೆಗೆ ಸೂಚನೆ

author img

By

Published : Jan 6, 2021, 10:43 AM IST

ಕೇರಳದಲ್ಲಿ, ಕುಟ್ಟನಾಡ್ ಪ್ರದೇಶದ ಬಾತುಕೋಳಿಗಳಲ್ಲಿ H5N8 ಪತ್ತೆಯಾದ ನಂತರ, ಅಧಿಕಾರಿಗಳು ಮಂಗಳವಾರ ಸೋಂಕಿತ ಪ್ರದೇಶಗಳ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಪಕ್ಷಿಗಳನ್ನು ಕೊಲ್ಲಲು ಪ್ರಾರಂಭಿಸಿದರು.

several-states-on-alert-as-fear-of-bird-flu-grows
ಹಕ್ಕಿ ಜ್ವರ ಭೀತಿ

ನವದೆಹಲಿ: ಕೊರೊನಾಗೆ ಲಸಿಕೆ ಸಿಕ್ಕಿತು ಎಂದು ನಿಟ್ಟುಸಿರು ಬಿಡುವ ಮೊದಲೇ ದೇಶದಲ್ಲೆಡೆ ಹಕ್ಕಿ ಜ್ವರ ಕಾಣಿಸಿಕೊಂಡಿರುವುದು ಆತಂಕ ಹೆಚ್ಚಿಸಿದೆ. ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸಾವಿರಾರು ಪಕ್ಷಿಗಳು ಬಲಿಯಾಗಿವೆ.

ಇಂದೋರ್ ಸೇರಿದಂತೆ ಹಲವೆಡೆ ಕಾಗೆಗಳು ಹಠಾತ್ತನೆ ಸಾಯುತ್ತಿದ್ದು, ಮಧ್ಯಪ್ರದೇಶ ಹಾಗೂ ಕೇರಳ ರಾಜ್ಯಗಳಲ್ಲಿ ಹಕ್ಕಿ ಜ್ವರ ವಿಪತ್ತು ಘೋಷಿಸಲಾಗಿದೆ. ಮಧ್ಯ ಪ್ರದೇಶದಲ್ಲಿ 376ಕ್ಕೂ ಹೆಚ್ಚು ಕಾಗೆಗಳು ಸತ್ತಿವೆ. ಸತ್ತ ಕಾಗೆಗಳ ಮಾದರಿ ಪರೀಕ್ಷೆಯಲ್ಲಿ H5N8 ವೈರಸ್ ಪತ್ತೆಯಾಗಿದೆ ಎಂದು ಎನ್‌ಐಎಚ್‌ಎಸ್‌ಎಡಿ ವರದಿ ಮಾಡಿದೆ. ಇಂದೋರ್‌ನಲ್ಲಿ ಕ್ಷಿಪ್ರ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ತ್ವರಿತ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ರಾಜಸ್ಥಾನದಲ್ಲೂ 600ಕ್ಕೂ ಹೆಚ್ಚು ಹಕ್ಕಿಗಳು ಮೃತಪಟ್ಟಿವೆ. ಹಿಮಾಚಲ ಪ್ರದೇಶದಲ್ಲಿ ಪಾಂಗ್ ಅಣೆಕಟ್ಟು ನದಿಯ ಸುತ್ತುಮುತ್ತ ಅಳಿವಿನ ಅಂಚಿನಲ್ಲಿರುವ ಪ್ರಭೇದದ ಪಕ್ಷಿಗಳು ಹಾಗೂ ಇತರ ಹಕ್ಕಿಗಳು ಸೇರಿ ಸುಮಾರು 2000ಕ್ಕೂ ಹೆಚ್ಚು ವಲಸೆ ಹಕ್ಕಿಗಳು ಅಸು ನೀಗಿವೆ.

ಇದನ್ನೂ ಓದಿ: ಹಕ್ಕಿಜ್ವರ ತಡೆಗೆ ಮೈಸೂರು ಅರಣ್ಯ ಇಲಾಖೆಯಿಂದ ಅಲರ್ಟ್​​​

ಪಕ್ಷಿ ಜ್ವರ ಹರಡುವ ಭೀತಿ ಹೆಚ್ಚಾಗುತ್ತಿದ್ದಂತೆ ಕೇರಳದ ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಪಶುಸಂಗೋಪನೆ ಮತ್ತು ಅರಣ್ಯ ಇಲಾಖೆಗಳು ಅಲರ್ಟ್​ ಆಗಿವೆ. ಹರಿಯಾಣದಲ್ಲಿ, ಕಳೆದ 10 ದಿನಗಳಲ್ಲಿ ನಾಲ್ಕು ಲಕ್ಷ ಕೋಳಿಗಳು ಸತ್ತಿರುವ ಬಗ್ಗೆ ವರದಿಯಾಗಿದೆ. ಆದರೆ ಅವು H5N8 ನಿಂದ ಸತ್ತಿವೆಯೇ ಎಂಬ ಬಗ್ಗೆ ಯಾವುದೇ ದೃಢೀಕರಣವಿಲ್ಲ.

ಕೇರಳದಲ್ಲಿ, ಕುಟ್ಟನಾಡ್ ಪ್ರದೇಶದ ಬಾತುಕೋಳಿಗಳಲ್ಲಿ H5N8 ಪತ್ತೆಯಾದ ನಂತರ, ಅಧಿಕಾರಿಗಳು ಮಂಗಳವಾರ ಸೋಂಕಿತ ಪ್ರದೇಶಗಳ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಪಕ್ಷಿಗಳನ್ನು ಕೊಲ್ಲಲು ಪ್ರಾರಂಭಿಸಿದರು. ಕೇರಳದಿಂದ ಕೋಳಿಗಳು ರಾಜ್ಯಕ್ಕೆ ಬರದಂತೆ ತಮಿಳುನಾಡು ಸರ್ಕಾರ ಎಲ್ಲಾ ಚೆಕ್ ಪೋಸ್ಟ್‌ಗಳಲ್ಲಿ ನಿಗಾವಹಿಸಿದೆ. ಕೋಳಿ, ಬಾತುಕೋಳಿಗಳು ಮತ್ತು ಮೊಟ್ಟೆಗಳನ್ನು ಸಾಗಿಸುವ ವಾಹನಗಳನ್ನು ತಡೆಯಲು ಪುಲಿಯರೈ ಗಡಿಯಲ್ಲಿ ಪಶುಸಂಗೋಪನಾ ವಿಭಾಗದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಮುಖ ಕೋಳಿ ಕೇಂದ್ರವಾದ ನಮಕ್ಕಲ್‌ನಲ್ಲಿರುವ ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ಪಶುಸಂಗೋಪನಾ ಇಲಾಖೆ ಸಲಹೆ ನೀಡಿದೆ.

ಪಂಜಾಬ್ ಆರೋಗ್ಯ ಸಚಿವ ಸಿಧು, ರಾಜ್ಯದಲ್ಲಿ ಈವರೆಗೆ ಯಾವುದೇ ಪ್ರಕರಣಗಳು ವರದಿಯಾಗಿಲ್ಲವಾದರೂ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರದ ಅಟ್ಟಹಾಸಕ್ಕೆ ಸಾವಿರಾರು ಪಕ್ಷಿಗಳು ಬಲಿ.. 'ವಿಪತ್ತು' ಎಂದು ಘೋಷಿಸಿದ ಕೇರಳ

ಕೇಂದ್ರ ಸರ್ಕಾರ ಸೂಚನೆ: ಹಿಮಾಚಲ ಪ್ರದೇಶ, ರಾಜಸ್ಥಾನ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ವಹಿಸುವಂತೆ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ. ಮಾನವರು ಸೇರಿದಂತೆ ಇತರೆ ಪ್ರಾಣಿ-ಪಕ್ಷಿಗಳಿಗೂ ಹಕ್ಕಿ ಜ್ವರ ಹರಡುವ ಭೀತಿಯಿರುವ ಹಿನ್ನೆಲೆ ಎಚ್ಚರಿಕೆ ವಹಿಸುವಂತೆ ಹೇಳಿದೆ. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ತುರ್ತಾಗಿ ಕ್ರಮ ಕೈಗೊಳ್ಳುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ರವಾನಿಸಿದೆ. ಕೇರಳದಲ್ಲಿ ಆಲಪ್ಪುಳ ಜಿಲ್ಲೆಯಲ್ಲಿ ಹಕ್ಕಿ ಜ್ವರ ಅತಿ ಹೆಚ್ಚು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮಾಂಸ, ಮೀನು ಹಾಗೂ ಮೊಟ್ಟೆಗಳ ಮಾರಾಟ ಹಾಗೂ ಬಳಕೆಗೆ ನಿಷೇಧ ಆದೇಶ ಹೊರಡಿಸಲಾಗಿದೆ.

ಕರ್ನಾಟಕದಲ್ಲೂ ಕಟ್ಟೆಚ್ಚರ: ಹಕ್ಕಿ ಜ್ವರ ಭೀತಿ ಹಿನ್ನೆಲೆ ತಮಿಳುನಾಡು ಹಾಗೂ ಕರ್ನಾಟಕ ಗಡಿ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹಕ್ಕಿಗಳನ್ನು ಸಾಗಿಸುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಕೊಡಗು, ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಪಶುಸಂಗೋಪನಾ ಇಲಾಖೆ ನಿರ್ದೇಶನ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.