ETV Bharat / bharat

73ನೇ ಗಣರಾಜ್ಯೋತ್ಸವ ಸಂಭ್ರಮ: ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ 'ಗಣತಂತ್ರ ದಿನ'

73rd Republic Day celebrations: ದೆಹಲಿಯಲ್ಲಿ ನಡೆಯಲಿರುವ 73ನೇ ಗಣರಾಜ್ಯೋತ್ಸವ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದ್ದು, ಈ ಹಿಂದೆ ನಡೆಯದ ಅನೇಕ ವಿಭಿನ್ನ ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.

73rd Republic Day celebrations
73rd Republic Day celebrations
author img

By

Published : Jan 25, 2022, 9:26 PM IST

Updated : Jan 26, 2022, 8:50 AM IST

ನವದೆಹಲಿ: ಮಹಾಮಾರಿ ಕೊರೊನಾ ನಡುವೆ ಕೂಡ 73ನೇ ಗಣರಾಜ್ಯೋತ್ಸವ ಆಚರಣೆಗೆ ಇಡೀ ದೇಶ ಸಂಪೂರ್ಣವಾಗಿ ಸನ್ನದ್ಧವಾಗಿದೆ. ಈ ಸಲ ದೆಹಲಿಯಲ್ಲಿ ನಡೆಯುತ್ತಿರುವ ಗಣತಂತ್ರ ದಿನ ಈ ಹಿಂದೆದಿಗಿಂತಲೂ ವಿಭಿನ್ನವಾಗಿರಲಿದ್ದು, ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ.

ನವದೆಹಲಿಯ ರಾಜಪಥ್​ನಲ್ಲಿ ನಡೆಯಲಿರುವ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಶಹೀದೋಂ ಕೋ ಶತ ಶತ ನಮನ(Shaheedon Ko Shat Shat Naman) ಕಾರ್ಯಕ್ರಮ ಹೊಸದಾಗಿ ನಡೆಯಲಿದ್ದು, ರಾಷ್ಟ್ರೀಯ ಕೆಡೆಟ್​ ಕಾರ್ಪ್ಸ್‌ ಇದನ್ನ ನಡೆಸಿಕೊಡಲಿದೆ. ಇದರ ಜೊತೆಗೆ ಭಾರತೀಯ ವಾಯುಪಡೆಯ 75 ವಿಮಾನಗಳಿಂದ ವೈಮಾನಿಕ ಪ್ರದರ್ಶನ ನಡೆಯಲಿದೆ. ಪ್ರಮುಖವಾಗಿ ವಿವಿಧ ರಾಜ್ಯಗಳಿಂದ ಆಯ್ಕೆಯಾಗಿರುವ 480 ನೃತ್ಯಗಾರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಅನೇಕ ವಿಭಿನ್ನ ಕಾರ್ಯಕ್ರಮಗಳು ಜರುಗಲಿವೆ.

ರಾಜ್ಯೋತ್ಸವ ಪರೇಡ್​​ನಲ್ಲಿ ಬದಲಾವಣೆ.. ಪ್ರತಿ ವರ್ಷದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬೆಳಗ್ಗೆ 10 ಗಂಟೆಗೆ ಪರೇಡ್​ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಪರೇಡ್ ಕಾರ್ಯಕ್ರಮ 10:30ಕ್ಕೆ ಆರಂಭಗೊಳ್ಳಲಿದೆ.

ಇದನ್ನೂ ಓದಿರಿ: ಕಾರು ಖರೀದಿಗೆ ಹೋಗಿದ್ದ ತುಮಕೂರು ರೈತನಿಗೆ ಅವಮಾನ : ಟ್ವೀಟ್ ಮಾಡಿ ಆನಂದ್ ಮಹೀಂದ್ರಾ ಹೇಳಿದ್ರು ಈ ಮಾತು!

ಡಿಜಿಟಲ್​​ ನೋಂದಣಿ.. ದೇಶದಲ್ಲಿ ಕೋವಿಡ್​​ ಅಬ್ಬರ ಜೋರಾಗಿರುವ ಕಾರಣ ಈ ಸಲದ ಗಣರಾಜ್ಯೋತ್ಸವ ವೀಕ್ಷಣೆಗೆ ಆನ್​ಲೈನ್​ ವ್ಯವಸ್ಥೆ ಮಾಡಲಾಗಿದೆ. ರಾಜಪಥ್​​ನಲ್ಲಿ ನಡೆಯುವ ಗಣರಾಜ್ಯೋತ್ಸವ ವೀಕ್ಷಿಸಲು ಆಸನಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಮಾಡಲಾಗಿದ್ದು, ಆನ್​ಲೈನ್​ ಮೂಲಕ ಲೈವ್​ ವೀಕ್ಷಣೆ ಮಾಡಲು MyGov ಪೋರ್ಟಲ್​​ನಲ್ಲಿ ಹೆಸರು ನೋಂದಣಿ ಮಾಡಲು ಅವಕಾಶ ನೀಡಲಾಗಿದೆ.

ಕೋವಿಡ್ ಸುರಕ್ಷತೆಗೆ ಆದ್ಯತೆ.. ಪರೇಡ್​ನಲ್ಲಿ ಭಾಗಿಯಾಗಲಿರುವ ಎಲ್ಲರೂ ಕೋವಿಡ್​ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಎರಡು ಡೋಸ್ ಪಡೆದ ವಯಸ್ಕರು ಮತ್ತು ಒಂದು ಡೋಸ್​​ ಲಸಿಕೆ ಪಡೆದ 15 ವರ್ಷ ಮತ್ತು ಮೇಲ್ಪಟ್ಟ ಮಕ್ಕಳಿಗೆ ಮೆರವಣಿಗೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿದೆ. ಈ ಬಾರಿಯ ಗಣರಾಜ್ಯೋತ್ಸವ ಪರೇಡ್​​ನಲ್ಲಿ 15 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಿಗೆ ಅನುಮತಿ ನೀಡಿಲ್ಲ. ಪರೇಡ್ ವೇಳೆ ಸಾಮಾಜಿಕ ಅಂತರದೊಂದಿಗೆ ಎಲ್ಲ ಕೋವಿಡ್ ನಿಯಮ ಪಾಲನೆ ಮಾಡುವುದು ಹಾಗೂ ಮಾಸ್ಕ್​ ಬಳಕೆ ಕಡ್ಡಾಯವಾಗಿದೆ. ಯಾವುದೇ ವಿದೇಶಿ ತಂಡಕ್ಕೆ ಅವಕಾಶ ನೀಡಿಲ್ಲ.

ಶಹೀದೋಂ ಕೋ ಶತ ಶತ ನಮನ ಕಾರ್ಯಕ್ರಮ.. ಈ ಸಲದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೇಶ ರಕ್ಷಣೆಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೋಸ್ಕರ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಹೀದೋಂ ಕೋ ಶತ ಶತ ನಮನ ಎಂಬ ಶೀರ್ಷಿಕೆಯಡಿ ಎನ್​​ಸಿಸಿ ಕೆಡೆಟ್​​ಗಳಿಗೆ ಕೃತಜ್ಞತಾ ಫಲಕ ನೀಡಲಾಗುವುದು. ಇದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ.

ಕಲಾ ಕುಂಭ: ರಾಜಪಥದಲ್ಲಿ ಸ್ಕ್ರಾಲ್​ ಪೇಂಟಿಂಗ್​.. ಮೆರವಣಿಗೆ ಸಂದರ್ಭದಲ್ಲಿ ರಾಜಪಥದ ರಸ್ತೆ ಉದ್ದಕ್ಕೂ ಕಲಾ ಕುಂಭ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಕೇಂದ್ರ ರಕ್ಷಣಾ ಮತ್ತು ಸಂಸ್ಕೃತಿ ಸಚಿವಾಲಯ ಜಂಟಿಯಾಗಿ ಈ ಕಾರ್ಯಕ್ರಮ ಸಿದ್ಧಪಡಿಸಿವೆ. ಪೇಂಟಿಂಗ್​​ನಲ್ಲಿ 600ಕ್ಕೂ ಅಧಿಕ ಹೆಸರಾಂತ ಕಲಾವಿದರು ಮತ್ತು ದೇಶದ ಯುವ ಪ್ರತಿಭೆಗಳ ಚಿತ್ರ ಬಿಡಿಸಲಾಗಿದೆ. ಇದರಲ್ಲಿ ಭಾರತೀಯ ಸಾಂಸ್ಕೃತಿಕ ಪರಂಪರೆ ಸಹ ಅನಾವರಣಗೊಳ್ಳಲಿದೆ.

ವಂದೇ ಭಾರತಂ ನೃತ್ಯ ಉತ್ಸವ.. ಗಣರಾಜ್ಯೋತ್ಸವದಲ್ಲಿ ಇದೇ ಮೊದಲ ಬಾರಿಗೆ ವಿವಿಧ ರಾಜ್ಯದ 480 ನೃತ್ಯಗಾರರು ವಂದೇ ಭಾರತಂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕಾಗಿ ಕಳೆದ ಎರಡು ತಿಂಗಳಲ್ಲಿ ವಿವಿಧ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗಿತ್ತು. ಕೊನೆಯದಾಗಿ ಆಯ್ಕೆಯಾಗಿರುವ ಸ್ಪರ್ಧಿಗಳು ಪರೇಡ್​ನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಿದ್ದಾರೆ.

ವೀರ ಗಾಥಾ: ಶಾಲಾ ಮಕ್ಕಳಿಂದ ಶೌರ್ಯದ ಕಥೆ.. ಕೇಂದ್ರ ರಕ್ಷಣಾ ಸಚಿವಾಲಯ ಹಾಗೂ ಶಿಕ್ಷಣ ಸಚಿವಾಲಯದ ಸಹಯೋಗದಿಂದ ಆಯೋಜನೆಗೊಂಡಿದ್ದ ವೀರ ಗಾಥಾ(ಕಥೆ) ಸ್ಪರ್ಧೆಯಲ್ಲಿ ಸುಮಾರು 4,800 ಶಾಲೆಗಳಿಂದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದರಲ್ಲಿ ಕವನ, ಪ್ರಬಂಧ, ರೇಖಾಚಿತ್ರ ಸೇರಿದಂತೆ ಅನೇಕ ಸ್ಫೂರ್ತಿದಾಯಕ ಕಥೆ ಬರೆದಿದ್ದರು. ಕೊನೆಯದಾಗಿ 25 ವಿಜೇತರಿಗೆ ಆಯ್ಕೆ ಮಾಡಲಾಗಿದ್ದು, ನಾಳೆ ನಡೆಯುವ ಗಣರಾಜ್ಯೋತ್ಸವದಲ್ಲಿ 10 ಸಾವಿರ ರೂ. ನಗದು ನೀಡಲಾಗುವುದು.

ಎಲ್​ಇಡಿ ಪರದೆ ಆಯೋಜನೆ.. ಗಣರಾಜ್ಯೋತ್ಸ ಕಾರ್ಯಕ್ರಮದಲ್ಲಿ 10ಕ್ಕೂ ಅಧಿಕ ಎಲ್​​ಇಡಿ ಪರದೆ ಆಯೋಜನೆ ಮಾಡಲಾಗಿದ್ದು, ಇದರ ಮೇಲೆ ವಿವಿಧ ರಾಷ್ಟ್ರ ಪ್ರೇಮ ಸಾರುವ ಸಿನಿಮಾ, ಸಶಸ್ತ್ರ ಪಡೆಗಳ ಕಿರುಚಿತ್ರ ಸೇರಿದಂತೆ ಮೆರವಣಿಗೆ ವಿಡಿಯೋ ಪ್ರದರ್ಶನಗೊಳ್ಳಲಿವೆ. ಇದರ ಜೊತೆಗೆ ಅನೇಕ ಡ್ರೋನ್​ಗಳಿಂದ ವಿಶೇಷ ಶೋ ನಡೆಯಲಿವೆ.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 26, 2022, 8:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.