ಪಾಣಿಪತ್ (ಹರಿಯಾಣ): ಮಕ್ಕಳು ಕೇವಲ ಮನರಂಜನೆಗಾಗಿ ಮೊಬೈಲ್ ಬಳಸುತ್ತಾರೆ ಎಂಬುದು ಪೋಷಕರ ತಪ್ಪು ಕಲ್ಪನೆ. ಮೊಬೈಲ್ ಬಳಕೆ ಮಕ್ಕಳ ಸಾವಿಗೂ ಕಾರಣವಾಗಬಹುದು ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ.
ಹರಿಯಾಣದ ಪಾಣಿಪತ್ ಜಿಲ್ಲೆಯ ದಹರ್ ಗ್ರಾಮದಲ್ಲಿ ವಾಸಿಸುವ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಮೊಬೈಲ್ನಲ್ಲಿ ವಿಡಿಯೋ ನೋಡಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು
ಈತ ಅಮ್ಮನ ಬಳಿ ಮೊಬೈಲ್ ಪಡೆದು ಮನೆಯ ಕೋಣೆಯೊಳಗೆ ಹೋಗಿದ್ದಾನೆ. 15 ನಿಮಿಷಗಳ ನಂತರ ತಾಯಿ ಕೋಣೆಯೊಳಗೆ ಹೋಗಿ ನೋಡಿದರೆ ಮಗ ನೇಣಿಗೆ ಶರಣಾಗಿದ್ದನು. ಮಗನನ್ನು ಶವವಾಗಿ ಕಂಡ ತಾಯಿ ಅಲ್ಲಿಯೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ನೆರೆಹೊರೆಯವರ ಸಹಾಯದಿಂದ ಮೃತದೇಹವನ್ನು ಕುಣಿಕೆಯಿಂದ ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಸ್ಥಳೀಯರು ಹೇಳುವ ಪ್ರಕಾರ ಕುಟುಂಬದಲ್ಲಿ ಜಗಳದಂತಹ ಯಾವುದೇ ಪರಿಸ್ಥಿತಿ ಇಲ್ಲ. ಹೀಗಾಗಿ ಇಷ್ಟು ಚಿಕ್ಕ ವಯಸ್ಸಿಗೆ ಬಾಲಕ ಯಾಕೆ ಈ ಹೆಜ್ಜೆ ಇಟ್ಟಿತು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ.