ಚಂಡೀಗಢ( ಪಂಜಾಬ್): ರೋಪರ್‌ನ 7 ವರ್ಷದ ಬಾಲಕಿಯೊಬ್ಬಳು ಜಗತ್ತಿನ ಅತಿ ಎತ್ತರದ ಶಿಖಿರ ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್ ಏರುವ ಮೂಲಕ ಸಾಧನೆ ಮಾಡಿದ್ದಾಳೆ. ಈ ಮೂಲಕ ಭಾರತದ ಕಿರಿಯ ಪರ್ವತಾರೋಹಿಗಳಲ್ಲಿ ಒಬ್ಬಳು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ರೋಪರ್ ನಿವಾಸಿಯಾಗಿರುವ ದೀಪಕ್ ಸೂದ್ ಅವರ ಪುತ್ರಿ ಸಾನ್ವಿ ಸೂದ್, ಮೌಂಟ್ ಎವರೆಸ್ಟ್‌ನಲ್ಲಿರುವ ಬೈನ್ಸ್ ಕ್ಯಾಂಪ್ ತಲುಪಿ ಭಾರತದ ಧ್ವಜಾರೋಹಣ ಮಾಡಿದ ದೇಶದ ಮೊದಲ ಕಿರಿಯ ಹುಡುಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ. ಚಳಿ ಮತ್ತು ಜೋರಾದ ಗಾಳಿಯನ್ನು ಸಹಿಸಿಕೊಂಡು 5,364 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಅನ್ನು ಕೇವಲ 9 ದಿನಗಳಲ್ಲಿ ಏರಿದ್ದಾಳೆ. ಅಷ್ಟೇ ಅಲ್ಲದೆ, ಈ ಮೌಂಟ್ ಎವರೆಸ್ಟ್ ಏರುವ ಪ್ರಯಾಣ ಯೋಜಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದಾಳಂತೆ.
ಮೊಳಕಾಲಿನ ಯಾದವೀಂದ್ರ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸಾನ್ವಿ ಸೂದ್, ಸಾಧನೆಗೆ ಕುಟುಂಬಸ್ಥರು ಸೇರಿದಂತೆ ರಾಜ್ಯದ ಜನೆತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಿದ ಮುಂಬೈನ 10 ವರ್ಷದ ಪೋರಿ!