ಚಂದ್ರಾಪುರ (ಮಹಾರಾಷ್ಟ್ರ) : ವಾಮಾಚಾರ ಮಾಡಿದ್ದಾರೆಂದು ಶಂಕಿಸಿ ಮಹಿಳೆಯರು, ವೃದ್ಧರು ಸೇರಿ ದಲಿತ ಸಮುದಾಯದ ಒಟ್ಟು ಏಳು ಮಂದಿಯನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಚಂದ್ರಾಪುರದ ಜೀವಿಟಿ ತಾಲೂಕಿನ ವಾನಿ ಬುದ್ರುಕ್ ಎಂಬ ಗ್ರಾಮದಲ್ಲಿ ನಡೆದಿದೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಾಯಗೊಂಡ ಏಳು ಜನರನ್ನೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜೀವಿಟಿ ಪೊಲೀಸರು ಸಂತ್ರಸ್ತರ ಹೇಳಿಕೆಯ ಆಧಾರದ ಮೇಲೆ 13 ಜನರನ್ನ ಬಂಧಿಸಿದ್ದಾರೆ.

ಇದನ್ನೂ ಓದಿ: ಶವವಾಗಿ ಪತ್ತೆಯಾದ 24 ವರ್ಷದ ನಟಿ.. ಇದು ಆತ್ಮಹತ್ಯೆಯೋ? ಕೊಲೆಯೋ!
ಇನ್ನು, ಆರೋಪಿಗಳು ಕೂಡ ದಲಿತರೇ ಆಗಿದ್ದಾರೆ. ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ.