ತಿರುಪತ್ತೂರು, ತಮಿಳುನಾಡು: ಆಹಾರ ಹುಡುಕಿಕೊಂಡು ಬಂದ ನವಿಲುಗಳಿಗೆ ವ್ಯಕ್ತಿಯೋರ್ವ ವಿಷವಿಟ್ಟು ಕೊಂದ ಘಟನೆ ತಮಿಳುನಾಡಿನ ತಿರುಪತ್ತೂರು ಬಳಿ ನಡೆದಿದ್ದು, ಪೊಲೀಸರು ವ್ಯಕ್ತಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಇರುನಪಟ್ಟು ಗ್ರಾಮದವನಾದ ಮೇಘನಾಥನ್ (38) ಬಂಧಿತ ವ್ಯಕ್ತಿಯಾಗಿದ್ದು, ತಮ್ಮ ಎರಡು ಎಕರೆ ಜಮೀನಿಗೆ ಆಹಾರ ಅರಸಿ ಬಂದಿದ್ದ ಏಳು ನವಿಲುಗಳಿಗೆ ವಿಷಪೂರಿತ ಆಹಾರ ನೀಡಿ ಕೊಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೇಘನಾಥನ್ ನವಿಲುಗಳ ಕಾಟ ತಪ್ಪಿಸಲು ಇಲಿ ಪಾಷಾಣ ಬೆರೆಸಿದ ಕಾಳುಗಳನ್ನು ಜಮೀನನಲ್ಲಿ ಚೆಲ್ಲಿದ್ದು, ಈ ಕಾಳುಗಳನ್ನು ತಿಂದ ನವಿಲುಗಳು ಸಾವನ್ನಪ್ಪಿದ್ದವು. ಈ ಬಗ್ಗೆ ಅಕ್ಕಪಕ್ಕದವರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವೆಲ್ಲೂರು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ರಾಷ್ಟ್ರೀಯ ಪಕ್ಷಿಯಾದ ನವಿಲನ್ನು ಕೊಂದವರು 7 ವರ್ಷಗಳ ಕಾಲ ಜೈಲುವಾಸ ಅನುಭವಿಸುತ್ತಾರೆ ಎಂದು ಅರಣ್ಯಾಧಿಕಾರಿಯೊಬ್ಬರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ದಲಿತ ಯುವಕನ ಅಪಹರಣ: ಬಲವಂತವಾಗಿ ಮದ್ಯ, ಮೂತ್ರ ಕುಡಿಸಿ ದುಷ್ಕರ್ಮಿಗಳಿಂದ ಹಲ್ಲೆ