ETV Bharat / bharat

ವಡೋದರಾ ರಸ್ತೆ ಅಪಘಾತ... ಸಾವಿನ ಸಂಖ್ಯೆ 11ಕ್ಕೆ ಏರಿಕೆ! - ವಡೋದರಾ ರಸ್ತೆ ಅಪಘಾತ,

9 people killed, 9 people killed in road accident, 9 people killed in road accident at Vadodara, Vadodara road accident, Vadodara raod accident news, 9 ಜನ ಸಾವು, ರಸ್ತೆ ಅಪಘಾತದಲ್ಲಿ 9 ಜನ ಸಾವು, ವಡೋದರದಲ್ಲಿ ರಸ್ತೆ ಅಪಘಾತದಲ್ಲಿ 9 ಜನ ಸಾವು, ವಡೋದರಾ ರಸ್ತೆ ಅಪಘಾತ, ವಡೋದರಾ ರಸ್ತೆ ಅಪಘಾತ ಸುದ್ದಿ,
ಸ್ಥಳದಲ್ಲೇ 9 ಜನರ ದುರ್ಮರಣ
author img

By

Published : Nov 18, 2020, 7:29 AM IST

Updated : Nov 18, 2020, 10:29 AM IST

07:26 November 18

ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 11 ಜನ ಸಾವನ್ನಪ್ಪಿರುವ ಘಟನೆ ಗುಜರಾತ್​ನ ವಡೋದರ ಜಿಲ್ಲೆಯಲ್ಲಿ ಸಂಭವಿಸಿದೆ.

ಅಪಘಾತದ ಬಗ್ಗೆ ಮಾಹಿತಿ ನೀಡಿದ ವಡೋದರಾ ಜಿಲ್ಲಾಧಿಕಾರಿ

ವಡೋದರಾ: ಟೆಂಪೋ ಮತ್ತು ಡಂಪರ್​ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ 11 ಜನ ಸಾವನ್ನಪ್ಪಿರುವ ಘಟನೆ ಇಲ್ಲಿನ ವಾಘೋಡಿಯಾ ಕ್ರಾಸ್​ ಬಳಿ ನಡೆದಿದೆ.  

ಧಾರ್ಮಿಕ ಕ್ಷೇತ್ರವಾದ ಸೂರತ್​ನ ಪಾವ್​ಗಢದಿಂದ ಟೆಂಪೋ ವಡೋದರಾ ಬಳಿ ಬರುತ್ತಿತ್ತು. ವಾಘೋಡಿಯಾ ಹೆದ್ದಾರಿ ಬಳಿ ಕ್ರಾಸ್ ಮಾಡುತ್ತಿದ್ದ ವೇಳೆ ಡಂಪರ್​ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಎರಡು ವಾಹನಗಳು ಜಖಂಗೊಂಡಿದ್ದು, ಸ್ಥಳದಲ್ಲೇ ಏಳು ಜನ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಾಲ್ವರು ಸೇರಿ ಒಟ್ಟು 11 ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 13ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಇದರಲ್ಲಿ 7ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿದೆ. 

ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ವಡೋದರಾ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.  

ವಡೋದರಾ ಜಿಲ್ಲಾಧಿಕಾರಿ ಶಾಲನಿ ಅಗರ್​ವಾಲ್ ಪೊಲೀಸ್​ ಅಧಿಕಾರಿಗಳೊಂದಿಗೆ​ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದರು.  

ಈ ಘಟನೆ ಕುರಿತು ವಡೋದರಾ ಹೆದ್ದಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Last Updated : Nov 18, 2020, 10:29 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.