ETV Bharat / bharat

ಅಯೋಧ್ಯೆ: ಶ್ರೀರಾಮ ಪ್ರಾಣ ಪ್ರತಿಷ್ಠೆಯ 7 ದಿನಗಳ ಧಾರ್ಮಿಕ ವಿಧಿ ಇಂದಿನಿಂದ ಆರಂಭ - ಅಯೋಧ್ಯೆ ರಾಮಮಂದಿರ

ಅಯೋಧ್ಯೆ ರಾಮಮಂದಿರದಲ್ಲಿ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳಾಗಿವೆ. ಇದರ ಪೂರ್ವಭಾವಿಯಾಗಿ ಇಂದಿನಿಂದ ಧಾರ್ಮಿಕ ವಿಧಿ ವಿಧಾನಗಳು ಜರುಗಲಿವೆ.

Ram temples consecration  rituals for Ayodhya Ram  ಅಯೋಧ್ಯೆ ರಾಮಮಂದಿರ  ರಾಮಮಂದಿರದ ಶಂಕುಸ್ಥಾಪನೆ  ಪ್ರಾಣ ಪ್ರತಿಷ್ಠಾ
ಅಯೋಧ್ಯೆ ರಾಮಮಂದಿರದ ಶಂಕುಸ್ಥಾಪನೆಗಾಗಿ 7 ದಿನಗಳ ಆಚರಣೆಗಳು ಇಂದಿನಿಂದ ಪ್ರಾರಂಭ
author img

By ETV Bharat Karnataka Team

Published : Jan 16, 2024, 9:30 AM IST

ಅಯೋಧ್ಯೆ(ಉತ್ತರ ಪ್ರದೇಶ): ಇಂದಿನಿಂದ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮ ಲಲ್ಲಾನ ವಿಗ್ರಹ ಪ್ರತಿಷ್ಠಾಪನೆಗೆ ಸಂಬಂಧಿಸಿದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಲಿವೆ. ಈ ಆಚರಣೆಗಳನ್ನು ಹಿಂದೂ ಸಂಪ್ರದಾಯ, ಪದ್ಧತಿಗಳ ಪ್ರಕಾರ ನಡೆಸಲಾಗುತ್ತದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಉಸ್ತುವಾರಿಯಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ.

ಸರಯೂ ನದಿ ದಡದಲ್ಲಿ ದಶವಿಧ ಸ್ನಾನ, ವಿಷ್ಣು ಪೂಜೆ, ಗೋವು ಅರ್ಪಣಾ ಕಾರ್ಯಗಳು ಶಾಸ್ತ್ರೋಕ್ತವಾಗಿ ನಡೆಯಲಿವೆ. ಜನವರಿ 18ರಂದು ಗರ್ಭಗುಡಿಯಲ್ಲಿ ರಾಮ ಲಲ್ಲಾ ವಿಗ್ರಹವನ್ನು ಇರಿಸಲಾಗುತ್ತದೆ. ಜ.22ರಂದು ಮಧ್ಯಾಹ್ನ 12.20ಕ್ಕೆ ಅಭಿಜಿನ್ ಮುಹೂರ್ತದಲ್ಲಿ ವಿಗ್ರಹದ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದೆ. ವಾರಣಾಸಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಶುಭಮುಹೂರ್ತ ನಿಗದಿ ಮಾಡಿದ್ದಾರೆ.

ಜ.23ರಿಂದ ಸಾರ್ವಜನಿಕರಿಗೆ ದರ್ಶನ: ಶ್ರೀರಾಮನ ವಿಗ್ರಹದ ತೂಕ ಅಂದಾಜು 150ರಿಂದ 200 ಕೆ.ಜಿ ಇರಲಿದೆ ಎಂದು ವರದಿಯಾಗಿದೆ. ಪ್ರತಿಷ್ಠಾಪನಾ ವಿಧಿ ವಿಧಾನಗಳನ್ನು 121 ಆಚಾರ್ಯರು ನೆರವೇರಿಸುವರು. ಕಾಶಿಯ ಲಕ್ಷ್ಮೀಕಾಂತ್ ದೀಕ್ಷಿತ್ ಮುಖ್ಯ ಗುರುಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ರಾಯ್ ತಿಳಿಸಿದ್ದಾರೆ. ಜನವರಿ 23ರಿಂದ ಭಕ್ತರು ಹಾಗು ಸಾರ್ವಜನಿಕರಿಗೆ ದೇಗುಲ ಮುಕ್ತವಾಗಲಿದೆ ಎಂದು ಅವರು ಮಾಹಿತಿ ಒದಗಿಸಿದರು.

ವಿವಿಧ ಧಾರ್ಮಿಕ ಕಾರ್ಯಕ್ರಗಳು:

  • ಜನವರಿ 16: ಪ್ರಾಯಶ್ಚಿತ್ತ, ಕರ್ಮಕುಟಿ ಪೂಜೆ
  • ಜನವರಿ 17: ದೇವಾಲಯದ ಆವರಣಕ್ಕೆ ಪ್ರತಿಮೆ ಪ್ರವೇಶ
  • ಜನವರಿ 18 (ಸಂಜೆ): ತೀರ್ಥಪೂಜೆ, ಜಲಯಾತ್ರೆ, ಜಲ ದಿವಸ್​, ಗಂಧದಿವಸ್
  • ಜನವರಿ 19 (ಬೆಳಿಗ್ಗೆ): ಕೇಶರದಿವಸ್, ಘೃತದಿವಸ್
  • ಜನವರಿ 19 (ಸಂಜೆ): ಧಾನ್ಯದಿವಸ್
  • ಜನವರಿ 20 (ಬೆಳಿಗ್ಗೆ): ಶಕ್ರದಿವಸ್, ಫಾಲಾದಿವಸ್
  • ಜನವರಿ 20 (ಸಂಜೆ): ಪುಷ್ಪಾ ದಿವಸ್
  • ಜನವರಿ 21 (ಬೆಳಿಗ್ಗೆ): ಮಧ್ಯಾದಿವಸ್
  • ಜನವರಿ 22 (ಸಂಜೆ): ಶಯ್ಯಾದಿವಸ್

ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು, ಸಂಬಂಧಿಕರಿಗೆ ಸಂಕ್ರಾಂತಿ ಸಿಹಿ ಊಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.