ಕಾನ್ಪುರ(ಉತ್ತರಪ್ರದೇಶ): ನಗರದ ಚಿನ್ನ ಬೆಳ್ಳಿ ಉದ್ಯಮಿ ರಾಧಾ ಮೋಹನ್ ಪುರುಷೋತ್ತಮ್ ದಾಸ್ ಅವರ ಜ್ಯುವೆಲರ್ಸ್ ಮತ್ತು ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿ, 7 ಕೋಟಿ ರೂಪಾಯಿ ಮೌಲ್ಯದ 12 ಚಿನ್ನದ ಬಿಸ್ಕೆಟ್ಗಳನ್ನು ವಶಕ್ಕೆ ಪಡೆದಿದೆ. ವಶಕ್ಕೆ ಪಡೆದ ಚಿನ್ನದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಪತ್ತೆಯಾಗಿಲ್ಲ ಎಂದು ಆದಾಯ ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.
ಉತ್ತರಪ್ರದೇಶದ ಕಾನ್ಪುರ ಸೇರಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿ, ಲಕ್ನೋ ಮತ್ತು ಕೋಲ್ಕತ್ತಾದ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಭಾನುವಾರ ಸಿವಿಲ್ ಲೈನ್ಸ್‌ನ ಚಿನ್ನ ಬೆಳ್ಳಿ ವ್ಯಾಪಾರಿ ರಾಧಾ ಮೋಹನ್ ಪುರುಷೋತ್ತಮ್ ದಾಸ್ ನಿವಾಸದ ಬಳಿ ನಿಲ್ಲಿಸಿದ್ದ ಐಷಾರಾಮಿ ಕಾರಿನ ಮ್ಯಾಟ್ ತಳದಲ್ಲಿ ಅಡಗಿಸಿಟ್ಟಿದ್ದ 12 ಚಿನ್ನದ ಬಿಸ್ಕೆಟ್ಗಳು ಪತ್ತೆಯಾಗಿವೆ. 7 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕೆಟ್ ಕಂಡು ಅಚ್ಚರಿಗೊಂಡ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ತನಿಖೆ ಕೈಗೊಂಡಿದೆ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಪ್ರಕಾರ, ಚಿನ್ನ ಬೆಳ್ಳಿ ವ್ಯಾಪಾರಿ ರಾಧಾ ಮೋಹನ್ ಪುರುಷೋತ್ತಮ್ ದಾಸ್ ಜ್ಯುವೆಲರ್ಸ್ ಅವರ ಐಷಾರಾಮಿ ಕಾರಿನ ಮ್ಯಾಟ್ ತಳದಲ್ಲಿ ಅಡಗಿಸಿಟ್ಟ 12 ಚಿನ್ನದ ಬಿಸ್ಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರತಿ ಬಿಸ್ಕೆಟ್ ಒಂದು ಕೆ ಜಿ ತೂಕ ಹೊಂದಿದ್ದು, ಅವುಗಳ ಮೌಲ್ಯ ಸುಮಾರು 7 ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಇದಕ್ಕೂ ಮೊದಲು ಶನಿವಾರವೂ ಆದಾಯ ತೆರಿಗೆ ಇಲಾಖೆ 6 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ಆದರೆ ಚಿನ್ನ ಬೆಳ್ಳಿ ವ್ಯಾಪಾರಿಯಿಂದ ವಶಕ್ಕೆ ಪಡೆದ ಚಿನ್ನದ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಪತ್ತೆಯಾಗಿಲ್ಲ ಎಂದು ತಿಳಿಸಿದೆ.
ಉದ್ಯಮಿಗಳು ತಮ್ಮ ಸೇವಕರು ಮತ್ತು ಕಾರ್ಮಿಕರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಇತರ ಆಭರಣಗಳ ಖರೀದಿ ನಕಲಿ ಬಿಲ್‌ಗಳನ್ನು ತೆಗೆದು, ಸಾಕಷ್ಟು ಪ್ರಮಾಣದಲ್ಲಿ ತೆರಿಗೆ ವಂಚಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ತಂಡಗಳು ನಿರಂತರ ದಾಖಲೆಗಳನ್ನು ಪರಿಶೀಲಿಸುತ್ತಿವೆ. ಈ ವೇಳೆ ಅನುಮಾನಾಸ್ಪದ ದಾಖಲೆಗಳು ಸಹ ಪತ್ತೆಯಾಗಿವೆ. ಅದರಲ್ಲಿ ಯಾವುದೇ ಅಧಿಕೃತ ದಾಖಲೆಗಳು ಉದ್ಯಮಿ ಬಳಿ ಕಂಡುಬಂದಿಲ್ಲ ಎಂದು ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಕಾನ್ಪುರದಲ್ಲಿ ಸುಗಂಧ ದ್ರವ್ಯ ವ್ಯಾಪಾರಿ ಪಿಯೂಷ್ ಜೈನ್ ಅವರ ಮೇಲೆ ಐಟಿ ದಾಳಿ ನಡೆದಿತ್ತು. ಅವರ ಉದ್ಯಮಿ ರಾಧಾ ಮೋಹನ್ ದಾಸ್ ಪುರುಷೋತ್ತಮ್ ಜ್ಯುವೆಲರ್ಸ್ ಮೇಲೆ ಆದಾಯ ತೆರಿಗೆ ಇಲಾಖೆ ತಂಡವು ದಾಳಿ ನಡೆಸಿದೆ. ಸುಗಂಧ ದ್ರವ್ಯ ವ್ಯಾಪಾರಿಗಳ ಮೇಲೆ ದಾಳಿ ನಂತರ ಈಗ ರಾಧಾ ಮೋಹನ್ ದಾಸ್ ಪುರುಷೋತ್ತಮ್ ಜ್ಯುವೆಲರ್ಸ್ ವಿಷಯ ಚರ್ಚೆಯಾಗುತ್ತಿದೆ.
ಇದಲ್ಲದೇ ಇನ್ನೂ ಹಲವು ಉದ್ಯಮಿಗಳ ಮೇಲೆ ಆದಾಯ ತೆರಿಗೆ ಇಲಾಖೆಯ ತಂಡ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಿಂದ ವರ್ತಕರು ದಿಗಿಲುಗೊಂಡಿದ್ದಾರೆ. ಚಿನ್ನ-ಬೆಳ್ಳಿ ವ್ಯಾಪಾರಿಯಲ್ಲದೇ ನಗರದಲ್ಲಿನ ಹೆಸರಾಂತ ಬಿಲ್ಡರ್‌ನ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ.
ಇದನ್ನೂಓದಿ:ಫುಡ್ ಡೆಲಿವರಿಗೆ ಬಂದು ಲಿಫ್ಟ್ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿಗೆ ನ್ಯಾಯಾಂಗ ಬಂಧನ