ETV Bharat / bharat

ತೆಲಂಗಾಣ ಚುನಾವಣೆ: ಬಿಜೆಪಿ ತೊರೆದು ಮರಳಿ ಕಾಂಗ್ರೆಸ್​ನತ್ತ ಮಾಜಿ ಶಾಸಕ ರಾಜಗೋಪಾಲ್​ ರೆಡ್ಡಿ ಚಿತ್ತ

ತೆಲಂಗಾಣ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ನಾಯಕರಾದ ಮಾಜಿ ಶಾಸಕ ರಾಜಗೋಪಾಲ್​ ರೆಡ್ಡಿ ಕಾಂಗ್ರೆಸ್​ ಸೇರ್ಪಡೆಗೆ ನಿರ್ಧರಿಸಿದ್ಧಾರೆ.

Setback for BJP ahead of Telangana polls, Raj Gopal Reddy to join Congress
ತೆಲಂಗಾಣ ಚುನಾವಣೆ: ಬಿಜೆಪಿ ತೊರೆದು ಮರಳಿ ಕಾಂಗ್ರೆಸ್​ನತ್ತ ಮಾಜಿ ಶಾಸಕ ರಾಜಗೋಪಾಲ್​ ರೆಡ್ಡಿ ಚಿತ್ತ
author img

By ETV Bharat Karnataka Team

Published : Oct 25, 2023, 4:09 PM IST

ಹೈದರಾಬಾದ್​ (ತೆಲಂಗಾಣ): ತೆಲಂಗಾಣ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಮಾಜಿ ಶಾಸಕ, ಉದ್ಯಮಿ ಕೋಮಟಿ ರೆಡ್ಡಿ ರಾಜಗೋಪಾಲ್​ ರೆಡ್ಡಿ ಶಾಕ್​ ನೀಡಿದ್ದಾರೆ. ಕಳೆದ ವರ್ಷ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಅವರು, ಈಗ ಮತ್ತೆ ಕೈ ಹಿಡಿಯಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕೇಸರಿ ಪಕ್ಷಕ್ಕೆ ಬುಧವಾರ ರಾಜೀನಾಮೆಯನ್ನೂ ಘೋಷಿಸಿದ್ದಾರೆ.

ನೆಲ್ಗೊಂಡ ಜಿಲ್ಲೆಯ ಮುನುಗೋಡು ಕ್ಷೇತ್ರದ ಕಾಂಗ್ರೆಸ್​ನ ಹಾಲಿ ಶಾಸಕರಾಗಿದ್ದ ರಾಜಗೋಪಾಲ್​ ರೆಡ್ಡಿ ಕಳೆದ ವರ್ಷದ ಆಗಸ್ಟ್​ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಇದರಿಂದ ಮುನಗೋಡು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಆದರೆ, ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾಗಿದ್ದ ಅವರು, ಆಡಳಿತರೂಢ ಬಿಆರ್​ಎಸ್​ ಪಕ್ಷದ ಅಭ್ಯರ್ಥಿ ಎದುರು ಸೋಲು ಕಂಡಿದ್ದರು. ಇದೀಗ ಮತ್ತೆ ಕಾಂಗ್ರೆಸ್​ ಗೂಡಿಗೆ ಮರಳಲು ಅವರು ನಿರ್ಧರಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಬಹಿರಂಗವಾಗಿ ಅವರೇ ಪ್ರಕಟಿಸಿದ್ದಾರೆ. ''ರಾಜ್ಯದಲ್ಲಿ ಬಿಆರ್​ಎಸ್​ ಆಡಳಿತವನ್ನು ಜನತೆ ತಿರಸ್ಕರಿಸುತ್ತಿದ್ದಾರೆ. ಇದು ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತಿದೆ. ಕೆಸಿಆರ್​ ಕುಟುಂಬದಿಂದ ತೆಲಂಗಾಣವನ್ನು ಮುಕ್ತ ಮಾಡಬೇಕಿದೆ. ಮುಂದಿನ ಐದು ವರ್ಷಗಳಲ್ಲಿ ಜನತೆಯ ಆಶಯ ಈಡೇರಲಿದೆ. ದೇಶಕ್ಕೆ ಕಾಂಗ್ರೆಸ್​ ಪಕ್ಷವೇ ಪರ್ಯಾಯ ಎಂದು ಜನತೆ ನಿರ್ಧರಿಸಿದ್ದಾರೆ'' ಎಂದು ಹೇಳುವ ಮೂಲಕ ಕಾಂಗ್ರೆಸ್​ ಸೇರುವ ಸುಳಿವು ನೀಡಿದ್ದಾರೆ.

ಮುಂದುವರೆದು, ''ಕಳೆದ ಒಂದೂವರೆ ವರ್ಷ ಹಿಂದೆ ಬಿಆರ್​ಎಸ್​ಗೆ ಬಿಜೆಪಿ ಪರ್ಯಾಯ ಎಂದು ಜನರು ನಂಬಿದ್ದರು. ಆದರೆ, ಈಗ ಕಾಂಗ್ರೆಸ್​ ಮಾತ್ರವೇ ಬಿಆರ್​ಎಸ್​ಗೆ ಪರ್ಯಾಯ ಎಂದು ಭಾವಿಸಿದ್ದಾರೆ. ಹೀಗಾಗಿ ನಾನು ಜನತೆಯ ಭಾವನೆಗಳಂತೆ ನಿರ್ಧಾರ ಕೈಗೊಂಡಿದ್ದೇನೆ. ನಾನು ಯಾವುದೇ ಸ್ಥಾನಮಾನದ ಆಕಾಂಕ್ಷಿಯೂ ಅಲ್ಲ. ನನ್ನ ಕಾರ್ಯಕರ್ತರು ಹಾಗೂ ಅಭಿಮಾನಿಗಳೇ ನನ್ನ ಶಕ್ತಿ, ಉಸಿರು. ಜನರಿಗಾಗಿ ನಾನು ತೀರ್ಮಾನ ಮಾಡಿದ್ದೇನೆ. ಕಾಂಗ್ರೆಸ್​ ಸೇರ್ಪಡೆಯಾಗುವ ನನ್ನ ನಿರ್ಧಾರಕ್ಕೆ ಎಲ್ಲ ಕಾರ್ಯಕರ್ತರ ಆಶೀರ್ವಾದ ಇದೆ ಎಂದು ನಾನು ನಂಬಿದ್ದೇನೆ'' ಎಂದು ರಾಜ್​ಗೋಪಾಲ್​ ರೆಡ್ಡಿ ಬರೆದುಕೊಂಡಿದ್ದಾರೆ.

ಕಳೆದ ಕೆಲ ತಿಂಗಳಿಂದ ರಾಜಗೋಪಾಲ್​ ರೆಡ್ಡಿ ಬಿಜೆಪಿ ನಾಯಕತ್ವದೊಂದಿಗೆ ಅತೃಪ್ತಿ ಹೊಂದಿದ್ದರು. ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರನ್ನಾಗಿ ನೇಮಿಸಿದ್ದರೂ ಅವರು ಇತ್ತೀಚೆಗೆ ಪಕ್ಷದ ಚಟುವಟಿಕೆಗಳಿಂದ ದೂರ ಇದ್ದರು. ಅಲ್ಲದೇ, ಹಾಲಿ ಶಾಸಕ ಈಟಲಾ ರಾಜೇಂದ್ರ ಅವರೊಂದಿಗೆ ರಾಜಗೋಪಾಲ್​ ರೆಡ್ಡಿ ಅವರಿಗೂ ಬಿಜೆಪಿ ನಾಯಕರು ದೆಹಲಿಗೆ ಕರೆಸಿ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದರು. ಆದರೆ, ಎಲ್​ಬಿ ನಗರ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದು, ಭಾನುವಾರ ಬಿಜೆಪಿ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ.

ಇದನ್ನೂ ಓದಿ: ಮುನುಗೋಡು ಉಪ ಚುನಾವಣೆ: ಬಿಜೆಪಿ ವಿರುದ್ಧ ಗೆದ್ದು ಬೀಗಿದ ಟಿಆರ್​ಎಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.