ETV Bharat / bharat

ಅಚ್ಚರಿಯ ರೀತಿಯಲ್ಲಿ ರೆಪೊ ದರ ಏರಿಕೆ... ಮುಂಬೈ ಷೇರು ಸೂಚ್ಯಂಕದಲ್ಲಿ 1307 ಅಂಕ ದಿಢೀರ್​ ಕುಸಿತ - ಮುಂಬೈ ಷೇರು ಮಾರುಕಟ್ಟೆಯಲ್ಲಿ ದಿಢೀರ್ ಇಳಿಕೆ

ಹಣದುಬ್ಬರ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಭಾರತೀಯ ರಿಸರ್ವ್​ ಬ್ಯಾಂಕ್​ ರೆಪೊ ದರದಲ್ಲಿ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ ದಿಢೀರ್ ಇಳಿಕೆ ಕಂಡು ಬಂದಿದೆ.

Sensex tumbles
Sensex tumbles
author img

By

Published : May 4, 2022, 5:16 PM IST

ಮುಂಬೈ: ದೇಶದಲ್ಲಿ ಹೆಚ್ಚಾಗುತ್ತಿರುವ ಹಣದುಬ್ಬರ ನಿಯಂತ್ರಣಕ್ಕೆ ತರುವ ಉದ್ದೇಶದಿಂದ 2020ರ ಬಳಿಕ ಭಾರತೀಯ ರಿಜರ್ಸ್​ ಬ್ಯಾಂಕ್​​​ ರೆಪೊ ದರ ಏರಿಕೆ ಮಾಡಿ, ಅಚ್ಚರಿಯ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಮುಂಬೈ ಷೇರು ಸೂಚ್ಯಂಕದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ, ಸೂಚ್ಯಂಕದಲ್ಲಿ ದಾಖಲೆಯ 1307 ಅಂಕ ಇಳಿಕೆಯಾಗಿದೆ.

ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ ಸಹ 414 ರಷ್ಟು ಇಳಿಕೆ ಕಂಡಿದ್ದು, 16,677ರಲ್ಲಿ ವಹಿವಾಟು ಮುಗಿಸಿದೆ. ಇನ್ನೂ ಸೆನ್ಸೆಕ್ಸ್​​ 55,669ರಲ್ಲಿ ಮುಕ್ತಾಯವಾಗಿದೆ. ಸೂಚ್ಯಂಕದಲ್ಲಿ ದಾಖಲೆಯ ಇಳಿಕೆ ಕಂಡು ಬರುತ್ತಿದ್ದಂತೆ ಅನೇಕ ಕಂಪನಿಗಳ ಷೇರು ಮೌಲ್ಯ ಕುಸಿತಗೊಂಡಿದ್ದು, ದಿನಬಳಿಕೆ ವಸ್ತುಗಳ ತಯಾರಿಕಾ ಕಂಪನಿಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಉಳಿದಂತೆ ರಿಲಯನ್ಸ್​​​ 3.14, ಹೆಚ್​ಡಿಎಫ್​ಸಿ 3.34, ಟೈಟನ್​​​ 4.11, ಬಜಾಜ್ ಫೈನಾನ್ಸ್​ 4.29, ಬಜಾಜ್​ ಫಿನ್​ಸರ್ವ್​ 4.18 ನಷ್ಟು ಕುಸಿತ ಕಂಡಿವೆ. ಪವರ್​ಗ್ರಿಡ್​, ಎನ್​ಟಿಪಿಸಿ, ಇನ್​​ಫೋಸಿಸ್​, ವಿಪ್ರೋ, ಕೋಟಕ್ ಮಹೀಂದ್ರಾ ಬ್ಯಾಂಕ್​ಗಳ ಷೇರುಗಳಲ್ಲಿ ಗಣನೀಯವಾದ ಏರಿಕೆ ಕಂಡು ಬಂದಿದೆ.

ಇದನ್ನೂ ಓದಿ: 2 ವರ್ಷದ ಬಳಿಕ ರೆಪೊ ದರ ಹೆಚ್ಚಳ: ಶೇ.4.40ಕ್ಕೆ ಏರಿಸಿ ಆರ್‌ಬಿಐ ಘೋಷಣೆ

ಹೆಚ್ಚಾಗುತ್ತಿರುವ ಹಣದುಬ್ಬರ ನಿಯಂತ್ರಿಸುವ ಸಲುವಾಗಿ ರೆಪೊ ದರವನ್ನು 2020ರ ಬಳಿಕ ಇದೇ ಮೊದಲ ಬಾರಿಗೆ ಹೆಚ್ಚಳ ಮಾಡಲಾಗಿದೆ. ರೆಪೊ ದರದ 40 ಮೂಲಾಂಶವನ್ನು ಶೇ 4.40ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ ಘೋಷಿಸಿದೆ. ಇದರ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.