ಮುಂಬೈ : ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕ ಸೂಚನೆಗಳ ಹಿನ್ನೆಲೆಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ 55.46 ಪಾಯಿಂಟ್ ಏರಿಕೆ ಕಂಡು 52,935 ಅಂಕ ತಲುಪಿದೆ. ಈ ಮೂಲಕ 53 ಸಾವಿರ ಅಂಕಗಳ ಗಡಿ ತಲುಪುವ ಸಾಧ್ಯತೆ ಕಂಡು ಬರುತ್ತಿದೆ.
ಇನ್ನೊಂದೆಡೆ ನಿಫ್ಟಿ 24.05 ಪಾಯಿಂಟ್ ಏರಿಕೆ ಕಂಡಿದ್ದು, 15,858.40 ಅಂಕ ತಲುಪಿದೆ. ಇದೂ ಸಹ ಶೀಘ್ರವೇ 15,900 ಅಂಕ ದಾಖಲಿಸುವ ನಿರೀಕ್ಷೆಯಿದೆ. ಬಜಾಜ್ ಫೈನಾನ್ಸ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಉತ್ತಮ ಲಾಭ ಗಳಿಸಿವೆ.
ಇನ್ನೊಂದೆಡೆ ಟೆಕ್ ಮಹೀಂದ್ರಾ, ನೆಸ್ಲೆ ಇಂಡಿಯಾ ಮತ್ತು ಭಾರ್ತಿ ಏರ್ಟೆಲ್ ಸಹ ಉನ್ನತ ಸೂಚ್ಯಂಕ ಗಳಿಸಿವೆ. ವಿಶಾಲ ಮಾರುಕಟ್ಟೆಗಳು ಮಾನದಂಡದ ಸೂಚ್ಯಂಕಗಳನ್ನು ಮೀರಿಸುತ್ತಿದೆ. ಇನ್ನು, ಬ್ಯಾಂಕ್ಗಳ ನಿಫ್ಟಿ 0.30% ಹೆಚ್ಚಾಗಿದೆ.