ಮುಂಬೈ: ಇಂದಿನ ವಹಿವಾಟಿನಲ್ಲಿ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಸಾರ್ವಕಾಲಿಕ ದಾಖಲೆ ಬರೆದಿದೆ. ಈಕ್ವಿಟಿ ಬೆಂಚ್ಮಾರ್ಕ್ನಲ್ಲಿ 350 ಪಾಯಿಂಟ್ಗಳ ಏರಿಕೆ ಕಂಡು ಸೆನ್ಸೆಕ್ಸ್ 60 ಸಾವಿರ ಅಂಕಗಳ ಸಾರ್ವಕಾಲಿಕ ದಾಖಲೆ ಬರೆದಿದೆ. 1875ರಲ್ಲಿ ಸ್ಥಾಪನೆಯಾದ ಮುಂಬೈ ಷೇರು ಪೇಟೆ ಇದೀಗ 60 ಸಾವಿರ ಪಾಯಿಂಟ್ಗಳವರೆಗೆ ತಲುಪಿರುವುದು ದಾಖಲೆಯೇ ಸರಿ.
ಸೆನ್ಸೆಕ್ಸ್ 359.29 ಪಾಯಿಂಟ್‌ಗಳು ಅಥವಾ 0.60% ರಷ್ಟು ಏರಿಕೆ ಕಂಡು 60,244.65 ಅಂಕದಲ್ಲಿ ವಹಿವಾಟು ನಡೆಸಿದರೆ, ನಿಫ್ಟಿ 100.40 ಪಾಯಿಂಟ್‌ಗಳು ಏರಿಕೆ ಕಂಡು ಇವತ್ತು . ಐಸಿಐಸಿಐ ಬ್ಯಾಂಕ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಲಾರ್ಸೆನ್ & ಟೂಬ್ರೊ ಜಾಗತಿಕ ಸಕಾರಾತ್ಮಕ ಸೂಚನೆಗಳ ನಡುವೆ ಷೇರು ಮಾರುಕಟ್ಟೆಯಲ್ಲಿ ಲಾಭಗಳಿಸಿದೆ.
ಇನ್ನು ಐತಿಹಾಸಿಕ 60,000 ಅಂಕಗಳ ಮಟ್ಟವನ್ನು ತಲುಪಲು ಸುಮಾರು 31 ವರ್ಷಗಳನ್ನು ತೆಗೆದುಕೊಂಡಿದೆ. ಬೆಂಚ್‌ಮಾರ್ಕ್ ಸೂಚ್ಯಂಕವು ಜುಲೈ 25, 1990 ರಲ್ಲಿ 1,000 ಪಾಯಿಂಟ್‌ಗಳಷ್ಟಿತ್ತು. ಮಾರ್ಚ್ 4, 2015 ರಂದು 30,000 ಗಡಿ ಮುಟ್ಟಿತು. ಈ ದಾಖಲೆ ಬರೆಯಲು ಸಹ ಸುಮಾರು 25 ವರ್ಷಗಳನ್ನು ತೆಗೆದುಕೊಂಡಿದೆ. ಆದರೆ ಇದೀಗ ಕೇವಲ 6 ವರ್ಷಗಳಲ್ಲಿ ಸೆನ್ಸೆಕ್ಸ್ 30,000 ಮಟ್ಟದಿಂದ 60,000ಕ್ಕೆ ಏರಿದೆ. ಇದು ಮಾರುಕಟ್ಟೆಯಲ್ಲಿನ ಒಟ್ಟಾರೆ ಹುರುಪನ್ನು ಪ್ರತಿಬಿಂಬಿಸುತ್ತದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಇನ್ಫೋಸಿಸ್ ಟಾಪ್ ಗೇನರ್ ಆಗಿದ್ದು, ಶೇಕಡಾ 2 ರಷ್ಟು ಏರಿಕೆಯಾಗಿದೆ. ನಂತರ ಎಲ್ & ಟಿ, ಎಚ್‌ಸಿಎಲ್ ಟೆಕ್, ಏಶಿಯನ್ ಪೇಂಟ್ಸ್, ಟಿಸಿಎಸ್, ಟೆಕ್ ಮಹೀಂದ್ರಾ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಇದೆ. ಮತ್ತೊಂದೆಡೆ, ಎನ್‌ಟಿಪಿಸಿ, ಎಚ್‌ಯುಎಲ್, ಬಜಾಜ್ ಫೈನಾನ್ಸ್ ಮತ್ತು ಬಜಾಜ್ ಫಿನ್‌ಸರ್ವ್ ನಷ್ಟ ಅನುಭವಿಸಿದೆ.