ಮುಂಬೈ: ವಿದೇಶಿ ನಿಧಿಯ ಒಳಹರಿವು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಸಕಾರಾತ್ಮಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್‌ಗಳ ಲಾಭದ ಮೂಲಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ 300 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿಕೆ ಕಂಡಿದೆ.
30-ಷೇರು ಸೂಚ್ಯಂಕವು 315.89 ಪಾಯಿಂಟ್‌ಗಳು ಅಥವಾ 0.52 ಶೇಕಡಾ ಹೆಚ್ಚಿ 61,002.58 ಕ್ಕೆ ವಹಿವಾಟು ನಡೆಸುತ್ತಿದೆ. ಹಾಗೆ ಎನ್‌ಎಸ್‌ಇ ನಿಫ್ಟಿ 90.30 ಪಾಯಿಂಟ್‌ಗಳು ಅಥವಾ 0.50 ಶೇಕಡಾ ಏರಿಕೆಯಾಗಿ 18,193.05 ಕ್ಕೆ ತಲುಪಿದೆ.
ಸೆನ್ಸೆಕ್ಸ್‌ನಲ್ಲಿ ಶೇಕಡಾವಾರು ಒಂದು ದೊಡ್ಡ ಗಳಿಕೆಯು ಟೈಟಾನ್‌ನಲ್ಲಿ ಸಂಭವಿಸಿದೆ. ಇದಲ್ಲದೇ, ಐಟಿಸಿ, ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಬ್ಯಾಂಕ್, ಎಂ & ಎಂ, ಏಷ್ಯನ್ ಪೇಂಟ್ಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸಹ ಲಾಭದೊಂದಿಗೆ ವಹಿವಾಟು ನಡೆಸುತ್ತಿವೆ.
ಹಿಂದಿನ ಸೆಷನ್‌ನಲ್ಲಿ ಸೆನ್ಸೆಕ್ಸ್ 767 ಪಾಯಿಂಟ್ ಅಥವಾ 1.28 ರಷ್ಟು ಏರಿಕೆಯಾಗಿ 60,686.69 ಕ್ಕೆ ಕೊನೆಗೊಂಡಿತ್ತು. ಅಂತೆಯೇ ನಿಫ್ಟಿ 229.15 ಪಾಯಿಂಟ್ ಅಥವಾ 1.28 ರಷ್ಟು ಏರಿಕೆಯಾಗಿ 18,102.75 ಕ್ಕೆ ತಲುಪಿದೆ.