ETV Bharat / bharat

ಕೇಂದ್ರದ ಕೋವಿಡ್‌ ನಿರ್ವಹಣೆ ಟೀಕಿಸಿ ಸಲಹಾ ಸಮಿತಿಯಿಂದ ಹೊರಬಂದ ವೈರಾಣು ತಜ್ಞ ಶಾಹಿದ್ ಜಮೀಲ್

ಭಾರತದ ಕೋವಿಡ್ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವೈರಾಣು ತಜ್ಞ ಶಾಹಿದ್ ಜಮೀಲ್ ರಾಜೀನಾಮೆ ನೀಡಿದ್ದಾರೆ.

author img

By

Published : May 17, 2021, 7:25 AM IST

Senior virologist Shahid Jameel resigns as the chairman of scientific advisory group of Indian SARS-CoV-2
ಶಾಹಿದ್ ಜಮೀಲ್

ನವದೆಹಲಿ: ಕೊರೊನಾ ವೈರಸ್​ (SARS-CoV-2) ರೂಪಾಂತರಗಳ ಪತ್ತೆಗಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದ್ದ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವೈರಾಣು ತಜ್ಞ ಶಾಹಿದ್ ಜಮೀಲ್ ರಾಜೀನಾಮೆ ನೀಡಿದ್ದಾರೆ.

2020ರ ಡಿಸೆಂಬರ್‌ನಲ್ಲಿ ಭಾರತದಲ್ಲಿ SARS-CoV-2 ನ ಬದಲಾವಣೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ನಡೆಸಲು 10 ಪ್ರಯೋಗಾಲಯಗಳ ಜಾಲವಾಗಿ ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ಎಂಬ ಸಮಿತಿ ಸ್ಥಾಪಿಸಲಾಗಿತ್ತು. ಭಾರತದಲ್ಲಿ ಕಂಡುಬರುವ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ರೂಪಾಂತರಗಳ ವಂಶಾವಳಿಗಳನ್ನು ಈ ಪ್ರಯೋಗಾಲಯಗಳಲ್ಲಿ ಪತ್ತೆ ಹಚ್ಚಲಾಗುತ್ತಿತ್ತು. ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ 'ಡಬಲ್ ಮ್ಯುಟೆಂಟ್' ಕೊರೊನಾ ಕುರುಹುಗಳನ್ನು ಇದೇ ಸಮಿತಿ ನೀಡಿತ್ತು.

ಇದನ್ನೂ ಓದಿ: ಎಚ್ಚರಗೊಳ್ಳುವಲ್ಲಿ ವಿಫಲವಾದರೆ ಅದು ದುರಂತಕ್ಕೆ ಕಾರಣ : ವಿಜ್ಞಾನಿಗಳ ಸಮಿತಿಯ ಅಧ್ಯಕ್ಷ ಡಾ. ವಿದ್ಯಾಸಾಗರ್

ದೇಶದಲ್ಲಿ ಕೊರೊನಾ ಸಾಂಕ್ರಾಮಿಕದ ನಿರ್ವಹಣೆ ಕುರಿತು ಶಾಹಿದ್ ಜಮೀಲ್ ಟೀಕಿಸಿದ್ದರು. ತಜ್ಞರ ಸಲಹೆಗಳಿಗೆ ಏಕೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿದ್ದರು. ಇದೀಗ ತಮ್ಮ ಸ್ಥಾನವನ್ನು ತೊರೆದಿರುವ ಜಮೀಲ್, ರಾಜೀನಾಮೆಗೆ ಕಾರಣ ತಿಳಿಸಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.