ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕರು ಮತ್ತು ಅವರ ನಡುವಿನ ಕುತೂಹಲಕಾರಿ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ. 'ನೀವು ಎರಡು ಬಾರಿ ಪ್ರಧಾನಿಯಾಗಿದ್ದೀರಿ, ಅಷ್ಟು ಸಾಕು' ಎಂದು ಪ್ರತಿಪಕ್ಷದ ನಾಯಕರೊಬ್ಬರು ಹೇಳಿದ್ದರು ಎಂದು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ. ಗುಜರಾತ್‌ನ ಭರೂಚ್‌ನಲ್ಲಿ ಉತ್ಕರ್ಷ್ ಸಮಾರೋಹ್ ಸಮಾರಂಭ ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಒಂದು ದಿನ ಹಿರಿಯ ನಾಯಕರೊಬ್ಬರು ನನ್ನನ್ನು ಭೇಟಿಯಾದರು. ಅವರು ಯಾವಾಗಲೂ ನಮ್ಮನ್ನು ವಿರೋಧಿಸುತ್ತಾರೆ. ಆದರೆ ನಾನು ಅವರನ್ನು ಗೌರವಿಸುತ್ತೇನೆ. ನಮ್ಮ ನಡುವೆ ಕೆಲವು ಅಸಮಾಧಾನಗಳಿದ್ದು, ಅವರು ನನ್ನನ್ನು ಭೇಟಿಯಾಗಲು ಬಂದಿದ್ದರು. 'ದೇಶವು ನಿಮ್ಮನ್ನು ಎರಡು ಬಾರಿ ಪ್ರಧಾನಿ ಮಾಡಿದೆ. ಇನ್ನೂ ಹೆಚ್ಚು ಏನು ಬೇಕು?. ಒಬ್ಬರು ಎರಡು ಬಾರಿ ಪ್ರಧಾನಿಯಾದರೆ ಎಲ್ಲವನ್ನೂ ಸಾಧಿಸಿದಂತೆ ಎಂದಿದ್ದರು.'
ಇದೇ ವೇಳೆ ದೇಶಕ್ಕೆ ಸೇವೆ ಸಲ್ಲಿಸಲು ನೀವು ನನ್ನನ್ನು ಗುಜರಾತ್‌ನಿಂದ ದೆಹಲಿಗೆ ಕಳುಹಿಸಿದಾಗ ಎಂಟು ವರ್ಷಗಳು ಆಗುತ್ತವೆ. ಈ ಎಂಟು ವರ್ಷಗಳನ್ನು ಸೇವೆ, ಉತ್ತಮ ಆಡಳಿತ, ಬಡವರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಸುಮಾರು ಒಂದು ತಿಂಗಳ ಹಿಂದೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾಗಿ ಶಿವಸೇನಾ ಸಂಸದ ಸಂಜಯ್ ರಾವತ್ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಕುಟುಂಬ ಸದಸ್ಯರ ಕೇಂದ್ರೀಯ ತನಿಖಾ ಸಂಸ್ಥೆಗಳ ಕ್ರಮದ ಕುರಿತು ಪ್ರಸ್ತಾಪಿಸಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ಇದನ್ನೂ ಓದಿ: ತಾಜ್ಮಹಲ್ನ 22 ಬಾಗಿಲು ತೆರೆಸಲು ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಕೋರ್ಟ್