ETV Bharat / bharat

ನ್ಯೂಸ್​ ಚಾನೆಲ್​​ನ ಆ್ಯಂಕರ್​ ರೋಹಿತ್ ರಂಜನ್ ಅರೆಸ್ಟ್​ - ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಹತ್ಯೆ

ರಾಹುಲ್ ಗಾಂಧಿ ಕೇರಳದ ವಯನಾಡ್​ನಲ್ಲಿ ತಮ್ಮ ಕಚೇರಿಯಲ್ಲಿ ನಡೆದ ಘಟನೆ ಕುರಿತಾಗಿ ಮಾತನಾಡಿದ್ದ ವಿಡಿಯೋವನ್ನು ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಹತ್ಯೆ ಬಗ್ಗೆ ಮಾತನಾಡಿದಂತೆ ಬಿಂಬಿಸಿ ಪ್ರಸಾರ ಮಾಡಲಾಗಿತ್ತು.

senior-journalist-rohit-ranjan-arrested-by-noida-police
ನ್ಯೂಸ್​ ಚಾನೆಲ್​​ನ ಆ್ಯಂಕರ್​ ರೋಹಿತ್ ರಂಜನ್ ಅರೆಸ್ಟ್​
author img

By

Published : Jul 5, 2022, 8:49 PM IST

ನವದೆಹಲಿ/ನೋಯ್ಡಾ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿಕೆ ಕುರಿತಾಗಿ ಸುಳ್ಳು ಮಾಹಿತಿ ಪ್ರಸಾರ ಮಾಡಿದ ಆರೋಪದ ಪ್ರಕರಣದಲ್ಲಿ ಖಾಸಗಿ ನ್ಯೂಸ್​ ಚಾನೆಲ್​​ನ ಆ್ಯಂಕರ್​ ರೋಹಿತ್ ರಂಜನ್ ಅವರನ್ನು ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ರಾಹುಲ್ ಗಾಂಧಿ ಕೇರಳದ ವಯನಾಡ್​ನಲ್ಲಿ ತಮ್ಮ ಕಚೇರಿ ಮೇಲೆ ಎಸ್‌ಎಫ್‌ಐ ಕಾರ್ಯಕರ್ತರು ಮಾಡಿದ ದಾಳಿ ಕುರಿತಾಗಿ ಮಾತನಾಡಿದ್ದರು. ಆದರೆ, ಈ ಹೇಳಿಕೆಯ ವಿಡಿಯೋ ಉದಯಪುರದಲ್ಲಿ ನಡೆದ ಕನ್ಹಯ್ಯಾ ಲಾಲ್ ಹತ್ಯೆ ಬಗ್ಗೆ ಮಾತನಾಡಿದಂತೆ ಬಿಂಬಿಸಿ ರೋಹಿತ್​ ರಂಜನ್​ ನಿರೂಪಣೆ ಮಾಡುತ್ತಿದ್ದ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಗಾಜಿಯಾಬಾದ್​ನಲ್ಲಿರುವ ಚಾನೆಲ್​ನ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದರು. ನಂತರ ಈ ತಪ್ಪಿನ ಬಗ್ಗೆ ಚಾನೆಲ್ ಕ್ಷಮೆಯಾಚಿಸಿತ್ತು.

ನ್ಯೂಸ್​ ಚಾನೆಲ್​​ನ ಆ್ಯಂಕರ್​ ರೋಹಿತ್ ರಂಜನ್ ಅರೆಸ್ಟ್​

ಪೊಲೀಸರ ನಡುವೆ ಜಿಜ್ಞಾಸೆ: ರಾಹುಲ್​ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡಿರುವ ಬಗ್ಗೆ ರೋಹಿತ್​ ರಂಜನ್​ ಅವರನ್ನು ಬಂಧಿಸಲೆಂದು ಛತ್ತೀಸ್​ಗಢ ಪೊಲೀಸರು ಗಾಜಿಯಾಬಾದ್‌ಗೆ ಬಂದಿದ್ದರು. ಆದರೆ, ಬಂಧನದ ಬಗ್ಗೆ ಛತ್ತೀಸ್​ಗಢ ಪೊಲೀಸರು ಯಾವುದೇ ವಾರಂಟ್​​​ ನೀಡಲಿಲ್ಲ ಎಂದು ರಂಜನ್​, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗಾಜಿಯಾಬಾದ್ ಎಸ್‌ಎಸ್‌ಪಿ ಮತ್ತು ಲಖನೌ ಎಡಿಜಿ ಅವರಿಗೆ ಟ್ವೀಟ್​ ಮಾಡಿ ಅವರಿಂದ ಸಹಾಯ ಕೋರಿದ್ದಾರೆ.

ಆಗ ಸ್ಥಳಕ್ಕೆ ಗಾಜಿಯಾಬಾದ್ ಪೊಲೀಸರು ಬಂದಿದ್ದಾರೆ. ಈ ವೇಳೆ ತಮಗೆ ಮಾಹಿತಿ ಇಲ್ಲದೇ ಛತ್ತೀಸ್‌ಗಢ ಪೊಲೀಸರು ರಂಜನ್​ ಅವರನ್ನು ಬಂಧಿಸಲು ಬಂದಿರುವುದು ಹೇಗೆ ಪ್ರಶ್ನಿಸಿದರು. ಇದಕ್ಕೆ ಛತ್ತೀಸ್‌ಗಢ ಪೊಲೀಸರು ನಾವು ಅವರ ಬಂಧನಕ್ಕೆ ವಾರಂಟ್ ಹೊಂದಿರುವುದಾಗಿ ತಿಳಿಸಿದರು. ಇದರಿಂದ ಎರಡೂ ಕಡೆಯ ಪೊಲೀಸರು ನಡುವೆ ಕೆಲ ಹೊತ್ತು ವಾಗ್ವಾದ ನಡೆಯಿತು. ಈ ನಡುವೆ ಕೊನೆಗೆ ನೋಯ್ಡಾ ಪೊಲೀಸರು ರೋಹಿತ್ ರಂಜನ್ ಬಂಧಿಸಿ ಕರೆದೊಯ್ದರು.

ಇದನ್ನೂ ಓದಿ: ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ವಾಸ್ತುತಜ್ಞ ಚಂದ್ರಶೇಖರ್ ಗುರೂಜಿ ಬರ್ಬರ ಕೊಲೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.