ETV Bharat / bharat

ಕಾಂಗ್ರೆಸ್​ ಬಹಿಷ್ಕರಿಸಿದ್ದ ವಿಚಾರ ಸಂಕಿರಣದಲ್ಲಿ ಮಣಿಶಂಕರ್ ಅಯ್ಯರ್ ಭಾಗಿ

author img

By ETV Bharat Karnataka Team

Published : Nov 4, 2023, 5:35 PM IST

ಕಾಂಗ್ರೆಸ್​ ಮತ್ತು ಇತರ ಪ್ರತಿಪಕ್ಷಗಳು ಬಹಿಷ್ಕರಿಸಿದ್ದ ಕೇರಳೀಯಂ ವಿಚಾರ ಸಂಕಿರಣದಲ್ಲಿ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಭಾಗವಹಿಸಿದ್ದರು.

senior-congress-leader-manishankar-ayyer-participated-in-keraleeyam-seminar
ಕಾಂಗ್ರೆಸ್​ ಬಹಿಷ್ಕರಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಮಣಿಶಂಕರ್ ಅಯ್ಯರ್

ತಿರುವನಂತಪುರಂ(ಕೇರಳ): ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಕಾಂಗ್ರೆಸ್ ಬಹಿಷ್ಕರಿಸಿದ್ದ ಕೇರಳೀಯಂ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಕ್ಷಮೆಯಾಚಿಸುತ್ತೇನೆ, ಕೇರಳೀಯಂ ವಿಚಾರ ಸಂಕಿರಣದಲ್ಲಿ ಭಾಗವಹಿಸದಂತೆ ಪಕ್ಷವು ಹೇಳಿತ್ತು ಎಂದು ತಿಳಿಸಿದರು.

ಮಣಿಶಂಕರ್​ ಅಯ್ಯರ್ ಸೆಮಿನಾರ್‌ನಲ್ಲಿ ಭಾಗವಹಿಸಿರುವುದು ಕಾಂಗ್ರೆಸ್ ನಾಯಕರನ್ನು ಮುಜುಗರಕ್ಕೀಡು ಮಾಡಿದೆ. ಕೇರಳೀಯಂ ಸೆಮಿನಾರ್‌ನಲ್ಲಿ ಭಾಗವಹಿಸದಂತೆ ಪಕ್ಷದ ನಾಯಕರು ಸೂಚಿಸಿದ್ದರು ಎಂದು ಮಣಿಶಂಕರ್ ಅಯ್ಯರ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ನಾನು ರಾಜಕೀಯ ಮಾತನಾಡಲು ಈ ವೇದಿಕೆಗೆ ಬಂದಿಲ್ಲ, ಹೀಗಾಗಿ ಪಕ್ಷ ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಕೇರಳ ಮಾದರಿಯ ಸ್ಥಳೀಯ ಸ್ವ - ಸರ್ಕಾರವನ್ನು ಅವರು ಶ್ಲಾಘಿಸಿದರು. ಕೇರಳ ವಿಭಿನ್ನ ರಾಜ್ಯ ಮತ್ತು ಕೇರಳವು ಅಧಿಕಾರ ವಿಕೇಂದ್ರೀಕರಣವನ್ನು ನಿಖರವಾಗಿ ಜಾರಿಗೆ ತಂದ ರಾಜ್ಯವಾಗಿದೆ. ಕೇರಳದ ಗ್ರಾಮ ಸಭೆಗಳು ಮುಕ್ತ ಚರ್ಚೆಗೆ ವೇದಿಕೆಯಾಗಿದೆ. ಪಂಚಾಯತ್ ರಾಜ್ ಅನ್ನು ಜಾರಿಗೆ ತಂದ ರಾಜೀವ್ ಗಾಂಧಿ ಅವರಿಗೆ ಗೌರವ ಸಲ್ಲಿಸಲು ಸೆಮಿನಾರ್ ನಲ್ಲಿ ಭಾಗವಹಿಸಿದ್ದೇನೆ. ಪ್ರತಿಯೊಬ್ಬರ ಕಣ್ಣಿನಿಂದ ಕಣ್ಣೀರು ಒರೆಸಲು ಪಂಚಾಯತ್ ರಾಜ್ ಜಾರಿಗೆ ತರುವುದು ರಾಜೀವ್ ಗಾಂಧಿಯವರ ಕನಸಾಗಿತ್ತು. ಈ ಸಾಧನೆಯ ಸಮೀಪಕ್ಕೆ ಬರುವ ಏಕೈಕ ರಾಜ್ಯ ಕೇರಳ ಎಂದು ಮಣಿಶಂಕರ್​ ಅಯ್ಯರ್​ ಶ್ಲಾಘಿಸಿದ್ದಾರೆ.

UDF ಮತ್ತು LDF ಸರ್ಕಾರಗಳು ಪರ್ಯಾಯ ಮಧ್ಯಕಾಲದಲ್ಲಿ ಕೇರಳವನ್ನು ಆಳುತ್ತಿವೆ. ಆದರೆ, ಪಂಚಾಯತ್ ರಾಜ್ ಕೇರಳದ ಜನರ ದೃಷ್ಟಿಯಾಗಿದೆ. ಕೇರಳದ ಜನಸಂಖ್ಯೆಯ ಹೆಚ್ಚಿನ ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ನಗರ ಪ್ರದೇಶದಲ್ಲಿಯೂ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸರಿಯಾಗಿ ಅಳವಡಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಮಯೋಚಿತ ನವೀಕರಣದ ಅಗತ್ಯವಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಸ್ಥಳೀಯ ಸ್ವ-ಸರ್ಕಾರ ಇಲಾಖೆ ಸಚಿವ ಎಂ.ಬಿ. ರಾಜೇಶ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಸ್ಥಳೀಯ ಆಡಳಿತದಲ್ಲಿ ಕೇರಳದ ಸಾಧನೆಗಳ ಸಂಕ್ಷಿಪ್ತ ವಿವರಣೆಯನ್ನು ನೀಡಿದರು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಡಿಜಿಟಲ್ ಸೇವೆ ವಿತರಣೆಗಾಗಿ ಕೆ-ಸ್ಮಾರ್ಟ್ ಯೋಜನೆ ಮತ್ತು ರಾಜ್ಯದ ಡಿಜಿಟಲ್ ಸಾಕ್ಷರತಾ ಅಭಿಯಾನ ಸೇರಿದಂತೆ ಭವಿಷ್ಯದ ಯೋಜನೆಗಳ ಕುರಿತು ಅವರು ಮಾತನಾಡಿದರು.

ಕೇರಳ ಸ್ಥಳೀಯ ಸ್ವ- ಸರ್ಕಾರದ ಕುರಿತ ಕೇರಳೀಂ ವಿಚಾರ ಸಂಕಿರಣವನ್ನು ಇಂದು ಸೆಂಟ್ರಲ್ ಸ್ಟೇಡಿಯಂನಲ್ಲಿ ಸ್ಥಳೀಯ ಸರ್ಕಾರಿ ಇಲಾಖೆಯು ಆಯೋಜಿಸಿತ್ತು. ಕೇರಳವು ಸಾಲದ ಸುಳಿಯಲ್ಲಿ ಸಿಲುಕಿರುವಾಗ ಎಲ್​ಡಿಎಫ್​ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿಪಕ್ಷಗಳು ಕೇರಳೀಯಂ ವಿಚಾರ ಸಂಕಿರಣವನ್ನು ಬಹಿಷ್ಕರಿಸಿವೆ.

ಇದನ್ನೂ ಓದಿ: ನನ್ನ ಆತ್ಮಚರಿತ್ರೆಯಲ್ಲಿ ಯಾರನ್ನೂ ಟಾರ್ಗೆಟ್​ ಮಾಡಿಲ್ಲ: ಇಸ್ರೋ ಅಧ್ಯಕ್ಷ ಸೋಮನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.