ETV Bharat / bharat

ಪ್ರಧಾನಿ ಮೋದಿ, ಅಮಿತ್​ ಶಾ, ಯೋಗಿ, ಮೋಹನ್​ ಭಾಗವತ್​ಗೆ ರಾಖಿ ಕಳುಹಿಸಿದ ಪಾಕ್​ ಪ್ರಜೆ ಸೀಮಾ ಹೈದರ್ - ಸಚಿನ್​ ಮೀನಾ

Seema Haider sends rakhis to PM Modi: ಭಾರತದಾದ್ಯಂತ ಆಗಸ್ಟ್​ 30ರಂದು ರಕ್ಷಾ ಬಂಧನ ಹಬ್ಬ ಇದೆ. ಇದರ ಪ್ರಯುಕ್ತ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್​ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಸೇರಿ ಪ್ರಮುಖರಿಗೆ ರಾಖಿ ಕಳುಹಿಸಿದ್ದಾರೆ.

Seema Haider sends rakhis to Modi, Bhagwat, Shah, Rajnath on Raksha Bandhan
ಪ್ರಧಾನಿ ಮೋದಿ, ಅಮಿತ್​ ಶಾ, ಯೋಗಿ, ಮೋಹನ್​ ಭಾಗವತ್​ಗೆ ರಾಖಿ ಕಳುಹಿಸಿದ ಪಾಕ್​ ಪ್ರಜೆ ಸೀಮಾ ಹೈದರ್
author img

By ETV Bharat Karnataka Team

Published : Aug 22, 2023, 5:46 PM IST

ನೋಯ್ದಾ (ಉತ್ತರ ಪ್ರದೇಶ): ಆನ್​ಲೈನ್​ ಗೇಮ್​ನಲ್ಲಿ ಪರಿಚಯವಾದ ಗೆಳೆಯನಿಗಾಗಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್​ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​) ಮುಖ್ಯಸ್ಥ ಮೋಹನ್​ ಭಾಗವತ್​ ಅವರಿಗೆ ರಾಖಿಗಳನ್ನು ರವಾನಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಸೀಮಾ ರಾಖಿಗಳ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಅಕ್ರಮವಾಗಿ ಭಾರತಕ್ಕೆ ಬಂದ ಸೀಮಾ ಹೈದರ್​​ಗೆ ಸಿನಿಮಾ ಚಾನ್ಸ್​.. ಬಾಲಿವುಡ್​ ಚಿತ್ರದಲ್ಲಿ 'ರಾ' ಏಜೆಂಟ್ ಪಾತ್ರ?

ಸಹೋದರ ಹಾಗೂ ಸಹೋದರಿಯರ ಮಧುರ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್​ 30ರಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಅಲಂಕಾರಿಕ ಮಣಿಗಳು ಹಾಗೂ ದಾರದಿಂದ ತಯಾರಿಸಿದ ರಾಖಿಗಳನ್ನು ಸಹೋದರರ ಕೈಗೆ ಕಟ್ಟುವ ಮೂಲಕ ಸಹೋದರಿಯರು ವಿಶೇಷ ಹಬ್ಬ ಆಚರಿಸುತ್ತಾರೆ. ಈ ರಾಖಿ ಹಬ್ಬ ರಕ್ಷಣೆಯ ಸಂಕೇತವನ್ನು ಬಿಂಬಿಸುತ್ತವೆ. ಇದರ ನಡುವೆ ಪ್ರಧಾನಿ ಮೋದಿ ಸೇರಿ ಪ್ರಮುಖರಿಗೆ ಕಳುಹಿಸುವ ನಿಟ್ಟಿಬಲ್ಲಿ ಪಾಕಿಸ್ತಾನಿ ಪ್ರಜೆಯಾದ 30 ವರ್ಷದ ಸೀಮಾ ಹೈದರ್​ ರಾಖಿಗಳನ್ನು ಪ್ಯಾಕ್​ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

''ದೇಶದ ಜವಾಬ್ದಾರಿಯನ್ನು ಹೆಗಲ ಮೇಲೆ ವಹಿಸಿಕೊಂಡಿರುವ ನನ್ನ ಆತ್ಮೀಯ ಸಹೋದರರಿಗೆ ಸರಿಯಾದ ಸಮಯಕ್ಕೆ ತಲುಪಿಸುವ ನಿಟ್ಟಿನಲ್ಲಿ ರಾಖಿಗಳನ್ನು ಮುಂಚಿತವಾಗಿ ಪೋಸ್ಟ್​ ಮಾಡುತ್ತಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ. ಜೈ ಶ್ರೀರಾಮ್, ಜೈ ಹಿಂದ್​, ಹಿಂದೂಸ್ಥಾನ್ ಜಿಂದಾಬಾದ್​'' ಎಂದು ಸೀಮಾ ವಿಡಿಯೋವೊಂದರಲ್ಲಿ ಹೇಳಿದ್ದಾರೆ. ಅಲ್ಲದೇ, ಸೀಮಾ ತಮ್ಮ ಮಕ್ಕಳೊಂದಿಗೆ ಸೇರಿಕೊಂಡು ರಾಖಿಗಳನ್ನು ಫ್ಯಾಕ್​ ಮಾಡುತ್ತಿದ್ದು, ಹಿನ್ನೆಲೆಯಲ್ಲಿ ''ಭಾಯ್ ಮೇರೆ ರಾಖಿ ಕೇ ಬಂಧನ್ ಕೋ ನಿಭಾನಾ.." (ಸಹೋದರ ನನ್ನ ರಾಖಿಯ ಬಂಧವನ್ನು ಪೂರೈಸು..) ಎಂಬ ಹಿಂದಿ ಹಾಡು ಕೇಳುತ್ತಿರುವ ಮತ್ತೊಂದು ವಿಡಿಯೋ ಸಹ ಹರಿದಾಡುತ್ತಿದೆ.

ಇದನ್ನೂ ಓದಿ: Seema Haider: ಭಾರತ-ನೇಪಾಳ ಗಡಿಯಲ್ಲಿ ಸೀಮಾ ಹೈದರ್ ಒಳಬಿಟ್ಟ ಇನ್ಸ್‌ಪೆಕ್ಟರ್,​ ಕಾನ್‌ಸ್ಟೇಬಲ್ ಸಸ್ಪೆಂಡ್‌

ಸೀಮಾ ಹಿನ್ನೆಲೆ...: ಮೂಲತಃ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನಿವಾಸಿಯಾಗಿರುವ ಸೀಮಾ ಹೈದರ್​ಗೆ ಪಾಕಿಸ್ತಾನದಲ್ಲೇ ಮೊದಲ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. 2019-20ರಲ್ಲಿ ಪಬ್​ಜಿ ಆನ್​ಲೈನ್​ ಗೇಮ್​ನಲ್ಲಿ ಭಾರತದ ಸಚಿನ್​ ಮೀನಾ ಎಂಬಾತನ ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಹಾಗೂ ಪ್ರೀತಿ ಬೆಳೆದಿದೆ ಎಂದು ಹೇಳಿಕೊಂಡಿದ್ದಾರೆ. ಮೇ ತಿಂಗಳಲ್ಲಿ ಪ್ರಿಯಕರ ಸಚಿನ್​ಗಾಗಿ ನಾಲ್ವರು ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ಸೀಮಾ ಭಾರತಕ್ಕೆ ಪ್ರವೇಶಿಸಿದ್ದಾರೆ.

ಅಲ್ಲಿಂದ ಸಚಿನ್​ ಹಾಗೂ ಸೀಮಾ ಗ್ರೇಟರ್​ ನೋಯ್ಡಾದ ರಾಬುಪುರ ಎಂಬಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ಸೀಮಾ ಅಕ್ರಮವಾಗಿ ವಾಸಗಿರುವ ಮಾಹಿತಿ ಸಿಕ್ಕ ಬಳಿಕ ಜುಲೈ 4ರಂದು ಬಂಧಿಸಲಾಗಿತ್ತು. ನಂತರ ಸ್ಥಳೀಯ ನ್ಯಾಯಾಲಯವು ಜುಲೈ 7ರಂದು ಜಾಮೀನು ನೀಡಿತ್ತು. ಸದ್ಯ ಕೂಡ ಗ್ರೇಟರ್​ ನೋಯ್ಡಾದಲ್ಲೇ ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದು, ಸೀಮಾ ಬಗ್ಗೆ ಸ್ಥಳೀಯ ಪೊಲೀಸರು ಹಾಗೂ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಪ್ರತ್ಯೇಕವಾದ ತನಿಖೆ ನಡೆಸುತ್ತಿದೆ. (ಪಿಟಿಐ)

ಇದನ್ನೂ ಓದಿ: Seema Haider: ಕರಾಚಿಯಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್​ಳಿಂದ​ 'ಪಾಕಿಸ್ತಾನ ಮುರ್ದಾಬಾದ್​' ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.