ETV Bharat / bharat

ಬಾನಂಗಳದಲ್ಲಿ ಇಂದು ವಿಸ್ಮಯ: ಸೂಪರ್​ ಬ್ಲೂ ಮೂನ್​ನ ರಹಸ್ಯವೇನು..!? - ಬ್ಲೂ ಮೂನ್​ನಿಂದ ಕಣ್ಣಿಗೆ ಏನಾದ್ರೂ ತೊಂದರೆ

Super Blue Moon: ನಾವೆಲ್ಲರೂ ಇಂದು ಖಗೋಳದಲ್ಲಿ ಆಗುವ ವಿಸ್ಮಯವನ್ನು ನೋಡಲಿದ್ದೇವೆ. ಇಂದು ರಾತ್ರಿ ಆಕಾಶದಲ್ಲಿ ಸೂಪರ್ ಬ್ಲೂ ಮೂನ್ ಕಾಣಿಸಲಿದೆ.

See the amazing view of Super Blue Moon today  Super Blue Moon  Super Blue Moon latest news  Super Blue Moon news in hindi  ಬಾನಂಗಳದಲ್ಲಿ ಇಂದು ವಿಸ್ಮಯ  ಸೂಪರ್​ ಬ್ಲೂ ಮೂನ್​ನ ರಹಸ್ಯ  ಖಗೋಳದಲ್ಲಿ ಆಗುವ ವಿಸ್ಮಯ  ಆಕಾಶದಲ್ಲಿ ಸೂಪರ್ ಬ್ಲೂ ಮೂನ್  ಬ್ಲೂ ಮೂನ್ ಎಂದು ಏಕೆ ಕರೆಯುತ್ತಾರೆ  ಬ್ಲೂ ಮೂನ್​ನಿಂದ ಕಣ್ಣಿಗೆ ಏನಾದ್ರೂ ತೊಂದರೆ  ಚಂದ್ರ ದೋಷದಿಂದ ಮುಕ್ತಿ ಪಡೆಯಲು ಈ ದಿನ ಶುಭ
ಸೂಪರ್​ ಬ್ಲೂ ಮೂನ್​ನ ರಹಸ್ಯವೇನು..!?
author img

By ETV Bharat Karnataka Team

Published : Aug 30, 2023, 1:36 PM IST

ಗೋರಖ್‌ಪುರ, ಉತ್ತರಪ್ರದೇಶ: ಆಗಸ್ಟ್ ತಿಂಗಳಿನಲ್ಲಿ ಆಕಾಶದಲ್ಲಿ ಅನೇಕ ಖಗೋಳ ಘಟನೆಗಳು ಸಂಭವಿಸಿವೆ. ಚಂದ್ರಯಾನ -3 ಸಹ ದಕ್ಷಿಣ ಧ್ರುವದಲ್ಲಿ ಇಳಿದಿದೆ. ಇದಾದ ಬಳಿಕ ಚಂದ್ರನ ಬಗ್ಗೆ ಜನರಲ್ಲಿ ಸಾಕಷ್ಟು ಆಕರ್ಷಣೆ ಮೂಡಿದೆ. ಆಗಸ್ಟ್ 30 ರ ಬುಧವಾರದಂದು ಅಂದರೆ ಇಂದು ಮತ್ತೊಂದು ಖಗೋಳ ಘಟನೆ ನಡೆಯಲಿದ್ದು, ರಾತ್ರಿಯಲ್ಲಿ ಆಕಾಶದಲ್ಲಿ ಸೂಪರ್ ಬ್ಲೂ ಮೂನ್ ಗೋಚರಿಸಲಿದೆ.

ಈ ದಿನ ಚಂದ್ರನು ದೊಡ್ಡದಾಗಿ ಮತ್ತು ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತಾನೆ. ಚಂದ್ರನು ತನ್ನ ಸಾಮಾನ್ಯ ಗಾತ್ರಕ್ಕಿಂತ ಸುಮಾರು 8 ಪ್ರತಿಶತದಷ್ಟು ದೊಡ್ಡದಾಗಿ ಕಾಣಿಸಿಕೊಳ್ಳುತ್ತಾನೆ ಎಂದು ಖಗೋಳಶಾಸ್ತ್ರಜ್ಞರು ಹೇಳುತ್ತಾರೆ. ಇದನ್ನು ಸೂಪರ್ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನವು ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ದಿನದಂದು ಭಕ್ತರು ಶಿವನಿಗೆ ರುದ್ರಾಭಿಷೇಕವನ್ನು ಮಾಡುತ್ತಾರೆ, ಆಗ ಅವರಿಗೆ ಲಾಭವಾಗುತ್ತದೆ ಎನ್ನುತ್ತಾರೆ.

ಅಷ್ಟಕ್ಕೂ ಇದನ್ನು ಬ್ಲೂ ಮೂನ್ ಎಂದು ಏಕೆ ಕರೆಯುತ್ತಾರೆ?: ಒಂದು ತಿಂಗಳಲ್ಲಿ ಎರಡು ಹುಣ್ಣಿಮೆಗಳು ಬಂದಾಗ ಎರಡನೇ ಹುಣ್ಣಿಮೆಯನ್ನು ಬ್ಲೂ ಮೂನ್ ಅಥವಾ ಸೂಪರ್ ಬ್ಲೂ ಮೂನ್ ಎಂದು ಕರೆಯಲಾಗುತ್ತದೆ ಎಂದು ಗೋರಖ್‌ಪುರದ ವೀರ್ ಬಹದ್ದೂರ್ ಸಿಂಗ್ ಪ್ಲಾನೆಟೋರಿಯಂನ ಖಗೋಳಶಾಸ್ತ್ರಜ್ಞ ಅಮರ್‌ಪಾಲ್ ಸಿಂಗ್ ಹೇಳಿದ್ದಾರೆ. ಚಂದ್ರನನ್ನು ನೋಡುವಾಗ ಅದರ ಬಣ್ಣದಲ್ಲಿ ಕೊಂಚ ಬದಲಾವಣೆ ಕಂಡರೂ ವಾತಾವರಣದಲ್ಲಿರುವ ಸಣ್ಣ ಸಣ್ಣ ಧೂಳು, ಅನಿಲ ಕಣಗಳ ಮೇಲೆ ಬೀಳುವ ಬೆಳಕಿನ ಚದುರುವಿಕೆಯೇ ಕಾರಣ ಎಂದು ಹೇಳಿದ್ದಾರೆ.

ಸೂಪರ್​ ಮೂನ್​ ಎಂದರೇನು?: ಚಂದ್ರನ ಕಕ್ಷೆ ಭೂಮಿಯ ಹತ್ತಿರಕ್ಕೆ ಬರುತ್ತದೆ. ಈ ವೇಳೆ, ಚಂದ್ರನ ಸರಾಸರಿ ಗಾತ್ರದ ಶೇ 8ರಷ್ಟು ಮತ್ತು ಚಂದ್ರನ ಹೊಳಪಿನ ಶೇ 16ರಷ್ಟು ಹೆಚ್ಚಿರುತ್ತದೆ. ಚಂದ್ರನ ಕಕ್ಷೆ ಸರಿಯಾದ ವೃತ್ತಕಾರದಲ್ಲಿಲ್ಲ. ಕೆಲವು ವೇಳೆ ಇದು ತನ್ನ ಕಕ್ಷೆಗಿಂತ ಭೂಮಿಗೆ ಹತ್ತಿರವಿರುತ್ತದೆ. ಹಳೆ ರೈತ ಪಂಚಾಂಗದ ಪ್ರಕಾರ ಪೂರ್ಣ ಚಂದ್ರ ಆಗಸ್ಟ್​ 30ರಂದು ರಾತ್ರಿ 9:36ಕ್ಕೆ ಉಚ್ಛ್ರಾಯ ಸ್ಥಿತಿಯಲ್ಲಿ ಇರುತ್ತದೆ.

ಬ್ಲೂ ಮೂನ್​ ಎಂದರೇನು?: ನಾಸಾ ವರದಿಯಂತೆ, ಬ್ಲೂ ಮೂನ್​ನಲ್ಲಿ ಎರಡು ವಿಧ. ಒಂದು ಮಾಸಿಕ, ಮತ್ತೊಂದು ಋತುಮಾನ ಆಧಾರಿತ. ಮಾಸಿಕ ಬ್ಲೂ ಮೂನ್​ ಕ್ಯಾಲೆಂಡರ್​ ತಿಂಗಳಲ್ಲಿನ ಎರಡು ಪೂರ್ಣ ಚಂದ್ರನ ಎರಡನೇ ಪೂರ್ಣ ಚಂದ್ರವಾಗಿದೆ. ಋತುಮಾನದ ಚಂದ್ರ ಎಂದರೆ ಖಗೋಳ ಋತುವಿನ ಮೂರನೇ ಹುಣ್ಣಿಮೆ.

ಬ್ಲೂ ಮೂನ್​ ಎಂದು ಈ ಪೂರ್ಣಿಮೆಗೆ ಹೆಸರಿದ್ದರೂ, ಇದು ನೀಲಿ ಬಣ್ಣದಲ್ಲಿ ಇರುವುದಿಲ್ಲ. ಸಾಮಾನ್ಯ ಹುಣ್ಣಿಮೆ ಚಂದ್ರನ ಬಣ್ಣವನ್ನೇ ಹೊಂದಿರುತ್ತದೆ. ಸಾಮಾನ್ಯವಾಗಿ ಎರಡರಿಂದ ಮೂರು ವರ್ಷಗಳಿಗೊಮ್ಮೆ ಈ ರೀತಿಯ ಬ್ಲೂಮೂನ್​ಗಳು ಕಾಣ ಸಿಗುತ್ತವೆ. ಆಗಸ್ಟ್​ 1ರಂದು ಮೊದಲ ಬ್ಲೂಮೂನ್​ ಕಾಣಿಸಿಕೊಂಡರೆ, ಆಗಸ್ಟ್​ 30ರಂದು ಕಡೆಯ ಈ ಮಾಸದ ಎರಡನೇ ಸೂಪರ್‌ಮೂನ್ ಗೋಚರಿಸುತ್ತದೆ. ಇದು ಕೇವಲ ಖಗೋಳ ವಿದ್ಯಮಾನವಾಗಿದೆ. ಮುಂದಿನ ಬಾರಿ ಈ ಖಗೋಳ ಘಟನೆಯು 19 ಅಥವಾ 20 ಆಗಸ್ಟ್ 2024 ರಂದು ಸಂಭವಿಸುತ್ತದೆ ಎಂದು ಖಗೋಳಶಾಸ್ತ್ರಜ್ಞ ಅಮರ್‌ಪಾಲ್ ಸಿಂಗ್ ಹೇಳಿದರು.

ಬ್ಲೂ ಮೂನ್​ನಿಂದ ಕಣ್ಣಿಗೆ ಏನಾದ್ರೂ ತೊಂದರೆ ಆಗುವುದೇ?: ನೀವು ರಾತ್ರಿಯಲ್ಲಿ ಆಕಾಶ ವೀಕ್ಷಿಸಬಹುದು. ಚಂದ್ರನ ಆಕಾರ ಮತ್ತು ಹೊಳಪಿನ ಬದಲಾವಣೆಯನ್ನು ನಿಮ್ಮ ಕಣ್ಣುಗಳಿಂದ ಸುಲಭವಾಗಿ ನೋಡಬಹುದಾಗಿದೆ. ವಿಶೇಷ ಬೈನಾಕ್ಯುಲರ್‌ಗಳ ಮೂಲಕ ಈ ವಿದ್ಯಮಾನವನ್ನು ಹತ್ತಿರದಿಂದ ನೋಡಬಹುದು. ಇಲ್ಲವಾದಲ್ಲಿ ಗೋರಖ್​ಪುರನ ವಾಸಿಗಳು ವೀರ್ ಬಹದ್ದೂರ್ ಸಿಂಗ್ ನಕ್ಷತ್ರ ಶಾಲೆ (ಪ್ಲಾನೆಟೋರಿಯಂ) ಭೇಟಿ ನೀಡಬಹುದು. ಇತರರು ಸ್ಥಳೀಯ ಅಥವಾ ಹತ್ತಿರದ ಪ್ಲಾನೆಟೋರಿಯಂಗೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ. ಈ ಹುಣ್ಣಿಮೆ ಅಥವಾ ಬ್ಲೂ ಮೂನ್ / ಸೂಪರ್ ಬ್ಲೂ ಮೂನ್ ಬಗ್ಗೆ ವಿವರವಾದ ಮಾಹಿತಿಯನ್ನು ಸಹ ಪಡೆಯಬಹುದು ಎಂದು ಖಗೋಳಶಾಸ್ತ್ರಜ್ಞ ಅಮರ್ ಪಾಲ್ ಸಿಂಗ್ ಅವರು ಹೇಳಿದರು.

ಚಂದ್ರ ದೋಷದಿಂದ ಮುಕ್ತಿ ಪಡೆಯಲು ಈ ದಿನ ಶುಭ: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ದಿನವನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಭಕ್ತರು ಈ ದಿನ ಶಿವನ ರುದ್ರಾಭಿಷೇಕವನ್ನು ಮಾಡುತ್ತಾರೆ, ನಂತರ ಅವರು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಇದರೊಂದಿಗೆ ಚಂದ್ರ ದೋಷ ಇರುವವರು ಕೂಡ ಈ ದೋಷದಿಂದ ಮುಕ್ತಿ ಪಡೆಯಬಹುದು. ಯಾರಿಗಾದರೂ ಜಾತಕದಲ್ಲಿ ಚಂದ್ರ ದೋಷವಿದ್ದರೆ ಅವರು ಬಿಳಿ ವಸ್ತುಗಳನ್ನು ದಾನ ಮಾಡುವುದರಿಂದ ಲಾಭವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಮಹತ್ವದ ದಿನವಾಗಿರುತ್ತದೆ.

ಓದಿ: Supermoon: ಆಗಸ್ಟ್ ತಿಂಗಳು ಆಗಸದಲ್ಲಿ ಅಚ್ಚರಿ; ಒಂದೇ ತಿಂಗಳಲ್ಲಿ ಬ್ಲೂ ಮೂನ್, ಸೂಪರ್‌ಮೂನ್ ಮೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.