ನವದೆಹಲಿ: 72ನೇ ಗಣರಾಜ್ಯೋತ್ಸವ ಹಾಗೂ ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರ ಟ್ರ್ಯಾಕ್ಟರ್ ರ‍್ಯಾಲಿ ಹಿನ್ನೆಲೆ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.
ದೆಹಲಿಯ ಐಟಿಒ, ಯಮುನಾ ಸೇತುವೆ ಮತ್ತು ಸುಬ್ರಮಣ್ಯಂ ಭಾರತಿ ಮಾರ್ಗ ಪ್ರದೇಶ ಸೇರಿದಂತೆ ಹಲವೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಹಲವೆಡೆಗಳಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ.
-
#WATCH: Delhi police put up barriers on GT Karnal road.#RepublicDay pic.twitter.com/cRPksgDG1Y
— ANI (@ANI) January 25, 2021 " class="align-text-top noRightClick twitterSection" data="
">#WATCH: Delhi police put up barriers on GT Karnal road.#RepublicDay pic.twitter.com/cRPksgDG1Y
— ANI (@ANI) January 25, 2021#WATCH: Delhi police put up barriers on GT Karnal road.#RepublicDay pic.twitter.com/cRPksgDG1Y
— ANI (@ANI) January 25, 2021
ಕೊರೊನಾ ಸೋಂಕಿನ ಹಿನ್ನೆಲೆ ಈ ಬಾರಿ ಗಣರಾಜ್ಯೋತ್ಸವ ಆಚರಣೆ ಸರಳವಾಗಿ ನಡೆಯಲಿದೆ. ಮೆರವಣಿಗೆ ವೀಕ್ಷಿಸುವ ಜನರ ಸಂಖ್ಯೆಯನ್ನೂ ತಗ್ಗಿಸಲಾಗಿದೆ. ಪ್ರತಿ ಬಾರಿ ಸುಮಾರು ಒಂದೂವರೆ ಲಕ್ಷ ಜನರು ಮೆರವಣಿಗೆ ನೋಡಲು ಆಗಮಿಸುತ್ತಿದ್ದು, ಈ ಬಾರಿ 25 ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ.
ಮುಂಬೈನಲ್ಲೂ ಭದ್ರತೆ:
ಮುಂಬೈನಲ್ಲೂ ಕೂಡ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೊಲೀಸರು ಪ್ರತಿ ವಾಹನಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.