ETV Bharat / bharat

ಹಿಮಾಚಲ ಪ್ರದೇಶ ಚುನಾವಣೆ: ಮತದಾನ ಆರಂಭ, 68 ಕ್ಷೇತ್ರಗಳಲ್ಲಿ ಹಕ್ಕು ಚಲಾವಣೆ - Himachal Pradesh Assembly Election live updates

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಲಿದೆ. ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಬಾರಿ ರಾಜ್ಯದಲ್ಲಿ 55 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಮತ ಚಲಾಯಿಸಲಿದ್ದು, 412 ಅಭ್ಯರ್ಥಿಗಳ ಭವಿಷ್ಯ ಇವಿಎಂ ಸೇರಲಿದೆ.

security personnel deployed  ensure free fair polls in Himachal  Himachal Pradesh Assembly election 2022  Himachal Pradesh Assembly election voting  ಹಿಮಾಚಲ ವಿಧಾನಸಭೆ ಚುನಾವಣೆ  ಇವಿಎಂನಲ್ಲಿ ಭದ್ರವಾಗಲಿದೆ 412 ಅಭ್ಯರ್ಥಿಗಳ ಭವಿಷ್ಯ  ಮತದಾನ ಕೇಲವೇ ಕ್ಷಣಗಳಲ್ಲಿ ಆರಂಭ  ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ  ವಿಧಾನಸಭೆ ಚುನಾವಣೆಯ ಮತದಾನ ಆರಂಭ  ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಬೂತ್‌ಗಳು  ಹಿಮಾಚಲದಲ್ಲಿ ಎಷ್ಟು ಮತದಾರರು  ಕಣದಲ್ಲಿ ಎಷ್ಟು ಅಭ್ಯರ್ಥಿಗಳು  ಮಹಿಳಾ ಅಭ್ಯರ್ಥಿಗಳೂ ಕಣದಲ್ಲಿ  ಈ ಬಾರಿ ದಾಖಲೆಯ ಮತದಾನದ ನಿರೀಕ್ಷೆ  ಮತಗಟ್ಟೆಯಲ್ಲಿ ಪೊಲೀಸರ ಸರ್ಪಗಾವಲು  ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022
ಹಿಮಾಚಲ ವಿಧಾನಸಭೆ ಚುನಾವಣೆ
author img

By

Published : Nov 12, 2022, 7:23 AM IST

Updated : Nov 12, 2022, 10:39 AM IST

ಶಿಮ್ಲಾ(ಹಿಮಾಚಲ): ಸ್ವತಂತ್ರ ಭಾರತದ ಮೊದಲ ಮತದಾರ ದಿವಂಗತ ಶ್ಯಾಮ್ ಶರಣ್ ನೇಗಿ ಅವರ ತವರು ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಮತದಾನ ಆರಂಭವಾಗಿದೆ. 14ನೇ ವಿಧಾನಸಭೆ ಚುನಾವಣೆಯ ಮತದಾನ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಡೆಯಲಿದೆ. ರಾಜ್ಯದ ಎಲ್ಲ 68 ಕ್ಷೇತ್ರಗಳಲ್ಲಿ ಏಕಕಾಲಕ್ಕೆ ಮತದಾನ ನಡೆಯಲಿದ್ದು, ಇದಕ್ಕಾಗಿ ಒಟ್ಟು 7,881 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಶುಕ್ರವಾರದಂದು ಎಲ್ಲಾ ಇವಿಎಂಗಳು ಮತಗಟ್ಟೆಗೆ ತಲುಪಿವೆ.

ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಬೂತ್‌ಗಳು: ಶಾಂತ ರಾಜ್ಯವೆಂದು ಪರಿಗಣಿಸಲ್ಪಟ್ಟಿರುವ ಹಿಮಾಚಲದಲ್ಲಿ ಚುನಾವಣಾ ಸಮಯದಲ್ಲಿ ಹಿಂಸಾಚಾರದ ಘಟನೆಗಳು ಅತ್ಯಲ್ಪ. ಆದರೂ ರಾಜ್ಯದ 789 ಬೂತ್‌ಗಳು ಸೂಕ್ಷ್ಮವಾಗಿದ್ದು, 397 ಬೂತ್‌ಗಳು ಅತಿ ಸೂಕ್ಷ್ಮ ವಿಭಾಗದಲ್ಲಿವೆ. ಈ ಬಾರಿ ಚುನಾವಣೆಯಲ್ಲಿ 31,536 ಉದ್ಯೋಗಿಗಳು ಮತದಾನ ಪ್ರಕ್ರಿಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಿಮಾಚಲದಲ್ಲಿ ಎಷ್ಟು ಮತದಾರರು: ಚುನಾವಣಾ ಆಯೋಗದ ಪ್ರಕಾರ ಈ ಬಾರಿ ಹಿಮಾಚಲ ಪ್ರದೇಶದಲ್ಲಿ 55,92,828 ಮತದಾರರಿದ್ದಾರೆ. ಇವರಲ್ಲಿ 28,54,945 ಪುರುಷರು, 27,37,845 ಮಹಿಳೆಯರು ಮತ್ತು 38 ತೃತೀಯಲಿಂಗಿ ಮತದಾರರಿದ್ದಾರೆ. ಒಟ್ಟು 7,881 ಮತಗಟ್ಟೆಗಳ ಪೈಕಿ 7,235 ಗ್ರಾಮೀಣ ಪ್ರದೇಶದಲ್ಲಿದ್ದರೆ, 646 ಮತಗಟ್ಟೆಗಳು ನಗರ ಪ್ರದೇಶದಲ್ಲಿವೆ.

ಹಿಮಾಚಲದ 14ನೇ ವಿಧಾನಸಭೆಗೆ ಈ ಬಾರಿ 18-19 ವರ್ಷದೊಳಗಿನ 1,93,106 ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ. 2017ರಲ್ಲಿ ಈ ವಯೋಮಾನದ ಹದಿಹರೆಯದ ಮತದಾರರ ಸಂಖ್ಯೆ 1,10,039 ಇತ್ತು. ಕಳೆದ ಬಾರಿ ಮಹಿಳಾ ಮತದಾರರ ಸಂಖ್ಯೆ 24,07,503 ಆಗಿತ್ತು. ಇದು ಒಟ್ಟು ಮತದಾರರ ಶೇಕಡಾ 49.07 ರಷ್ಟಿತ್ತು. ಇನ್ನು 80 ವರ್ಷ ಮೇಲ್ಪಟ್ಟವರ ಬಗ್ಗೆ ಹೇಳುವುದಾದರೆ 1,21,409 ಹಿರಿಯ ಮತದಾರರಿದ್ದಾರೆ. ದಿವ್ಯಾಂಗ ಮತದಾರರ ಸಂಖ್ಯೆ 56,501 ಇದೆ.

ಕಣದಲ್ಲಿ ಎಷ್ಟು ಅಭ್ಯರ್ಥಿಗಳು: ರಾಜ್ಯದ 68 ವಿಧಾನಸಭಾ ಸ್ಥಾನಗಳಿಗೆ ಈ ಬಾರಿ 412 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲಾ 68 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಆಮ್ ಆದ್ಮಿ ಪಕ್ಷ 67 ಮತ್ತು ಬಿಎಸ್ಪಿ 53 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಹಿಮಾಚಲದ ರಾಜಕೀಯ ಕಣದಲ್ಲಿ ಒಟ್ಟು 13 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ರಾಷ್ಟ್ರೀಯ ದೇವಭೂಮಿ ಪಕ್ಷ 29, ಸಿಪಿಐ(ಎಂ) 11, ಹಿಮಾಚಲ ಜನ ಕ್ರಾಂತಿ ಪಕ್ಷ 6, ಹಿಂದೂ ಸಮಾಜ ಪಕ್ಷ ಮತ್ತು ಸ್ವಾಭಿಮಾನ್ ಪಕ್ಷ ತಲಾ 3, ಹಿಮಾಚಲ ಜನತಾ ಪಕ್ಷ, ಭಾರತೀಯ ವೀರ ದಳ, ಸೈನಿಕ ಸಮಾಜ ಪಕ್ಷ, ರಾಷ್ಟ್ರೀಯ ಲೋಕನೀತಿ ಪಕ್ಷ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಒಂದೊಂದು ಅಭ್ಯರ್ಥಿ ಕಣದಲ್ಲಿದ್ದಾರೆ. 99 ಸ್ವತಂತ್ರ ಅಭ್ಯರ್ಥಿಗಳು ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.

24 ಮಹಿಳಾ ಅಭ್ಯರ್ಥಿಗಳು ಕಣದಲ್ಲಿ: ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 412 ಮಂದಿಯಲ್ಲಿ 24 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಬಿಜೆಪಿ 7 ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಆಮ್ ಆದ್ಮಿ ಪಕ್ಷ 5 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಚುನಾವಣಾ ಮೈದಾನದಲ್ಲಿ ಕಾಂಗ್ರೆಸ್ 3, ಬಿಎಸ್ಪಿ 2 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಂಗ್ರಾ ಜಿಲ್ಲೆಯಿಂದ ಗರಿಷ್ಠ 91 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 15 ವಿಧಾನಸಭಾ ಸ್ಥಾನಗಳಿವೆ. ಲಾಹೌಲ್ ಸ್ಪಿತಿ ಮತ್ತು ಕಿನ್ನೌರ್ ಜಿಲ್ಲೆಗಳಲ್ಲಿ ತಲಾ ಒಂದು ವಿಧಾನಸಭಾ ಸ್ಥಾನವಿದೆ. ಕಿನ್ನೌರ್‌ನಲ್ಲಿ 5 ಮತ್ತು ಲಾಹೌಲ್ ಸ್ಪಿತಿಯಲ್ಲಿ 3 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಡಿ ಜಿಲ್ಲೆಯ ಜೋಗಿಂದರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ 11 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಲಹೌಲ್ ಸ್ಪಿತಿ, ಡ್ರಂಗ್ ಮತ್ತು ಚುರಾ ಕ್ಷೇತ್ರಗಳಲ್ಲಿ ಕೇವಲ 3-3 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಹಿಮಾಚಲದ ಚುನಾವಣಾ ಇತಿಹಾಸದಲ್ಲಿ 2012 ರ ಚುನಾವಣೆಯಲ್ಲಿ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳು ನೋಂದಾಯಿಸಲ್ಪಟ್ಟಿದ್ದರು. ನಂತರ ರಾಜ್ಯದ 68 ಸ್ಥಾನಗಳಿಗೆ ಒಟ್ಟು 459 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿದೆ. ಹಿಮಾಚಲದಲ್ಲಿ ಕಳೆದ ಚುನಾವಣೆಯಲ್ಲಿ 337 ಅಭ್ಯರ್ಥಿಗಳಿದ್ದರು. ಈ ಬಾರಿ ಅವರ ಸಂಖ್ಯೆ 412 ಆಗಿದೆ. 1993 ರಲ್ಲಿ ಹಿಮಾಚಲದಲ್ಲಿ ಅಭ್ಯರ್ಥಿಗಳ ಸಂಖ್ಯೆ 416 ಆಗಿತ್ತು. ಅಭ್ಯರ್ಥಿಗಳ ಸಂಖ್ಯೆ 1998 ರಲ್ಲಿ 369, 2003 ರಲ್ಲಿ 408 ಮತ್ತು 2007 ರಲ್ಲಿ 336.

ಈ ಬಾರಿ ದಾಖಲೆಯ ಮತದಾನದ ನಿರೀಕ್ಷೆ: ಹಿಮಾಚಲದಲ್ಲಿ ಶೇಕಡ 70ರಷ್ಟು ಮತದಾನವಾಗಿದೆ. 2017ರಲ್ಲಿ ಶೇ.74.64ರಷ್ಟು ಮತದಾನವಾಗಿದ್ದರೆ, ಅದಕ್ಕೂ ಮುನ್ನ 2003ರ ಚುನಾವಣೆಯಲ್ಲಿ ಶೇ.74.51ರಷ್ಟು ಮತದಾನವಾಗಿತ್ತು. ಈ ಬಾರಿ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಮತದಾರರ ಸಂಖ್ಯೆ ಹೆಚ್ಚಿದಂತೆ ಮತಗಟ್ಟೆಗಳ ಸಂಖ್ಯೆಯೂ ಹೆಚ್ಚಿದೆ. ರಾಜ್ಯದಲ್ಲಿ ಮತದಾನ ಸುಗಮವಾಗಿ ನಡೆಯಲು 7,884 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ. ಕಳೆದ ಬಾರಿ 7,521 ಮತಗಟ್ಟೆಗಳಿದ್ದು, ಅಂದರೆ ಈ ಬಾರಿ ಹಿಂದಿಗಿಂತ 363 ಹೆಚ್ಚು ಮತಗಟ್ಟೆಗಳಿವೆ.

ಮತಗಟ್ಟೆಯಲ್ಲಿ ಪೊಲೀಸರ ಸರ್ಪಗಾವಲು: ಶನಿವಾರ ಶಾಂತಿಯುತ ಮತದಾನ ನಡೆಸಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 67 ಕಂಪನಿಗಳು ಮತ್ತು 11,500 ಕ್ಕೂ ಹೆಚ್ಚು ರಾಜ್ಯ ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 30,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಓದಿ: ಹಿಮಾಚಲ ಪ್ರದೇಶ ಚುನಾವಣೆ: ಇಲ್ಲೂ ಜಾತಿರಾಜಕಾರಣಕ್ಕೇ ಪ್ರಾಮುಖ್ಯತೆ.. ಹೀಗಿದೆ ಇಲ್ಲಿನ ಜಾತಿ ಸಮೀಕರಣ!

Last Updated : Nov 12, 2022, 10:39 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.