ETV Bharat / bharat

ಭದ್ರತಾ ಪಡೆಗಳಿಂದ ಐವರು ನಕ್ಸಲರ ಬಂಧನ

author img

By

Published : May 8, 2021, 9:06 AM IST

ಕಳೆದ ತಿಂಗಳು 22 ಮಂದಿ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ ಬಳಿಕ ನಕ್ಸಲರನ್ನು ಮಟ್ಟ ಹಾಕಲು ಭದ್ರತಾ ಪಡೆ ಪಣತೊಟ್ಟಿದ್ದು, ಇದೀಗ ಮತ್ತೆ ಐವರು ನಕ್ಸಲರನ್ನು ಬಂಧಿಸಿದೆ.

Detention of Naxals by security forces
ಭದ್ರತಾ ಪಡೆಗಳಿಂದ ನಕ್ಸಲರ ಬಂಧನ

ಚತ್ತೀಸ್ಗಢ : ನಕ್ಸಲ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಯ ಸಿಬ್ಬಂದಿಗೆ ದೊಡ್ಡ ಯಶಸ್ಸು ಸಿಕ್ಕಿದಂತಾಗಿದ್ದು, ರಾಜ್ಯದ 3 ಜಿಲ್ಲೆಗಳಲ್ಲಿ ಐವರು ಕೆಂಪು ಉಗ್ರರನ್ನು ಬಂಧಿಸಲಾಗಿದೆ.

ಬಂಧಿತರ ಪೈಕಿ ಇಬ್ಬರು ನಕ್ಸಲರು ಸಹಾಯಕ ಕಾನ್‌ಸ್ಟೇಬಲ್​ಗಳ ಹತ್ಯೆಯಲ್ಲಿ ಭಾಗಿಯಾದವರಾಗಿದ್ದು, ಇವರನ್ನು ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಬಂಧಿಸಿವೆ. ಬಂಧಿತರನ್ನು ಚಿಂಟಾಗುಫಾ ಮತ್ತು ಅಲರ್ಮಡ್ಗು ನಿವಾಸಿಗಳಾದ ಉಯ್ಕಾ ಅಯಾಟಾ ಮತ್ತು ಮಡ್ಕಮ್ ಹರಮ್ ಎಂದು ಗುರುತಿಸಲಾಗಿದೆ.

ಓದಿ : ಅರಣ್ಯಾಧಿಕಾರಿಯನ್ನು ಕೊಂದಿದ್ದ ಗಜರಾಜ.. ಬಂಧನಕ್ಕೊಳಗಾಗಿದ್ದ ಸಲಗ ಬಿಡುಗಡೆ

ಇನ್ನೋರ್ವ ದೀಪೇಶ್ ಹೆಮ್ಲಾನನ್ನು ಬಿಜಾಪುರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಈತನ ವಿರುದ್ಧ ಅಗ್ನಿ ಅನಾಹುತಗಳನ್ನು ನಡೆಸುವುದು ಸೇರಿದಂತೆ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಆರೋಪವಿದೆ.

ಇನ್ನುಳಿದ ಇಬ್ಬರು ಬಲ್ಕೂ ಮತ್ತು ಗೊಡ್ರು ಟಮೋ ಎಂಬುವರನ್ನು ದಂತೇವಾಡ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಈ ಪೈಕಿ ಓರ್ವನ ಕೈಯಲ್ಲಿ 1 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.