ETV Bharat / bharat

PM Security Breach : ತನಿಖಾ ಸಮಿತಿಗಳ ತನಿಖೆ ತಾತ್ಕಾಲಿಕ ಸ್ಥಗಿತ, ದಾಖಲೆ ಸಂಗ್ರಹಕ್ಕೆ ಸೂಚನೆ

ಪ್ರಧಾನಿ ಮೋದಿ ಪಂಜಾಬ್ ಭೇಟಿ ವೇಳೆ ಆದ ಭದ್ರತಾ ಲೋಪದ ಕುರಿತ ಅರ್ಜಿಯೊಂದರ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಿದೆ. ಸದ್ಯಕ್ಕಿರುವ ಸಮಿತಿಗಳ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ..

Security breach: SC puts probe committees on hold; asks HC official to secure records
PM Security Breach: ತನಿಖಾ ಸಮಿತಿಗಳು ತಾತ್ಕಾಲಿಕ ಸ್ಥಗಿತ, ದಾಖಲೆ ಸಂಗ್ರಹಣೆಗೆ ಅಧಿಕಾರಿಗೆ ಸೂಚನೆ
author img

By

Published : Jan 7, 2022, 1:35 PM IST

Updated : Jan 7, 2022, 2:05 PM IST

ನವದೆಹಲಿ : ಪ್ರಧಾನಿಗೆ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​​ನಲ್ಲಿ ವಿಚಾರಣೆ ನಡೆದಿದೆ. ಪ್ರಧಾನಿ ಮೋದಿಯವರು ಜನವರಿ 5ರಂದು ಪಂಜಾಬ್​ ರಾಜ್ಯದಲ್ಲಿ ಓಡಾಡಿದ ಎಲ್ಲಾ ಸ್ಥಳಗಳ ದಾಖಲೆ ಮತ್ತು ಪ್ರಧಾನಿ ಓಡಾಡಲು ಇದ್ದ ಸೌಕರ್ಯಗಳ ದಾಖಲೆಗಳನ್ನು ಸಂಗ್ರಹಿಸುವಂತೆ ಪಂಜಾಬ್ ಹೈಕೋರ್ಟ್​ನ ಉನ್ನತ ಅಧಿಕಾರಿಯೊಬ್ಬರಿಗೆ ಸೂಚನೆ ನೀಡಿದೆ.

ಇದರೊಂದಿಗೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭದ್ರತಾ ಲೋಪ ಕುರಿತಂತೆ ತನಿಖಾ ಸಮಿತಿಗಳನ್ನು ರಚನೆ ಮಾಡಿವೆ. ಈ ಸಮಿತಿಗಳು ಸೋಮವಾರದವರೆಗೆ ತಮ್ಮ ತನಿಖೆಯನ್ನ ಸ್ಥಗಿತಗೊಳಿಸಬೇಕೆಂದು ಸುಪ್ರೀಂಕೋರ್ಟ್​ ಆದೇಶಿಸಿದೆ.

ಸುಪ್ರೀಂಕೋರ್ಟ್​​ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರ ತ್ರಿಸದಸ್ಯ ಪೀಠವು ಪ್ರಧಾನಿ ಭೇಟಿಯ ವೇಳೆಯಲ್ಲಾದ ಭದ್ರತಾ ಲೋಪದ ಸಾಕ್ಷ್ಯಗಳನ್ನು ಸಂರಕ್ಷಿಸಲು ಮತ್ತು ತಪ್ಪು ಮಾಡಿದ ಪಂಜಾಬ್​ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ, ಈ ಆದೇಶ ನೀಡಿವೆ.

ಈ ಘಟನೆಯನ್ನು ಅಪರೂಪದಲ್ಲಿ ಅಪರೂಪ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಟೀಕಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರವನ್ನು ಈ ಘಟನೆ ಉಂಟು ಮಾಡಿದೆ ಎಂದು ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವರದಿಗಳನ್ನು ಆಲಿಸಿದ ಸುಪ್ರೀಂಕೋರ್ಟ್​, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ನ ರಿಜಿಸ್ಟ್ರಾರ್ ಜನರಲ್​ಗೆ ಪ್ರಧಾನಿ ಮೋದಿ ಪಂಜಾಜ್​ಗೆ ತೆರಳಿದ್ದ ವೇಳೆ ಯಾವ ರೀತಿಯಲ್ಲಿ ಸೌಕರ್ಯಗಳನ್ನು ನೀಡಲಾಗಿತ್ತು ಎಂಬ ಮಾಹಿತಿ ಸಂಗ್ರಹಣೆ ಮಾಡಲು ಸೂಚನೆ ನೀಡಿದೆ. ಆ ಅಧಿಕಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ನೀಡುವಂತೆ ನಿರ್ದೇಶನ ನೀಡಿದೆ.

ತನಿಖಾ ಸಮಿತಿಗಳು ತಾತ್ಕಾಲಿಕ ಸ್ಥಗಿತ : ಇದರ ಜೊತೆಗೆ ಕೇಂದ್ರ ಸರ್ಕಾರ ರಚನೆ ಮಾಡಿದ್ದ ಸಂಪುಟ ಸಚಿವಾಲಯದ ಕಾರ್ಯದರ್ಶಿ (ಭದ್ರತೆ) ಸುಧೀರ್ ಕುಮಾರ್ ಸಕ್ಸೇನಾ ನೇತೃತ್ವದ ಇಂಟೆಲಿಜೆನ್ಸ್​ ಬ್ಯೂರೋದ ಜಂಟಿ ನಿರ್ದೇಶಕ ಬಲ್ಬೀರ್ ಸಿಂಗ್ ಮತ್ತು ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್​ನ ಐಜಿ ಸುರೇಶ್ ಅವರು ಸದಸ್ಯರಾಗಿರುವ ತನಿಖಾ ಸಮಿತಿಯ ತನಿಖೆಯನ್ನು ಸೋಮವಾರದವರೆಗೆ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.

ಪಂಜಾಬ್ ಸರ್ಕಾರ ರಚನೆ ಮಾಡಿರುವ ನಿವೃತ್ತ ನ್ಯಾಯಮೂರ್ತಿ ಮೆಹ್ತಾಬ್ ಸಿಂಗ್ ಗಿಲ್, ಗೃಹ ವ್ಯವಹಾರಗಳ ಪ್ರಧಾನ ಕಾರ್ಯದರ್ಶಿ ಮತ್ತು ನ್ಯಾಯಮೂರ್ತಿಯಾದ ಅನುರಾಗ್ ವರ್ಮಾ ಸಮಿತಿಯ ತನಿಖೆಯನ್ನು ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ.

ಇದನ್ನೂ ಓದಿ: ದೆಹಲಿ-ಎನ್‌ಸಿಆರ್​ನಲ್ಲಿ ಕೋವಿಡ್ ಉಲ್ಬಣ : ಏಕೀಕೃತ ಕಾರ್ಯತಂತ್ರಕ್ಕೆ ಗೃಹ ಇಲಾಖೆ ಕರೆ

Last Updated : Jan 7, 2022, 2:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.