-
Independence Day 2023: Security beefed up in national capital, monuments lit up across country in Tricolour
— ANI Digital (@ani_digital) August 14, 2023 " class="align-text-top noRightClick twitterSection" data="
Read @ANI Story | https://t.co/XTbjPEaDYL#IndependenceDay #IndependenceDayIndia #Tricolour #Delhi pic.twitter.com/ktRSGkv9vX
">Independence Day 2023: Security beefed up in national capital, monuments lit up across country in Tricolour
— ANI Digital (@ani_digital) August 14, 2023
Read @ANI Story | https://t.co/XTbjPEaDYL#IndependenceDay #IndependenceDayIndia #Tricolour #Delhi pic.twitter.com/ktRSGkv9vXIndependence Day 2023: Security beefed up in national capital, monuments lit up across country in Tricolour
— ANI Digital (@ani_digital) August 14, 2023
Read @ANI Story | https://t.co/XTbjPEaDYL#IndependenceDay #IndependenceDayIndia #Tricolour #Delhi pic.twitter.com/ktRSGkv9vX
ನವದೆಹಲಿ: ಭಾರತದಾದ್ಯಂತ ಇಂದು 77 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ದಿನಾಚರಣೆಯ ಪೂರ್ವಭಾವಿಯಾಗಿ ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಪೊಲೀಸರು ಭದ್ರತಾ ವ್ಯವಸ್ಥೆ ಹೆಚ್ಚಿಸಿದ್ದಾರೆ. ಸ್ವಾತ್ರಂತ್ಯೋತ್ಸವ ಹಿನ್ನೆಲೆ ಬಿಗಿ ಬಂದೋಬಸ್ತ್ ಹೇರಲಾಗಿದ್ದು, ಎಲ್ಲ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಸೋಮವಾರವೇ ಭಾರತದ ವಿವಿಧ ಕಟ್ಟಡ ಮತ್ತು ಸ್ಮಾರಕಗಳನ್ನು ತ್ರಿವರ್ಣ ಬಣ್ಣಗಳಿಂದ ಅಲಂಕರಿಸಿ ಬೆಳಗಿಸಲಾಗಿದೆ. ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ ರಾಜ್‌ಕೋಟ್ ಪೊಲೀಸರೊಂದಿಗೆ ತ್ರಿರಂಗ ರ‍್ಯಾಲಿಯನ್ನು ನಡೆಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಮೀಡಿಯಾ ಟ್ರೀಯು ಕೇಸರಿ ಬಿಳಿ ಹಸಿರು ಬಣ್ಣದ ಲೈಟಿಂಗ್ಸ್ಗಳಿಂದ ಅಲಂಕಾರಗೊಂಡಿದ್ದು, ಆಕರ್ಷಣೀಯವಾಗಿದೆ. ಹಾಗೆ ಉತ್ತರ ಪ್ರದೇಶದ ವಾರಾಣಸಿ ರೈಲು ನಿಲ್ದಾಣ ಮತ್ತು ಹೈದರಾಬಾದ್‌ನ ಚಾರ್ಮಿನಾರ್ ಕೂಡ ರಾಷ್ಟ್ರಧ್ವಜ ಬಣ್ಣಗಳಿಂದ ಪ್ರಕಾಶಿಸಲ್ಪಟ್ಟಿದೆ. ಇವುಗಳಲ್ಲದೇ ಕಲ್ಕತ್ತಾ ಹೈಕೋರ್ಟ್, ಹೌರಾ ಸೇತುವೆ ಮತ್ತು ಪಶ್ಚಿಮ ಬಂಗಾಳದ ವಿಕ್ಟೋರಿಯಾ ಸ್ಮಾರಕವನ್ನು ಕೂಡ ತ್ರಿವರ್ಣ ಧ್ವಜದ ಬಣ್ಣದ ಕ್ರಮದ ರೀತಿಯಲ್ಲೇ ಅಲಂಕರಿಸಲಾಗಿದೆ.
ಹಳೇ ದೆಹಲಿ ರೈಲು ನಿಲ್ದಾಣ, ಹೊಸ ದೆಹಲಿ ರೈಲು ನಿಲ್ದಾಣ ಮತ್ತು ಇಂಡಿಯಾ ಗೇಟ್ ಅಲಂಕಾರಗೊಂಡಿದ್ದು, 77 ನೇ ಸ್ವಾತಂತ್ರ್ಯವನ್ನು ಸಾರಿ ಸಾರೀ ಹೇಳುತ್ತಿದೆ. ಗುಜರಾತ್‌ನ ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್ನವರು ಪೊಲೀಸರೊಂದಿಗೆ ತ್ರಿವರ್ಣ ಬಣ್ಣದ ಧ್ವಜವನ್ನು ಹಿಡಿದು ತಿರಂಗ ರ‍್ಯಾಲಿ ನಡೆಸಿದರು. ಶ್ರೀನಗರದ ಲಾಲ್ ಚೌಕ್‌ನಲ್ಲಿರುವ ಗಡಿಯಾರ ಗೋಪುರವು ತ್ರಿವರ್ಣ ಬೆಳಕಿನಲ್ಲಿ ಬೆಳಗಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಕೂಡ ಕೇಸರಿ ಬಿಳಿ ಹಸಿರಿಂದ ಕಂಗೊಳಿಸುತ್ತಿದೆ.
ಇನ್ನು ದೆಹಲಿಯಲ್ಲಿ ಸುರಕ್ಷತೆಗಾಗಿ 40,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ಡ್ರೋನ್ ವಿರೋಧಿ ರಾಡಾರ್‌ಗಳು, ವಿಮಾನ ವಿರೋಧಿ ಗನ್‌ಗಳು, ಕ್ಲೋಸ್ಡ್ ಸರ್ಕ್ಯೂಟ್ ಟಿವಿ ಕ್ಯಾಮೆರಾಗಳು ಮತ್ತು ಸೀಲ್ಡ್ ಗಡಿಗಳು ರೀತಿಯ ಭದ್ರತೆ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಬೆಳಗ್ಗೆ ಕೆಂಪುಕೋಟೆಯಲ್ಲಿ 21 ಗನ್ ಸೆಲ್ಯೂಟ್ ಮೂಲಕ ರಾಷ್ಟ್ರಧ್ವಜರೋಹಣ ಮಾಡಲಿದ್ದಾರೆ. ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗೆ ಕೆಂಪುಕೋಟೆಗೆ ಪ್ರಮುಖ ಗಣ್ಯರು ಸೇರಿದಂತೆ ಸುಮಾರು 30,000 ಜನರು ಆಗಮಿಸುವ ಹಿನ್ನೆಲೆ ದೆಹಲಿ ಪೊಲೀಸರು ವಾಹನಗಳ ಗಸ್ತು ಮತ್ತು ತಪಾಸಣೆ ಹೆಚ್ಚಿಸಿದ್ದಾರೆ.
ಭದ್ರತಾ ಪಡೆಯಲ್ಲಿ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ವಿಶೇಷ ರಕ್ಷಣಾ ಗುಂಪು (ಎಸ್‌ಪಿಜಿ), ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಂಪು ಕೋಟೆಯನ್ನು 200 ಮೀಟರ್ವರೆಗೆ ಅರೆಸೈನಿಕ ಪಡೆಗಳು ಸುತ್ತುವರೆದಿದ್ದಾರೆ. ಉಳಿದ ಎಲ್ಲ ಸ್ಥಳಗಳಲ್ಲಿ ದೆಹಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.
ಕೋಟೆಯ ಸುತ್ತಮುತ್ತಲಿನ ಚಾವಣಿ ಮೇಲೆ ಸ್ನೈಪರ್‌ಗಳೊಂದಿಗೆ ಶಾರ್ಪ್‌ಶೂಟರ್‌ಗಳಿದ್ದು, ಹೆಲಿಕಾಪ್ಟರ್ ಕೂಡ ಹಾರುತ್ತಿವೆ. ಕಾರ್ಯಕ್ರಮವು ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಲಿದ್ದು, ಮಧ್ಯಾಹ್ನದವರೆಗೆ ಮುಂದುವರಿಯುತ್ತದೆ. ಇಲ್ಲಿ ಯಾವುದೇ ಏರ್ ಬಲೂನ್ಗಳಾಗಲಿ, ಡ್ರೋನ್ಗಳಾಗಲಿ ಹಾರಾಡುವಂತಿಲ್ಲ ನಿಷೇಧಿಸಲಾಗಿದೆ. ಆದರೆ, ಕಾರ್ಯಕ್ರಮದ ಮುಕ್ತಾಯವಾದ ನಂತರ ಕೆಂಪು ಕೋಟೆಯ ಮೇಲೆ ಗಾಳಿಪಟ ಹಾರಾಟ ಅವಕಾಶ ನೀಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮುಖ್ಯವಾಗಿ ಈ ತಿಂಗಳು ಭದ್ರತಾ ದೃಷ್ಟಿಯಿಂದ ಹೆಚ್ಚು ಸೂಕ್ಷ್ಮವಾಗಿದೆ. ಈಗಿನಿಂದ ಮೂರು ವಾರಗಳವರೆಗೆ G-20 ಸಭೆಯನ್ನು ನಿಗದಿಪಡಿಸಲಾಗಿದೆ. ಜೊತೆಗೆ ಪ್ರಮುಖ ಕಾರ್ಯಗಳು ನವದೆಹಲಿಯಲ್ಲಿ ನಡೆಯಲಿದೆ. ಈ ಕುರಿತು ದೆಹಲಿ ಪೊಲೀಸ್ ವಿಶೇಷ ವಿಭಾಗದ ಪೊಲೀಸ್ ಕಮಿಷನರ್ ಎಚ್‌ಜಿಎಸ್ ಧಲಿವಾಲ್ ತಿಳಿಸಿದ್ದಾರೆ. ಜಿ20 ಅಧ್ಯಕ್ಷ ಸ್ಥಾನವನ್ನು ವಹಿಸಿರುವ ಭಾರತ 2023 ಸೆಪ್ಟೆಂಬರ್‌ನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಜಿ20 ನಾಯಕರ ಶೃಂಗಸಭೆ ಆಯೋಜಿಸುತ್ತಿದೆ.
ಇದನ್ನೂ ಓದಿ: ದೆಹಲಿಯ ಕೆಂಪುಕೋಟೆಯಲ್ಲಿ 77ನೇ ಸ್ವಾತಂತ್ರೋತ್ಸವ ಸಂಭ್ರಮ, ಅಮರಜ್ಯೋತಿಗೆ ಪ್ರಧಾನಿ ಮೋದಿ ನಮನ