ಗಾಜಿಯಾಬಾದ್ : ರೈತರ ತಿರಂಗ ಯಾತ್ರೆಗೆ ಮುನ್ನ ದೆಹಲಿ ಮತ್ತು ಉತ್ತರಪ್ರದೇಶ ನಡುವಿನ ಘಾಜಿಪುರ ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದು ಘಾಜಿಪುರ ಗಡಿಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದಾಗಿ ರೈತರು ಘೋಷಿಸಿದ್ದಾರೆ.
ಕೈಲಾಶ್ ಯಾತ್ರೆಯ ತಿರಂಗ ಯಾತ್ರೆ ಆಗಸ್ಟ್ 15ರ 10 ದಿನಗಳ ಮೊದಲು ಆರಂಭವಾಗುತ್ತದೆ. ಆಗ ರೈತರು ದೇಶದ ವಿವಿಧ ಭಾಗಗಳಿಂದ ಟ್ರ್ಯಾಕ್ಟರ್ ಮೂಲಕ ಗಡಿ ತಲುಪಲು ಆರಂಭಿಸುತ್ತಾರೆ.
ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಅವರು ಗುರುವಾರ MSP ಖರೀದಿಯಲ್ಲಿ ದೊಡ್ಡ ಹಗರಣ ಬಹಿರಂಗಪಡಿಸುವುದಾಗಿ ಘೋಷಿಸಿದ್ದಾರೆ. ಗಾಜಿಪುರ ಗಡಿಯಲ್ಲಿ ರೈತರ ಭಾರೀ ಸಂಖ್ಯೆಯಲ್ಲಿ ಸೇರುವುದರಿಂದ ಪೊಲೀಸರು ಎಚ್ಚರಿಕೆ ಸಹ ನೀಡಿದ್ದಾರೆ.
ಜೊತೆಗೆ ಈ ಸ್ಥಳದಲ್ಲಿ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. "ಘಾಜಿಪುರ ಗಡಿ ಮಾತ್ರವಲ್ಲದೆ ಆನಂದ್ ವಿಹಾರ್, ನಂದ್ ನಾಗ್ರಿ ಮತ್ತು ಲೋನಿ ಗಡಿಯ ಭದ್ರತೆ ಹೆಚ್ಚಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ತಿರಂಗ ಯಾತ್ರೆಯಲ್ಲಿ ಸಂಭವನೀಯ ಬೆದರಿಕೆಯ ಕುರಿತು ಮಾತನಾಡಿದ ರೈತ ನಾಯಕ ರಾಕೇಶ್ ಟಿಕಾಯತ್, ರೈತರ ಕೈಲಾಶ್ ಯಾತ್ರೆಯಲ್ಲಿ ಸೇರಿಕೊಂಡು ಕೆಲವರು ಗಲಭೆ ಸೃಷ್ಟಿಸಬಹುದು ಎಂಬ ಸುದ್ದಿಯ ಬಗ್ಗೆ ನನಗೆ ತಿಳಿದಿದೆ ಎಂದು ಹೇಳಿದರು.
ಮತ್ತೊಂದೆಡೆ, ಪ್ರಸ್ತುತ ಘಾಜಿಪುರ ಗಡಿಯಲ್ಲಿರುವ ಬಿಜ್ನೋರ್‌ನ ರೈತ ನಾಯಕ ಬಿಜೇಂದ್ರ ಸಿಂಗ್,"ನಮ್ಮ ಚಳವಳಿಯನ್ನು ದೂಷಿಸಲು ಕೆಲವು ಸಮಾಜ ವಿರೋಧಿಗಳು ತಿರಂಗಾ ಯಾತ್ರೆಯಲ್ಲಿ ಭಾಗಿಯಾಗಿರಬಹುದು ಎಂದು ನಮಗೆ ತಿಳಿದಿದೆ. ಅಂಥವರು ಯಾರಾದರೂ ನಮ್ಮ ಗಮನಕ್ಕೆ ಬಂದಲ್ಲಿ ತಕ್ಷಣವೇ ಪೊಲೀಸರಿಗೆ ವರದಿ ಮಾಡಲಾಗುವುದು" ಎಂದು ಹೇಳಿದ್ದಾರೆ.