ಭಾರತವು ಕೋವಿಡ್ ಪೀಡಿತ ಎರಡನೇ ದೇಶವಾಗಿದೆ. ಏಕೆಂದರೆ ಇದು ಬ್ರೆಜಿಲ್, ರಷ್ಯಾ, ಇಟಲಿ ಮತ್ತು ಯುಕೆಗಳನ್ನು ಮೀರಿಸಿದೆ. ಅತಿ ಹೆಚ್ಚು ಕೋವಿಡ್-19 ಪ್ರಕರಣಗಳನ್ನು ಹೊಂದಿರುವ 5 ಕೊರೊನಾ ಪೀಡಿತ ರಾಷ್ಟ್ರಗಳ ಪಟ್ಟಿ ಇಲ್ಲಿದೆ.
ಅವು ಇಂತಿವೆ:
- ಯುನೈಟೆಡ್ ಸ್ಟೇಟ್ಸ್ (ಯುಎಸ್): 31.6 ಮಿಲಿಯನ್ ಕೊರೊನಾ ವೈರಸ್ ಪ್ರಕರಣಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಅಗ್ರಸ್ಥಾನದಲ್ಲಿದೆ. ಯುನೈಟೆಡ್ ಸ್ಟೇಟ್ಸ್ ಭಾನುವಾರ 31,627,701 ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. ಸುಮಾರು 5,66,893 ಜನರ ಪ್ರಾಣವನ್ನು ಕಳೆದುಕೊಂಡಿದ್ದಾರೆ.
- ಭಾರತ: ಉಲ್ಬಣಿಸುತ್ತಿರುವ ಕೋವಿಡ್-19 ಪ್ರಕರಣಗಳಿಂದ ಭಾರತ ಈಗ ಅತಿ ಹೆಚ್ಚು ಕೊರೊನಾ ಪೀಡಿತ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ 24 ಗಂಟೆಗಳಲ್ಲಿ 2,61,500 ಹೊಸ ಪ್ರಕರಣಗಳು ವರದಿಯಾಗುವ ಮೂಲಕ ಭಾರತದ ಕೊರೊನಾ ವೈರಸ್ ಗುರುವಾರ 14.5 ಮಿಲಿಯನ್ ಗಡಿ ದಾಟಿದೆ ಎಂದು ಭಾರತೀಯ ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರ, ಕರ್ನಾಟಕ, ಕೇರಳ, ಪಂಜಾಬ್, ಮತ್ತು ಛತ್ತೀಸ್‌ಗಢ ರಾಜ್ಯಗಳು ಭಾರತದ ಅತಿ ಹೆಚ್ಚು ಹಾನಿಗೊಳಗಾದ ಐದು ರಾಜ್ಯಗಳಲ್ಲಿ ಸೇರಿವೆ.
- ಬ್ರೆಜಿಲ್: 13.9 ದಶಲಕ್ಷಕ್ಕೂ ಹೆಚ್ಚಿನ ಪ್ರಕರಣಗಳೊಂದಿಗೆ ಬ್ರೆಜಿಲ್ ಮೂರನೆಯದಾಗಿ, ಹೆಚ್ಚು ಹಾನಿಗೊಳಗಾದ ದೇಶಗಳ ಪಟ್ಟಿಯಲ್ಲಿದೆ. ಬ್ರೆಜಿಲ್ 13.9 ದಶಲಕ್ಷಕ್ಕೂ ಹೆಚ್ಚಿನ ಪ್ರಕರಣಗಳನ್ನು ದೃಢಪಡಿಸಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. ದೇಶವು ಈವರೆಗೆ ಒಟ್ಟು 13,900,091 ಪ್ರಕರಣಗಳನ್ನು ಮತ್ತು ವೈರಸ್‌ನಿಂದಾಗಿ 175,649 ಸಾವುಗಳನ್ನು ವರದಿ ಮಾಡಿದೆ.
- ಫ್ರಾನ್ಸ್: ಫ್ರಾನ್ಸ್ 5.3 ಮಿಲಿಯನ್ ಗಡಿ ದಾಟಿದೆ, ಸಾವಿನ ಸಂಖ್ಯೆ 100,563 ಕ್ಕೆ ಏರಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
- ರಷ್ಯಾ: 4.6 ದಶಲಕ್ಷಕ್ಕೂ ಹೆಚ್ಚಿನ ಪ್ರಕರಣಗಳನ್ನು ಹೊಂದಿರುವ ರಷ್ಯಾ, ಇದುವರೆಗೆ 4,640,537 ಕ್ಕೂ ಹೆಚ್ಚು ಸೋಂಕುಗಳು ಮತ್ತು 103,451 ಸಾವುಗಳನ್ನು ವರದಿ ಮಾಡಿದೆ.
ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ 2,95,041 ಜನರಿಗೆ ಸೋಂಕು; ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವು