ETV Bharat / bharat

ಮದುವೆ ನೆಪದಲ್ಲಿ ವ್ಯಕ್ತಿಗೆ ವಂಚನೆ: 10 ಲಕ್ಷ ಪಡೆದು ಮೊದಲ ಗಂಡನೊಂದಿಗೆ ಮಹಿಳೆ ಪರಾರಿ! - ಆಂಧ್ರಪ್ರದೇಶ ಅಪರಾಧ ಸುದ್ದಿ

ಮೊದಲ ಗಂಡನ ಸಹಾಯದಿಂದ ಮಹಿಳೆಯೊಬ್ಬಳು ಇತರ ಯುವಕರಿಗೆ ಮದುವೆಯ ಹೆಸರಿನಲ್ಲಿ ವಂಚನೆ ಮಾಡಿ ಹಣ ಪಡೆದು ಪರಾರಿಯಾಗುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಎರಡನೇ ಪತಿ ವಿನಯ್​ ಎಂಬಾತ ನೀಡಿದ ದೂರಿನ ಮೇರೆಗೆ ಕೇಸು ದಾಖಲಾಗಿದೆ.

ವಂಚಕಿ ಸುಹಾಸಿನಿ
ವಂಚಕಿ ಸುಹಾಸಿನಿ
author img

By

Published : Jun 14, 2021, 6:05 PM IST

ಅಮರಾವತಿ:(ಆಂಧ್ರಪ್ರದೇಶ): ಹಣದ ಆಸೆಗೆ ಮೊದಲ ಗಂಡನ ಜೊತೆ ಸೇರಿಕೊಂಡು ಯುವಕರಿಗೆ ಮದುವೆಯ ಆಸೆ ತೋರಿಸಿ ಮಹಿಳೆಯೊಬ್ಬಳು ವಂಚನೆ ಮಾಡುತ್ತಿದ್ದ ಪ್ರಕರಣ ಆಂಧ್ರಪ್ರದೇಶದಲ್ಲಿ ವರದಿಯಾಗಿದೆ. ವಂಚನೆ ಮಾಡಿದ ಮಹಿಳೆ ಸುಹಾಸಿನಿ ಎಂದು ಗುರುತಿಸಲಾಗಿದೆ.

ಈಕೆ ತಾನು ಅನಾಥೆ ಎಂದು ಹೇಳಿಕೊಂಡು, ಮದುವೆಯ ಹೆಸರಿನಲ್ಲಿ ಜನರನ್ನು ಮೋಸ ಮಾಡುತ್ತಿದ್ದಳು. ಇನ್ನು 2019ರಲ್ಲಿ ವಿನಯ್​ ಎಂಬವರ ಜೊತೆ ಸುಹಾಸಿನಿ ಮದುವೆಯಾಗಿದ್ದಾಳೆ. ಈ ಬಳಿಕ ಆತನಿಂದ 10 ಲಕ್ಷ ನಗದು ಮತ್ತು 5 ಲಕ್ಷ ರೂ. ಮೌಲ್ಯದ ಚಿನ್ನ ತೆಗೆದುಕೊಂಡು ತನ್ನ ಮೊದಲ ಗಂಡನೊಂದಿಗೆ ಪರಾರಿಯಾಗಿದ್ದಾಳೆ.

ಘಟನೆ ನಡೆದ ನಂತರ ವಿನಯ್​ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ವೇಳೆ, ಸುಹಾಸಿನಿ ಈ ರೀತಿಯಲ್ಲಿ ಅನೇಕರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಆಕೆಗಾಗಿ ಆಂಧ್ರಪ್ರದೇಶ ಪೊಲೀಸರು ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.