ETV Bharat / bharat

Covid Second wave ಗೆ ತತ್ತರಿಸಿರುವ ಏಷ್ಯಾದ ಆರ್ಥಿಕತೆ! - ಭಾರತ

ಕೋವಿಡ್​​​ ವ್ಯಾಪಕವಾಗಿ ಹರಡಿದ ಪರಿಣಾಮ, ಸರಕು ಉತ್ಪಾದನೆ ಮತ್ತು ಸೇವೆಗಳಿಗೆ ನಿರ್ಬಂಧ ವಿಧಿಸಲಾಯಿತು. ಜೂನ್‌ನಲ್ಲಿ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ) ದಿಂದ ಅಳೆಯಲ್ಪಟ್ಟ ಭಾರತದ ಉತ್ಪಾದನಾ ಚಟುವಟಿಕೆಯು ಮೇ ತಿಂಗಳಲ್ಲಿ 50.8 ರಷ್ಟಿತ್ತು. ಆದರೆ ಜೂನ್​ ವೇಳೆಗೆ 48.1 ಕ್ಕೆ ಇಳಿದಿದೆ. ಕಳೆದ 11 ತಿಂಗಳಲ್ಲಿಯೇ ಇದು ಮೊದಲ ಕುಸಿತವಾಗಿದೆ.

ಏಷ್ಯಾ ಪಿಎಂಐ
ಏಷ್ಯಾ ಪಿಎಂಐ
author img

By

Published : Jul 2, 2021, 12:58 PM IST

ಇಡೀ ಜಗತ್ತಿಗೆ ಭಾರೀ ಪೆಟ್ಟು ನೀಡಿರುವ ಕೋವಿಡ್​ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಕೊರೊನಾ ನಿಯಂತ್ರಿಸಲು ವಿಧಿಸಿದ ಲಾಕ್​​ಡೌನ್​ ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ನೀಡಿದೆ. ಈ ವರ್ಷ ಏಪ್ರಿಲ್​-ಮೇ ತಿಂಗಳಲ್ಲಿ ಶುರುವಾದ ಕೋವಿಡ್​, ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ಭಾರತದ ಮೇಲೆ ತೀವ್ರ ಪರಿಣಾಮ ಬೀರಿದೆ.

ಆ ಸಮಯದಲ್ಲಿ ದಿನಕ್ಕೆ ನಾಲ್ಕು ಲಕ್ಷಕ್ಕೂ ಅಧಿಕ ಕೋವಿಡ್​ ಪ್ರಕರಣಗಳು ವರದಿಯಾಗುತ್ತಿದ್ದವು. ನಾಲ್ಕು ಸಾವಿರ ಜನರು ಮೃತಪಡುತ್ತಿದ್ದರು. ಕಳೆದ 10 ದಿನಗಳಿಂದ ಕೊರೊನಾ ಕೇಸ್​ ಕಡಿಮೆಯಾಗಿವೆ. ಸಾವುಗಳ ಸಂಖ್ಯೆಯಲ್ಲಿಯೂ ಗಣನೀಯವಾಗಿ ಇಳಿಕೆ ಕಂಡು ಬಂದಿದೆ.

ಕೋವಿಡ್​​​ ವ್ಯಾಪಕವಾಗಿ ಹರಡಿದ ಪರಿಣಾಮ, ಸರಕು ಉತ್ಪಾದನೆ ಮತ್ತು ಸೇವೆಗಳಿಗೆ ನಿರ್ಬಂಧ ವಿಧಿಸಲಾಯಿತು. ಜೂನ್‌ನಲ್ಲಿ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಪಿಎಂಐ)ದಿಂದ ಅಳೆಯಲ್ಪಟ್ಟ ಭಾರತದ ಉತ್ಪಾದನಾ ಚಟುವಟಿಕೆಯು ಮೇ ತಿಂಗಳಲ್ಲಿ ಶೇ.50.8ರಷ್ಟಿತ್ತು. ಆದರೆ, ಜೂನ್​ ವೇಳೆಗೆ ಶೇ.48.1ಕ್ಕೆ ಇಳಿದಿದೆ. ಕಳೆದ 11 ತಿಂಗಳಲ್ಲಿಯೇ ಇದು ಮೊದಲ ಕುಸಿತವಾಗಿದೆ.

  • " class="align-text-top noRightClick twitterSection" data="">

ಕೇವಲ ಭಾರತಕ್ಕೆ ಮಾತ್ರವಲ್ಲ, ಏಷ್ಯಾದ ಇತರೆ ರಾಷ್ಟ್ರಗಳಿಗೂ ಕೋವಿಡ್​ ಭೀಕರತೆ ತಟ್ಟಿದೆ. ಆಕ್ಸ್‌ಫರ್ಡ್ ಎಕನಾಮಿಕ್ಸ್​ನ ಮಾಹಿತಿ ಪ್ರಕಾರ ಜೂನ್​​​ನ ಏಷ್ಯಾದಲ್ಲಿ ಪಿಎಂಐಗಳು ತೀವ್ರ ಆರ್ಥಿಕ ಕುಸಿತ ಕಂಡಿವೆ. ದಕ್ಷಿಣ ಕೊರಿಯಾ ಮತ್ತು ಫಿಲಿಪೈನ್ಸ್​ ಹೊರತು ಪಡಿಸಿ ಉಳಿದ ಉಳಿದೆಲ್ಲಾ ದೇಶಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ದೇಶೀಯ ಬೇಡಿಕೆಯ ಜತೆಗೆ ವಿದೇಶಿ ಬೇಡಿಕೆಗಳು ಇದ್ದಾಗ ಮಾತ್ರ ಉತ್ಪಾದನೆ ಹೆಚ್ಚಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏಷ್ಯಾ ಪಿಎಂಐ ಮೇ ತಿಂಗಳಲ್ಲಿ 53.9 ರಿಂದ ಜೂನ್‌ ವೇಳೆಗೆ 52.1ಕ್ಕೆ ಇಳಿದಿದ್ದರೆ, ಈಶಾನ್ಯ ಏಷ್ಯಾ ಪಿಎಂಐ 55.2 ರಿಂದ 53.8ಕ್ಕೆ ಇಳಿದಿದೆ. ಕೋವಿಡ್ ಹೊಡೆತದಿಂದಾಗಿ ಬಹುತೇಕ ಹಿಂದುಳಿದ ದೇಶಗಳು ದುರ್ಬಲ ರಾಷ್ಟ್ರಗಳಾಗಿ, ಮುಂದುವರಿಯುತ್ತಿದ್ದ ರಾಷ್ಟ್ರಗಳು ಹಿಂದುಳಿದ ರಾಷ್ಟ್ರಗಳಾಗಿ ಮಾರ್ಪಟ್ಟಿವೆ. ವೈರಸ್​​ನಿಂದಾಗಿ ಚೀನಾ ಮತ್ತು ಸಿಂಗಾಪುರ ಸೇರಿ ಏಷ್ಯಾದಲ್ಲಿ ರಫ್ತು ಕುಂಠಿತಗೊಂಡಿದೆ.

ಈ ಮಧ್ಯೆ, ಕೆಲವೇ ದಿನಗಳಲ್ಲಿ ಲಾಕ್​ಡೌನ್ ಸಡಿಲಗೊಳ್ಳಲಿದೆ. ಜಾಗತಿಕ ಅಡೆತಡೆಗಳು ನಿವಾರಣೆಯಾಗುತ್ತವೆ ಎಂದು ಅರ್ಥಶಾಸ್ತ್ರಜ್ಞರು ತಿಳಿಸಿದ್ದಾರೆ. ಆದಾಗ್ಯೂ, ಅರ್ಥಶಾಸ್ತ್ರಜ್ಞರ ಪ್ರಕಾರ, ಮೂರನೇ ತ್ರೈಮಾಸಿಕದಲ್ಲಿ ಲಾಕ್‌ಡೌನ್‌ಗಳು ಸಡಿಲಗೊಳ್ಳುತ್ತವೆ ಮತ್ತು ಜಾಗತಿಕ ಅಡೆತಡೆಗಳು ಕಡಿಮೆಯಾಗುತ್ತವೆ.

ತೀವ್ರ ಸಂಕಷ್ಟದಲ್ಲಿ ಮಲೇಷ್ಯಾ, ವಿಯೆಟ್ನಾಂ!

ಮಲೇಷ್ಯಾ ಮತ್ತು ವಿಯೆಟ್ನಾಂ ಜೂನ್ ತಿಂಗಳಲ್ಲಿ ಖರೀದಿ ವ್ಯವಸ್ಥಾಪಕರ ಸೂಚ್ಯಂಕದಲ್ಲಿ ದೊಡ್ಡ ಕುಸಿತವನ್ನು ದಾಖಲಿಸಿದವು. ಕೊರೊನಾ ರೂಪಾಂತರದ ವೈರಸ್​ ವಿರುದ್ಧ ದೇಶಗಳು ನಿರಂತರ ಹೋರಾಡುತ್ತಿವೆ. ಜೂನ್ ಆರಂಭದಲ್ಲಿ ಲಾಕ್​ಡೌನ್ ವಿಧಿಸಿದ ಪರಿಣಾಮ ಪಿಎಂಐ 11 ಪಾಯಿಂಟ್‌ಗಳ ಕುಸಿತ ಕಂಡಿದ್ದು, 50.9 ರಿಂದ ಕೇವಲ 39.9 ಕ್ಕೆ ತಲುಪಿದೆ.

11 ತಿಂಗಳಲ್ಲಿ ಭಾರತದಲ್ಲಿ ಮೊದಲ ಪಿಎಂಐ ಕುಸಿತ!

ಐಎಚ್‌ಎಸ್ ಮಾರ್ಕಿಟ್ ಪ್ರಕಟಿಸಿದ ಖರೀದಿ ವ್ಯವಸ್ಥಾಪಕರ ಸೂಚ್ಯಂಕದ ಪ್ರಕಾರ, ದೇಶದಲ್ಲ ಉತ್ಪಾದನೆ ಕುಸಿತದಿಂದಾಗಿ 11 ತಿಂಗಳಲ್ಲೇ ಮೊದಲ ಬಾರಿಗೆ ಪಿಎಂಐ ಇಳಿಕೆ ಕಂಡಿದೆ. ಆಕ್ಸ್‌ಫರ್ಡ್ ಅರ್ಥಶಾಸ್ತ್ರಜ್ಞರ ಪ್ರಕಾರ, ಭಾರತದ ಪಿಎಂಐ ಮೇ ತಿಂಗಳಲ್ಲಿ 50.8 ರಿಂದ ಜೂನ್‌ನಲ್ಲಿ 48.1 ಕ್ಕೆ ಇಳಿದಿದೆ.

ಡ್ರ್ಯಾಗನ್​ ರಾಷ್ಟ್ರದಲ್ಲಿ ಜಿಡಿಪಿ ಇಳಿಕೆ!

ಏಷ್ಯಾದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶ ಚೀನಾ. ಕೋವಿಡ್ ಸಮಯದಲ್ಲೂ ಚೀನಾ ಸಣ್ಣ ಮತ್ತು ಮಧ್ಯಮ ಕಂಪನಿಗಳ ಮೇಲೆ ಹೆಚ್ಚು ಗಮನ ಹರಿಸಿತು. ಈ ಪರಿಣಾಮ ಪಿಎಂಐ ಕ್ರಮವಾಗಿ 51.3 ಮತ್ತು 50.9 ಕ್ಕೆ ಇಳಿಯುವ ಮೂಲಕ ಅಲ್ಪ ಮಟ್ಟದ ನಷ್ಟ ಅನುಭವಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.