ಪಶ್ಚಿಮ ಗೋದಾವರಿ(ಆಂಧ್ರ ಪ್ರದೇಶ): ಕೆಲಸಕ್ಕೆ ಬಂದು ಕುರ್ಚಿ ಮೇಲೆ ಕುಳಿತ ಸ್ವಲ್ಪ ಸಮಯದ್ಲೇ ಅಧಿಕಾರಿಯೊಬ್ಬರು ಕೊರೊನಾದಿಂದ ಪ್ರಾಣಬಿಟ್ಟಿರುವ ಘಟನೆ ಜಿಲ್ಲೆಯ ಕಾಕಿನಾಡದಲ್ಲಿ ಕಂಡು ಬಂದಿದೆ.
ಗಂಡೇಪಲ್ಲೆ ತಾಲೂಕಿನ ಮಲ್ಲೆಪಲ್ಲೆ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಜಯಶಂಕರ್ ನಾರಾಯಣ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಕಳೆದ ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಸಾಮಾನ್ಯ ಜ್ವರವೆಂದು ನಿರ್ಲಕ್ಷ್ಯ ವಹಿಸಿ ನಿತ್ಯ ಕೆಲಸಕ್ಕೆ ಬರುತ್ತಿದ್ದರು.
ಶುಕ್ರವಾರ ಸಹ ಜಯಶಂಕರ್ ಕೆಲಸಕ್ಕೆ ಬಂದಿದ್ದು, ಕೆಲಸ ಮಾಡಲು ಕುರ್ಚಿ ಮೇಲೆ ಕುಳಿತುಕೊಂಡಿದ್ದಾರೆ. ಏಕಾಏಕಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಉಸಿರಾಟದ ಸಮಸ್ಯೆಯಿಂದ ಹೆಚ್ಚಾಗಿ ಕುಳಿತ ಕುರ್ಚಿ ಮೇಲೆಯೇ ಪ್ರಾಣಬಿಟ್ಟಿದ್ದಾರೆ.
ಇದನ್ನು ನೋಡಿದ ಸಹೋದ್ಯೋಗಿಗಳು ಜಯಶಂಕರ್ ಹತ್ತಿರ ಸುಳಿಯಲು ಹೆದರಿದರು. ಬಳಿಕ ವೈದ್ಯರಿಗೆ ಕರೆ ಮಾಡಿ ತಿಳಿಸಿದ್ದಾರೆ. ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಜಯಶಂಕರ್ಗೆ ಕೋವಿಡ್ ಪರೀಕ್ಷೆ ಮಾಡಿದರು. ಈ ವೇಳೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.