ಉತ್ತರಾಖಂಡ: ಗ್ರಾಮಕ್ಕೆ ಸಮರ್ಪಕ ರಸ್ತೆಯಿಲ್ಲದ ಹಿನ್ನೆಲೆ, 82 ವರ್ಷದ ಕೋವಿಡ್ ಸೋಂಕಿತ ವೃದ್ಧನನ್ನು ಹೊತ್ತು SDRF ತಂಡವು ಏಳು ಕಿಲೋ ಮೀಟರ್ ಕ್ರಮಿಸಿ ಆಸ್ಪತ್ರೆಗೆ ಸೇರಿಸಿತು.
ಕೆಲ ದಿನಗಳ ಹಿಂದೆ ಆರೋಗ್ಯ ಇಲಾಖೆಯು ಬುಯಿ ಗ್ರಾಮದಲ್ಲಿ ಕೋವಿಡ್ ಟೆಸ್ಟ್ ನಡೆಸಿತು. ಅದರಲ್ಲಿ 82 ವರ್ಷದ ಗೋಪಾಲ್ಸಿಂಗ್ಗೆ ಸೋಂಕು ಇರುವುದು ದೃಢಪಟ್ಟಿತ್ತು. ವೃದ್ಧ ದಂಪತಿ ಗುಡಿಸಲಲ್ಲಿ ವಾಸ ಮಾಡುತ್ತಿದ್ದರಿಂದ ಪ್ರತ್ಯೇಕ ವಾಸ ಅಸಾಧ್ಯವಾಗಿತ್ತು. ಹೀಗಾಗಿ ಸಬ್ ಇನ್ಸ್ಪೆಕ್ಟರ್ ಮನೋಹರ್ ಕನ್ಯಾಲ್ ನೇತೃತ್ವದ SDRF ತಂಡ ಅವರನ್ನು ಕಾಲ್ನಡಿಗೆ ಮೂಲಕ ಆಸ್ಪತ್ರೆಗೆ ಸಾಗಿಸಿತು.
ಇದನ್ನೂ ಓದಿ:ನಾರದ ಪ್ರಕರಣ: ನಾಲ್ವರು ಟಿಎಂಸಿ ನಾಯಕರಿಗೆ ಮಧ್ಯಂತರ ಜಾಮೀನು ಮಂಜೂರು
ಹಳ್ಳ, ಕೊಳ್ಳಗಳಿರುವ ಮಾರ್ಗದಲ್ಲಿ ಸುಮಾರು 3 ಗಂಟೆ ಕ್ರಮಿಸಿ, ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.