ತಿರುವನಂತಪುರಂ: ಕೇರಳದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರುತ್ತಿದೆ. ವಿಧಾನಸಭಾ ಚುನಾವಣೆಗೆ ನಾಮಪತ್ರಗಳ ಪರಿಶೀಲನೆ ಪೂರ್ಣಗೊಂಡಿದ್ದು, ಕೇರಳದ 140 ಕ್ಷೇತ್ರಗಳಲ್ಲಿ 1,061 ಅಭ್ಯರ್ಥಿಗಳು ಕಣದಲ್ಲಿ ಇರಲಿದ್ದಾರೆ.
ನಾಪಪತ್ರ ಸಲ್ಲಿಸುವ ಕೊನೆಯ ದಿನವಾದ ಮಾರ್ಚ್ 19ರವರೆಗೆ 2,180 ನಾಮಪತ್ರ ಪರಿಶೀಲನೆ ನಡೆಯಿತು. ಮಾರ್ಚ್ 22 ಅಂದರೆ ನಾಳೆವರೆಗೆ ನಾಮಪತ್ರಗಳನ್ನು ಹಿಂಪಡೆಯಲು ಸಮಯವಿದೆ.
ಇನ್ನು ಮಲಪ್ಪುರಂ ನಿವಾಸಿಯಾಗಿರುವ ಅನನ್ಯಾ ಕುಮಾರಿ ಅಲೆಕ್ಸ್ ಎಂಬುವರು ಏಪ್ರಿಲ್ 6ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ವಿಧಾನಸಭಾ ರಣ ಕಣಕ್ಕಿಳಿದ ರಾಜ್ಯದ ಮೊದಲ ತೃತೀಯ ಲಿಂಗಿ ಅಭ್ಯರ್ಥಿ ಇವರಾಗಿದ್ದಾರೆ. ಹೆಚ್ಚಿನ ಓದಿಗೆ ಈ ಲಿಂಕ್ ಕ್ಲಿಕ್ ಮಾಡಿ: ವಿಧಾನ ಕದನದ ಕಣಕ್ಕಿಳಿದ ಕೇರಳದ ಮೊದಲ ತೃತೀಯ ಲಿಂಗಿ..