ಚೆನ್ನೈ/ತಮಿಳುನಾಡು: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ತಮಿಳುನಾಡಿನಲ್ಲಿ ಮಾರ್ಚ್ 22 ರಿಂದ 9, 10 ಮತ್ತು 11 ನೇ ತರಗತಿ ಶಾಲೆಗಳನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗುವುದು ಎಂದು ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
ಈ ವಿದ್ಯಾರ್ಥಿಗಳ ಹಾಸ್ಟೆಲ್ಗಳನ್ನು ಸಹ ಮುಚ್ಚಲಾಗುವುದು. ಆದರೆ 9, 10, 11 ನೇ ತರಗತಿ ಮಕ್ಕಳಿಗೆ ಆನ್ಲೈನ್ / ಡಿಜಿಟಲ್ ಶಿಕ್ಷಣ ಮುಂದುವರಿಯುತ್ತದೆ. ಅಧಿಸೂಚನೆಗೆ ಅನುಗುಣವಾಗಿ, ತಮಿಳುನಾಡು ರಾಜ್ಯ ಮಂಡಳಿಯನ್ನು ಹೊರತುಪಡಿಸಿ ಇತರ ಮಂಡಳಿಗಳ 10 ನೇ ತರಗತಿ ಬೋರ್ಡ್ ಪರೀಕ್ಷೆಗಳು ಎಂದಿನಂತೆ ನಡೆಯಲಿದ್ದು, ಇವರಿಗಾಗಿ ವಿಶೇಷ ತರಗತಿಗಳು ಸಹ ಮುಂದುವರಿಯಲಿವೆ. ಅಲ್ಲದೇ ಇವರು ವಾಸಿಸುವ ಹಾಸ್ಟೆಲ್ಗಳು ಸಹ ತೆರದಿರಲಿವೆ.
ತಮಿಳುನಾಡಲ್ಲಿ ಶನಿವಾರ 1,243 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 634 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ 9 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳು 8,65,693 ತಲುಪಿದ್ದು, ಇದರಲ್ಲಿ 8,45,812 ಮಂದಿ ಗುಣಮುಖರಾಗಿದ್ದಾರೆ ಹಾಗೂ 12,590 ಜನ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಲಾಕ್ಡೌನ್ ವೇಳೆ ವಲಸಿಗರಿಗೆ ಉಸಿರಾದ ಸೋನು ಸೂದ್: ಸ್ಪೈಸ್ಜೆಟ್ನಿಂದ ಕರುಣಾಮಯಿಗೆ ವಿಶೇಷ ಗೌರವ