ETV Bharat / bharat

ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ: ಒಬ್ಬ ಸ್ಟೂಡೆಂಟ್​​ ದುರ್ಮರಣ - ವಿದ್ಯಾರ್ಥಿಗಳ ಮಾರಾಮಾರಿ ಓರ್ವ ವಿದ್ಯಾರ್ಥಿ ಸಾವು

ಕ್ಷುಲಕ ಕಾರಣಕ್ಕಾಗಿ ಆರಂಭಗೊಂಡ ಜಗಳವೊಂದು ವಿದ್ಯಾರ್ಥಿ ಕೊಲೆಯಲ್ಲಿ ಅಂತ್ಯಗೊಂಡಿದೆ. ಛತ್ತೀಸ್​ಗಢದ ರಾಜಧಾನಿ ರಾಯ್ಪುರ್​ದಲ್ಲಿ ಈ ಘಟನೆ ನಡೆದಿದೆ.

student killed in raipur
student killed in raipur
author img

By

Published : Jul 11, 2022, 6:57 PM IST

ರಾಯ್ಪುರ್​(ಛತ್ತೀಸ್​​ಗಢ): ಶಾಲಾ ವಿದ್ಯಾರ್ಥಿಗಳ ಮಧ್ಯೆ ನಡೆದ ಜಗಳದಲ್ಲಿ ಒಬ್ಬ ಸ್ಟೂಡೆಂಟ್​ ದುರ್ಮರಣಕ್ಕೀಡಾಗಿರುವ ಘಟನೆ ಛತ್ತೀಸ್​​ಗಢದ ರಾಜಧಾನಿ ರಾಯ್ಪುರ್​ದಲ್ಲಿ ನಡೆದಿದೆ. ಕ್ಷುಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ಮಧ್ಯೆ ವಾಗ್ವಾದ ನಡೆದಿದ್ದು, ಕೆಲ ವಿದ್ಯಾರ್ಥಿಗಳು ಸೇರಿಕೊಂಡು ಸ್ಟೂಡೆಂಟ್ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ.

10ನೇ ತರಗತಿಯ ಪೂರಕ ಪರೀಕ್ಷೆ ಬರೆಯಲು ವಿದ್ಯಾರ್ಥಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದ. ಈ ವೇಳೆ, ಅರ್ಧ ಡಜನ್ ವಿದ್ಯಾರ್ಥಿಗಳ ಮಧ್ಯೆ ವಾಗ್ವಾದ ಶುರುವಾಗಿದೆ. ವಿವಾದ ತಾರಕ್ಕೇರಿದಾಗ ಕೆಲ ವಿದ್ಯಾರ್ಥಿಗಳು ಸೇರಿಕೊಂಡು ಒಬ್ಬ ಸ್ಟೂಡೆಂಟ್​ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಯಗೊಂಡ ಆತ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾನೆ.

ಆ್ಯಂಬುಲೆನ್ಸ್​​ನಲ್ಲಿ ಮೆಕಹರಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವಿದ್ಯಾರ್ಥಿ ಸಾವನ್ನಪ್ಪಿದ್ದಾನೆಂದು ವೈದ್ಯರು ಘೋಷಣೆ ಮಾಡಿದ್ದಾರೆ. ವಿದ್ಯಾರ್ಥಿ ಸಾವಿನ ಸುದ್ದಿ ಗೊತ್ತಾಗುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವಿದ್ಯಾರ್ಥಿಯ ಬಂಧನ ಮಾಡಿರುವ ಪೊಲೀಸರು ಇತರ ವಿದ್ಯಾರ್ಥಿಗಳಿಗೆ ಶೋಧಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿರಿ: ಶಿವಸೇನೆ 16 ಎಂಪಿಗಳು ದ್ರೌಪದಿ ಮುರ್ಮುಗೆ ಬೆಂಬಲ ಘೋಷಿಸುವುದಾಗಿ ತಿಳಿಸಿದ್ದೇವೆ: ಸಂಸದ ಕೀರ್ತಿಕರ್​

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಮೃತ ವಿದ್ಯಾರ್ಥಿಯನ್ನ ಮೋಹನ್ ಸಿಂಗ್ ರಜಪೂತ್ ಎಂದು ಗುರುತಿಸಲಾಗಿದೆ. ಇವರು ಶಿವಾಜಿನಗರ ಪಬ್ಲಿಕ್​​ ಹೈಯರ್​ ಸೆಕೆಂಡರಿ ಶಾಲೆಯಲ್ಲಿ ಓದುತ್ತಿದ್ದಾರೆ. 10ನೇ ತರಗತಿ ಪರೀಕ್ಷೆ ಬರೆಯಲು ಹೋಗಿದ್ದು, ಅಲ್ಲಿಂದ ವಾಪಸ್ ಬರುತ್ತಿದ್ದಾಗ 11ನೇ ತರಗತಿ ವಿದ್ಯಾರ್ಥಿಗಳ ಜೊತೆ ವಾಗ್ವಾದ ನಡೆದಿದ್ದು, ಈ ವೇಳೆ ಸ್ಟುಡೆಂಟ್​​ ಮೇಲೆ ಹಲ್ಲೆ ನಡೆಸಿದ್ದಾರೆಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.