ನವದೆಹಲಿ: ಕೊರೊನಾ ಮಹಾಮಾರಿ ಮೂರನೇ ಅಲೆ ಮಧ್ಯೆ ಈಗಾಗಲೇ ಅನೇಕ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳು ಪುನಾರಂಭಗೊಂಡಿವೆ. ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿರುವ ಕಾರಣ ಇದೀಗ ಶಾಲೆ ತೆರೆಯಲು ಕೇಂದ್ರ ಸರ್ಕಾರ ಮಹತ್ವದ ಮಾರ್ಗಸೂಚಿ ಹೊರಡಿಸಿದೆ.
ಎಲ್ಲ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಕೇಂದ್ರ ಶಿಕ್ಷಣ ಸಚಿವಾಲಯ ಈ ಮಾರ್ಗಸೂಚಿ ಹೊರಡಿಸಿದ್ದು, ಶಾಲೆಗಳನ್ನ ಪುನಾರಂಭ ಮಾಡಲು ರಾಜ್ಯಗಳು ತಮ್ಮದೇ ಆದ ಮಾರ್ಗಸೂಚಿ ಹೊರಡಿಸಲು ಮುಕ್ತವಾಗಿವೆ ಎಂದು ತಿಳಿಸಿದೆ.
-
Revised guidelines for health&safety protocols for reopening of schools&learning with social distancing state-States to decide whether schools required to take consent of students' parents for attending physical classes,group activities to be done as per SOPs: Education Ministry pic.twitter.com/VNgnnWAOrI
— ANI (@ANI) February 3, 2022 " class="align-text-top noRightClick twitterSection" data="
">Revised guidelines for health&safety protocols for reopening of schools&learning with social distancing state-States to decide whether schools required to take consent of students' parents for attending physical classes,group activities to be done as per SOPs: Education Ministry pic.twitter.com/VNgnnWAOrI
— ANI (@ANI) February 3, 2022Revised guidelines for health&safety protocols for reopening of schools&learning with social distancing state-States to decide whether schools required to take consent of students' parents for attending physical classes,group activities to be done as per SOPs: Education Ministry pic.twitter.com/VNgnnWAOrI
— ANI (@ANI) February 3, 2022
ಇದನ್ನೂ ಓದಿರಿ: ಉತ್ತರ ಪ್ರದೇಶದಲ್ಲಿ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ..!
ಕೋವಿಡ್ ಭಯದಿಂದ ಶಾಲೆಗೆ ಹೋಗಲು ಇಷ್ಟವಿಲ್ಲದ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಕೇಂದ್ರದ ಪ್ರಮುಖ ಮಾರ್ಗಸೂಚಿಗಳು ಇಂತಿವೆ
- ಶಾಲೆಗಳಲ್ಲಿ ಸರಿಯಾದ ಸ್ವಚ್ಛತೆ, ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ
- ವಿದ್ಯಾರ್ಥಿಗಳು ಕುಳಿತುಕೊಳ್ಳುವ ಸ್ಥಳದಲ್ಲಿ ಕನಿಷ್ಠ 6 ಅಡಿ ಅಂತರ
- ಸಿಬ್ಬಂದಿ ಕೊಠಡಿ, ಕಚೇರಿ, ಒಳಾಂಗಣ ಹಾಲ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ
- ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಕಾರ್ಯಕ್ರಮ ಮುಂದೂಡಲು ಸೂಚನೆ
- ಎಲ್ಲ ವಿದ್ಯಾರ್ಥಿಗಳು, ಸಿಬ್ಬಂದಿ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯ
- ಮಧ್ಯಾಹ್ನದ ಊಟ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು
- ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳು ವಾಸ ಮಾಡುವ ಜಾಗದಲ್ಲಿ ಅಂತರ
- ಹಾಸ್ಟೆಲ್ಗಳಲ್ಲಿ ಉಳಿದುಕೊಳ್ಳುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ, ಸ್ಕ್ಯಾನಿಂಗ್
- ಪೋಷಕರ ಅನುಮತಿಯೊಂದಿಗೆ ಮನೆಯಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಅವಕಾಶ
ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಬಹುತೇಕ ಎಲ್ಲ ರಾಜ್ಯಗಳಲ್ಲಿ ಈಗಾಗಲೇ ಶಾಲಾ-ಕಾಲೇಜ್ ಪುನಾರಂಭಗೊಂಡಿವೆ.