ETV Bharat / bharat

ರೈಲ್ವೆ ಪ್ರಾಧಿಕಾರದಿಂದ ಮಥುರಾದಲ್ಲಿ ತೆರವು ಕಾರ್ಯಾಚರಣೆ: ನಾಳೆ ಸುಪ್ರೀಂಕೋರ್ಟ್​ನಲ್ಲಿ ತುರ್ತು ವಿಚಾರಣೆ - demolition drive in Mathura

ರೈಲ್ವೆ ಪ್ರಾಧಿಕಾರ ನಡೆಸುತ್ತಿರುವ ತೆರವು ಕಾರ್ಯಾಚರಣೆಗೆ ಶಾಶ್ವತ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್​ ನಾಳೆ ವಿಚಾರಣೆ ನಡೆಸುವುದಾಗಿ ಹೇಳಿದೆ.

ರೈಲ್ವೆ ಪ್ರಾಧಿಕಾರದಿಂದ ಮಥುರಾದಲ್ಲಿ ತೆರವು ಕಾರ್ಯಾಚರಣೆ

author img

By

Published : Aug 15, 2023, 6:54 AM IST

ನವದೆಹಲಿ : ಶ್ರೀಕೃಷ್ಣ ಜನ್ಮಭೂಮಿಯಾದ ಉತ್ತರಪ್ರದೇಶದ ಮಥುರಾದಲ್ಲಿ ರೈಲ್ವೆ ಇಲಾಖೆ ನಡೆಸುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್​ ಆಗಸ್ಟ್​ 16 ರಂದು ವಿಚಾರಣೆ ನಡೆಸಲು ಒಪ್ಪಿದೆ. ಹಿರಿಯ ವಕೀಲ ಪ್ರಶಾಂತೋ ಚಂದ್ರ ಸೇನ್ ಅವರು ಅರ್ಜಿಯ ಕುರಿತಾಗಿ ಕೋರ್ಟ್​ ಮುಂದೆ ಪ್ರಸ್ತಾಪಿಸಿದಾಗ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಅರ್ಜಿದಾರರಿಗೆ ಆಗಸ್ಟ್ 16 ರಂದು ವಿಚಾರಣೆ ನಡೆಸುವುದಾಗಿ ಭರವಸೆ ನೀಡಿತು.

ಆಗಸ್ಟ್ 9 ರಿಂದ ರೈಲ್ವೆ ಅಧಿಕಾರಿಗಳು ಜನರು ವಾಸಿಸುತ್ತಿರುವ ಪ್ರದೇಶದಲ್ಲಿ ಒತ್ತುವರಿ ಕಾರ್ಯ ಆರಂಭಿಸಿದ್ದಾರೆ. 1800 ರ ದಶಕದಿಂದಲೂ ಜನರು ಅಲ್ಲಿ ವಾಸಿಸುತ್ತಿದ್ದಾರೆ. ಇದೀಗ ರೈಲ್ವೆ ಸರ್ಕಾರಿ ಜಾಗ ಎಂದು ಗುರುತಿಸಿ ಜನರನ್ನು ಒಕ್ಕೆಲೆಬ್ಬಿಸುತ್ತಿದ್ದಾರೆ ಎಂದು ಹಿರಿಯ ವಕೀಲ ಸೇನ್ ಪೀಠಕ್ಕೆ ಮಾಹಿತಿ ನೀಡಿದರು.

ಅರ್ಜಿಯಲ್ಲಿ ಏನಿದೆ?: ಮಥುರಾ ರೈಲ್ವೆ ಅಧಿಕಾರಿಗಳು ಜನಪ್ರದೇಶವನ್ನು ರೈಲ್ವೆಗೆ ಸೇರಿದ ಜಾಗ ಎಂದು ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದರ ವಿರುದ್ಧ ಸಿವಿಲ್​ ಮೊಕದ್ದಮೆ ದಾಖಲಿಸಿ, ರೈಲ್ವೆ ಪ್ರಾಧಿಕಾರದ ವಿರುದ್ಧ ಶಾಶ್ವತ ತಡೆಯಾಜ್ಞೆಯನ್ನು ಕೋರಲಾಗಿದೆ. ಆದಾಗ್ಯೂ ಆಗಸ್ಟ್ 9 ರಿಂದ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಮರುದಿನ ಆಗಸ್ಟ್ 10 ರಂದು ಸಿವಿಲ್​ ಕೋರ್ಟ್​ ಈ ಬಗ್ಗೆ ಪ್ರಶ್ನಿಸಿದ್ದು, ರೈಲ್ವೆ ಪರ ವಕೀಲರು ತಮ್ಮ ಬಳಿ ತೆರವು ಕಾರ್ಯಾಚರಣೆಗೆ ಸರ್ಕಾರದಿಂದ ಯಾವುದೇ ಸೂಚನೆ ಇಲ್ಲ. ಆದೇಶದೊಂದಿಗೆ ಕಾರ್ಯಾಚರಣೆ ನಡೆಸುವುದಾಗಿ ಸಿವಿಲ್ ನ್ಯಾಯಾಲಯಕ್ಕೆ ಹೇಳಿದ್ದಾರೆ ಎಂದು ಅರ್ಜಿದಾರರು ಪೀಠಕ್ಕೆ ತಿಳಿಸಿದರು.

ಈ ಮಧ್ಯೆ ವಕೀಲರೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರ್ ಕೌನ್ಸಿಲ್ ಅಂಗೀಕರಿಸಿದ ನಿರ್ಣಯದ ಪ್ರಕಾರ ಅಲಹಾಬಾದ್‌ನಲ್ಲಿನ ಎಲ್ಲಾ ನ್ಯಾಯಾಲಯದ ಕಲಾಪಗಳನ್ನು ಅಮಾನತುಗೊಳಿಸಲಾಗಿದೆ. ಸಿವಿಲ್​ ಕೋರ್ಟ್​ ಮತ್ತು ಹೈಕೋರ್ಟ್​ಗೆ ಇದರ ಅರ್ಜಿ ಸಲ್ಲಿಸಲಾಗಿದ್ದರೂ ವಿಚಾರಣೆ ನಡೆಯದ ಕಾರಣ, ರೈಲ್ವೆ ಪ್ರಾಧಿಕಾರ ಇದರ ಲಾಭ ಪಡೆದು ಕಾರ್ಯಾಚರಣೆ ಮುಂದುವರಿಸಿದೆ ಎಂದು ಆರೋಪಿಸಿದರು.

ಸಿವಿಲ್ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ಈ ಕುರಿತು ದೂರು ಸಲ್ಲಿಸಲು ಪ್ರಯತ್ನಿಸಿದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅದನ್ನು ಸುಪ್ರೀಂಕೋರ್ಟ್​ ಮುಂದೆ ಪ್ರಸ್ತಾಪಿಸಲಾಗಿದೆ. ಅರ್ಜಿಯ ತುರ್ತು ವಿಚಾರಣೆ ಕೈಗೊಳ್ಳಬೇಕು. 1800 ರ ದಶಕದಿಂದ ಅಲ್ಲಿ ವಾಸಿಸುತ್ತಿರುವ ಜನರಿಗೆ ನ್ಯಾಯ ಕೊಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ: Independence Day: ಪ್ರತಿಯೊಬ್ಬ ಭಾರತೀಯನಿಗೂ ಸಮಾನ ಅವಕಾಶ, ಹಕ್ಕು, ಕರ್ತವ್ಯಗಳಿವೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.