ನವದೆಹಲಿ: ಮಹಾರಾಷ್ಟ್ರದಲ್ಲಿ ಒಬಿಸಿಗಳಿಗೆ ಶೇ.27 ರಷ್ಟು ಸ್ಥಾನಗಳನ್ನು ಮೀಸಲಿಟ್ಟಿರುವುದನ್ನು ಡಿ-ನೋಟಿಫೈ ಮಾಡುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ಮರು ಪರಿಶೀಲಿಸುವಂತೆ ಮಹಾ ಸರ್ಕಾರ ಮತ್ತೆ ಕೋರ್ಟ್ ಮೊರೆ ಹೋಗಿದ್ದು, ಜ.19ರಂದು ಅರ್ಜಿ ವಿಚಾರಣೆ ನಡೆಯಲಿದೆ.
ಒಬಿಸಿಗಳಿಗೆ ಮೀಸಲಿಟ್ಟಿರುವ ಶೇ.27ರಷ್ಟು ಸ್ಥಾನಗಳನ್ನು ಡಿ-ನೋಟಿಫೈ ಮಾಡುವಂತೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಾಗಿ ಸಾಮಾನ್ಯ ವರ್ಗದ ಅಡಿಯಲ್ಲಿ ಮರು ಸೂಚನೆ ನೀಡುವಂತೆ 2021ರ ಡಿಸೆಂಬರ್ 15 ರಂದು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.
ಕೋರ್ಟ್ ತನ್ನ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಮಹಾರಾಷ್ಟ್ರ ಸರ್ಕಾರ ಕೋರ್ಟ್‌ನ ಕದ ತಟ್ಟಿತ್ತು. ನಾಡಿದ್ದು ವಿಚಾರಣೆ ನಡೆಯಲಿದ್ದು, ಉದ್ಧವ್ ಠಾಕ್ರೆ ಸರ್ಕಾರದ ಪರ ಆದೇಶ ಬರುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: 72 ಗಂಟೆಗಳಲ್ಲಿ ಬಿಜೆಪಿಯ 14 ಶಾಸಕರು, ಸಚಿವರ ರಾಜೀನಾಮೆ: ಕೇಸರಿ ಪಕ್ಷಕ್ಕೆ ಮುಳುವಾಗುತ್ತಾ ಒಬಿಸಿ ವೋಟ್‌ಬ್ಯಾಂಕ್?