ETV Bharat / bharat

ಸೆಂಟ್ರಲ್​ ವಿಸ್ಟಾ ಯೋಜನೆಯಡಿ ಸಂಸತ್​ ಭವನ ನಿರ್ಮಾಣಕ್ಕಾಗಿ ಮರ ಕಡಿಯುವಂತಿಲ್ಲ: ಸುಪ್ರೀಂ

ಸಂಸತ್​ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಬಹುದು. ಆದರೆ ಸುಪ್ರೀಂ ಕೋರ್ಟ್​ನಲ್ಲಿ ಬಾಕಿಯಿರುವ ಅರ್ಜಿಗಳು ಇತ್ಯರ್ಥವಾಗುವವರೆಗೂ ಸೆಂಟ್ರಲ್​ ವಿಸ್ಟಾ ಯೋಜನೆಯಡಿ ಆ ಜಾಗದಲ್ಲಿ ಯಾವುದೇ ಮರಗಳನ್ನು ಕಡಿಯುವಂತಿಲ್ಲ. ಆ ಸ್ಥಳದಲ್ಲಿ ನಿರ್ಮಾಣ ಅಥವಾ ಯಾವುದೇ ಕಟ್ಟಡಗಳನ್ನು ತೆರವುಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

author img

By

Published : Dec 7, 2020, 4:44 PM IST

Central Vista
ಸಂಸತ್​ ಭವನ ನಿರ್ಮಾಣ

ನವದೆಹಲಿ: ಕೇಂದ್ರದ ಸೆಂಟ್ರಲ್​ ವಿಸ್ಟಾ ಯೋಜನೆಯಡಿ ಸಂಸತ್​ ಭವನ ನಿರ್ಮಾಣದ ಕುರಿತು ಇಂದು ಸುಪ್ರೀಂ ಕೋರ್ಟ್ ಕೆಲ ಮಹತ್ವದ ಸೂಚನೆಗಳನ್ನು ನೀಡಿದ್ದು, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಸಂಸತ್​ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಬಹುದು. ಆದರೆ ಸುಪ್ರೀಂ ಕೋರ್ಟ್​ನಲ್ಲಿ ಬಾಕಿಯಿರುವ ಅರ್ಜಿಗಳು ಇತ್ಯರ್ಥವಾಗುವವರೆಗೂ ಆ ಜಾಗದಲ್ಲಿ ಯಾವುದೇ ಮರಗಳನ್ನು ಕಡಿಯುವಂತಿಲ್ಲ. ಆ ಸ್ಥಳದಲ್ಲಿ ನಿರ್ಮಾಣ ಅಥವಾ ಯಾವುದೇ ಕಟ್ಟಡಗಳನ್ನು ತೆರವುಗೊಳಿಸುವಂತಿಲ್ಲ ಎಂದು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ನಿರ್ದೇಶಿಸಿದೆ.

ಇದನ್ನೂ ಓದಿ: ಹೀಗಿರಲಿದೆ ನೂತನ ಸಂಸತ್​ ಭವನ... ಡಿ.10ಕ್ಕೆ ಶಂಕುಸ್ಥಾಪನೆ

ಸಂಸತ್ತಿನ ನೂತನ ಕಟ್ಟಡವನ್ನು ಹೊಸದಾಗಿ ಈಗಿರುವ ಸಂಸತ್ ಭವನದ 118ನೇ ಫ್ಲಾಟ್​ನಲ್ಲಿ 'ಸೆಂಟ್ರಲ್​ ವಿಸ್ಟಾ' ಯೋಜನೆಯಡಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. 971 ಕೋಟಿ ರೂ. ವೆಚ್ಚದಲ್ಲಿ 64,500 ಚದರ ಮೀಟರ್ ಪ್ರದೇಶದಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು, 2022ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಭಾರತ ಸರ್ಕಾರ ಇಟ್ಟುಕೊಂಡಿದೆ. ಡಿಸೆಂಬರ್ 10ರಂದು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರುವುದು ಎಂದು ನಿನ್ನೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದರು.

ಸೆಂಟ್ರಲ್​ ವಿಸ್ಟಾ ಯೋಜನೆಯಡಿ ನಡೆಯುವ ಕಾಮಗಾರಿ ಕೆಲವು ಉಲ್ಲಂಘನೆಗಳ ಆರೋಪ ಹೊತ್ತಿದ್ದು, ಈ ಸಂಬಂಧ ಅನೇಕ ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿವೆ. ಇದರ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.