ನವದೆಹಲಿ: ನಕ್ಸಲ್ ನಂಟು ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿಎನ್ ಸಾಯಿಬಾಬಾ ಅವರನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ. ನಾಲ್ಕು ತಿಂಗಳೊಳಗೆ ಅರ್ಹತೆಯ ಮೇಲೆ ಹೊಸದಾಗಿ ಪರಿಗಣಿಸಲು ಪ್ರಕರಣವನ್ನು ಹೈಕೋರ್ಟ್‌ಗೆ ಹಿಂತಿರುಗಿಸಿದೆ.
ಬಾಂಬೆ ಹೈಕೋರ್ಟ್ ನೀಡಿದ ಆದೇಶವು 'ಅಮಾನ್ಯ ಮತ್ತು ಕಾನೂನಿನಲ್ಲಿ ಕೆಟ್ಟ' ಆದೇಶ ಎಂದು ಸುಪ್ರೀಂ ಕಂಡುಕೊಂಡ ನಂತರ ಪ್ರಕರಣವನ್ನು ಮರುಪರಿಶೀಲಿಸಿದೆ. ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಸಿಟಿ ರವಿಕುಮಾರ್ ಅವರಿದ್ದ ಪೀಠವು ಸಾಯಿಬಾಬಾ ಮತ್ತು ಇತರ ಆರೋಪಿಗಳ ಮೇಲ್ಮನವಿಯನ್ನು ಹಿಂದಿನ ಪ್ರಕರಣದಲ್ಲಿ ಖುಲಾಸೆ ಮಾಡದ ಬೇರೆ ಪೀಠದ ಮುಂದೆ ಇಡುವಂತೆಯೂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಸೂಚಿಸಿದೆ.
ಇದನ್ನೂ ಓದಿ: ಸಲಿಂಗ ವಿವಾಹ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳನ್ನೂ ಪ್ರತಿವಾದಿಯನ್ನಾಗಿಸಲು ಕೇಂದ್ರದ ಒತ್ತಾಯ
ನಾಗ್ಪುರ ಪೀಠದ ಹಿಂದಿನ ಆದೇಶದಿಂದ ಪ್ರಭಾವಿತರಾಗದೇ, ಹೈಕೋರ್ಟ್ ತನ್ನ ಅರ್ಹತೆಯ ಮೇಲೆ ಮತ್ತು ಕಾನೂನಿನ ಪ್ರಕಾರ ವಿಷಯವನ್ನು ಕಟ್ಟುನಿಟ್ಟಾಗಿ ವಿಲೇವಾರಿ ಮಾಡಬೇಕಾಗುತ್ತದೆ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ. ಆಯಾ ಪ್ರತಿವಾದಿಗಳಿಗೆ ಲಭ್ಯವಿರುವ ಎಲ್ಲ ವಾದಗಳು ಮತ್ತು ಪ್ರತಿವಾದಗಳನ್ನು ಹೈಕೋರ್ಟ್ ಪರಿಗಣಿಸಲು ಮುಕ್ತವಾಗಿದೆ ಎಂದೂ ಹೇಳಿದೆ. ಮಹಾರಾಷ್ಟ್ರ ಸರ್ಕಾರದ ಪರವಾಗಿ ವಕೀಲ ಅಭಿಕಲ್ಪ್ ಪ್ರತಾಪ್ ಸಿಂಗ್ ಮತ್ತು ಹಿರಿಯ ವಕೀಲ ಆರ್ ಬಸಂತ್ ಅವರು ಈ ಪ್ರಕರಣದಲ್ಲಿ ಸಾಯಿಬಾಬಾ ಪರವಾಗಿ ವಾದ ಮಂಡಿಸಿದ್ದರು.
ಏನಿದು ಪ್ರಕರಣ?: 2014ರಲ್ಲಿ ದೆಹಲಿ ವಿವಿಯ ಮಾಜಿ ಪ್ರಾಧ್ಯಾಪಕರಾದ ಪ್ರೊ.ಸಾಯಿಬಾಬಾ ಮತ್ತು ಇತರರ ವಿರುದ್ಧ ನಿಷೇಧಿತ ಸಿಪಿಐ (ಮಾವೋವಾದಿ) ಪರವಾಗಿ ಕೆಲಸ ಮಾಡಿದ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪ ಸಂಬಂಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಲಾಗಿತ್ತು.
ಇದನ್ನೂ ಓದಿ: ಅತೀಕ್ ಹತ್ಯೆ: ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಐವರು ಪೊಲೀಸರು ಅಮಾನತು
2017ರಲ್ಲಿ ಸಾಯಿಬಾಬಾ, ರೈತರಾದ ಮಹೇಶ್ ಕರಿಮಾನ್ ಟಿರ್ಕಿ, ಪಾಂಡು ಪೋರಾ ನರೋಟೆ, ವಿದ್ಯಾರ್ಥಿ ಹೇಮ್ ಕೇಶವದತ್ತ ಮಿಶ್ರಾ ಮತ್ತು ಪತ್ರಕರ್ತ ಪ್ರಶಾಂತ್ ಸಾಂಗ್ಲಿಕರ್ ಅವರಿಗೆ ಜೀವಾವಧಿ ಶಿಕ್ಷೆಗೆ ವಿಧಿಸಿತ್ತು. ಕಾರ್ಮಿಕ ವಿಜಯ್ ಟಿರ್ಕಿ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ನಂತರ ಈ ಆದೇಶ ಪ್ರಶ್ನಿಸಿ ಸಾಯಿಬಾಬಾ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ನ ನಾಗ್ಪುರ ಪೀಠವು ಅಂಗೀಕರಿಸಿತ್ತು. ನಂತರ ಸಾಯಿಬಾಬಾ ಸೇರಿ ಎಲ್ಲರನ್ನೂ ಖುಲಾಸೆಗೊಳಿಸಿ ನ್ಯಾಯಾಲಯ ಆದೇಶಿಸಿತ್ತು.
ಆದರೆ, ಈ ಆದೇಶ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಸಾಯಿಬಾಬಾ ಪೊಲೀಯೊಗೆ ತುತ್ತಾಗಿದ್ದು, ಮಾವೋವಾದಿ ಸಿದ್ಧಾಂತವನ್ನು ಪ್ರಚಾರ ಮಾಡಿದೆ. ಕಾರ್ಯಕರ್ತರ ನೇಮಕಾತಿ ಮತ್ತು ತರಬೇತಿ ಮತ್ತು ಮಾವೋವಾದಿ ಸಂಘಟನೆಗೆ ಯೋಜನೆಗಳಿಗೆ ಬೆಂಬಲ ನೀಡಿದ ಆರೋಪವೂ ಇದೆ.
ಇದನ್ನೂ ಓದಿ: ಜನಾರ್ದನ ರೆಡ್ಡಿ ಜಾಮೀನು ಷರತ್ತುಗಳನ್ನು ಸಡಿಲಿಸಲು ನಿರಾಕರಿಸಿದ ಸುಪ್ರೀಂಕೋರ್ಟ್..ಬಳ್ಳಾರಿಗೆ ಹೋಗುವ ಆಸೆಗೆ ತಣ್ಣೀರು!