ETV Bharat / bharat

ವಲಸೆ ಕಾರ್ಮಿಕರು ಸರ್ಕಾರಿ ಯೋಜನೆಗಳ ಪ್ರಯೋಜ ಪಡೆಯುತ್ತಿದ್ದಾರೆಯೇ:ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್

ವಲಸೆ ಕಾರ್ಮಿಕರು ಸರ್ಕಾರಿ ಯೋಜನೆಗಳ ಪ್ರಯೋಜ ಪಡೆಯುತ್ತಿದ್ದಾರೆಯೇ ಎಂಬ ಮಾಹಿತಿ ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ - ವಿವರಗಳನ್ನು ನೀಡುವಂತೆ ಕೋರಿದ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಬಿ.ವಿ.ನಾಗರತ್ನ ಪೀಠ.

SC questions centre
ವಲಸೆ ಕಾರ್ಮಿಕರು ಸರ್ಕಾರಿ ಯೋಜನೆಗಳ ಪ್ರಯೋಜ ಪಡೆಯುತ್ತಿದ್ದಾರೆಯೇ:ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್
author img

By

Published : Jan 31, 2023, 9:20 PM IST

ನವದೆಹಲಿ: ಇ -ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿಯಾಗಿರುವ 28.55 ಕೋಟಿ ವಲಸೆ ಕಾರ್ಮಿಕರು ಪಡಿತರ ಚೀಟಿಗಳನ್ನು ಹೊಂದಿದ್ದಾರೆಯೇ ಮತ್ತು ಅವರೆಲ್ಲರೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆಯೇ ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.

28.55 ಕೋಟಿ ನೋಂದಾಯಿತ ವಲಸೆ ಕಾರ್ಮಿಕರಲ್ಲಿ ಎಷ್ಟು ಮಂದಿ ಪಡಿತರ ಚೀಟಿಗಳನ್ನು ಹೊಂದಿದ್ದಾರೆ ಮತ್ತು ಅವರಿಗೆ ಎನ್ಎಫ್ಎಸ್ಎ ಅಡಿಯಲ್ಲಿ ಆಹಾರದ ಪ್ರಯೋಜನಗಳನ್ನು ನೀಡಲಾಗುತ್ತಿದೆಯೇ ಎಂಬ ವಿವರಗಳನ್ನು ನೀಡುವಂತೆ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಬಿ.ವಿ. ನಾಗರತ್ನ ಅವರ ಪೀಠವು ಕೇಂದ್ರ ಸರ್ಕಾರವನ್ನು ಕೇಳಿದೆ. ಈ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಎಎಸ್‌ಜಿ ಐಶ್ವರ್ಯಾ ಭಾಟಿ ಅವರು, ಕೇಂದ್ರ ಮತ್ತು ರಾಜ್ಯಗಳ ನಡುವೆ ದತ್ತಾಂಶವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ವಲಸಿಗರನ್ನು ತಲುಪಬೇಕು: ರಾಜ್ಯಗಳು ಮತ್ತು ಕೇಂದ್ರದ ನಡುವೆ ದತ್ತಾಂಶವನ್ನು ಹಂಚಿಕೊಳ್ಳುವುದರ ಕುರಿತು ನಾವು ಕೇಳಿಲ್ಲ. ಕೌಶಲ್ಯರಹಿತ ವಲಸಿಗರು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆಯೇ ಎಂಬುದರ ಬಗ್ಗೆ ನಾವು ಆಸಕ್ತಿ ಹೊಂದಿದ್ದೇವೆ. ಸರ್ಕಾರದ ಯೋಜನೆಗಳು ಪ್ರತಿಯೊಬ್ಬ ವಲಸಿಗರನ್ನು ತಲುಪಬೇಕು. ಮೊದಲಿಗೆ ಈಗಾಗಲೇ ನೋಂದಾಯಿಸಿದವರನ್ನು ತಲುಪಬೇಕು ಎಂದು ಎಂ.ಆರ್.ಶಾ ಹೇಳಿದರು.

ಇದನ್ನೂ ಓದಿ.. ಪಕ್ಷದಲ್ಲಿ ಬಳಸಿದ ಮುಸ್ಲಿಮೀನ್ ಪದವು ಜಾತ್ಯತೀತತೆಯ ತತ್ವ ಉಲ್ಲಂಘಿಸಲ್ಲ: ಸುಪ್ರೀಂ​ಗೆ ಓವೈಸಿ ಪಕ್ಷದ ಅಫಿಡವಿಟ್

ಈ ಬಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ದತ್ತಾಂಶ ಹಂಚಿಕೆ ನಿರ್ಣಾಯಕವಾಗಿದೆ ಏಕೆಂದರೆ ಕೇಂದ್ರ ಯೋಜನೆಗಳನ್ನು ರಾಜ್ಯಗಳು ಸಹ ಜಾರಿಗೆ ತರುತ್ತವೆ ಎಂದು ಹೇಳಿದರು.

ರಾಜ್ಯ ಸರ್ಕಾರಗಳ ಮೇಲೆ ಅವಲಂಬಿತರಾಗಬೇಡಿ: ಈಗಾಗಲೇ ನೋಂದಾಯಿಸಿಕೊಂಡಿರುವ ವಲಸಿಗರಿಗೆ ಕೇಂದ್ರ ಸರ್ಕಾರದಿಂದ ನೇರವಾಗಿ ಲಭ್ಯವಾಗುವಂತೆ ಮಾಡಿರುವ ಯೋಜನೆಗಳನ್ನು ಶುಕ್ರವಾರ ಅಥವಾ ಸೋಮವಾರದೊಳಗೆ ನೀವು ನಮಗೆ ತಿಳಿಸಿ. ನೀವು ಜಾರಿಗೆ ತಂದಿರುವ ಯೋಜನೆಗಳ ಪ್ರಯೋಜನಗಳು ನೋಂದಾಯಿತ ವಲಸಿಗರಿಗೆ ನೇರವಾಗಿ ಲಭ್ಯವಿದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಇದೀಗ ರಾಜ್ಯ ಸರ್ಕಾರಗಳ ಮೇಲೆ ಅವಲಂಬಿತರಾಗಬೇಡಿ. ಇತರ ಯೋಜನೆಗಳು ಯಾವುವು ಎಂದು ನಮಗೆ ತಿಳಿಸಿ ಎಂದು ನ್ಯಾಯಮೂರ್ತಿ ಶಾ ಹೇಳಿದರು.

ಫೆಬ್ರವರಿ 20ಕ್ಕೆ ಮುಂದಿನ ವಿಚಾರಣೆ: ಕೇಂದ್ರವು ಏನನ್ನೂ ಮಾಡಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿಲ್ಲ ಎಂದು ಶಾ ಸ್ಪಷ್ಟಪಡಿಸಿದರು. ಆದರೆ ಯೋಜನೆಗಳ ಪ್ರಯೋಜನಗಳು ಪ್ರತಿಯೊಬ್ಬ ವಲಸಿಗರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು ಮತ್ತು ವೈದ್ಯಕೀಯ ಸೌಲಭ್ಯಗಳು, ಪಿಂಚಣಿ, ಶಿಕ್ಷಣ ಸೌಲಭ್ಯಗಳ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಫೆಬ್ರವರಿ 20ಕ್ಕೆ ನಿಗದಿಪಡಿಸಿದೆ.

ಇದನ್ನೂ ಓದಿ:ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ಸಾವು ಪ್ರಕರಣ : ಆಕ್ಷೇಪಣೆ ಸಲ್ಲಿಸಲು 2 ವಾರ ಕಾಲಾವಕಾಶ ನೀಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.