ETV Bharat / bharat

ತೀಸ್ತಾ ಸೆಟಲ್ವಾಡ್​ಗೆ ಮಧ್ಯಂತರ ಜಾಮೀನು: ಪಾಸ್‌ಪೋರ್ಟ್​ ಒಪ್ಪಿಸಲು ಸುಪ್ರೀಂಕೋರ್ಟ್​ ಸೂಚನೆ - 2002 Gujarat riots

ತೀಸ್ತಾ ಸೆಟಲ್ವಾಡ್‌ಗೆ ಮಧ್ಯಂತರ ಜಾಮೀನು ನೀಡಿರುವ ಸುಪ್ರೀಂಕೋರ್ಟ್​​, ಪಾಸ್‌ಪೋರ್ಟ್​ ಅನ್ನು ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸುವಂತೆ ನಿರ್ದೇಶಿಸಿದೆ.

sc-grants-interim-bail-to-teesta-setalvad
ತೀಸ್ತಾ ಸೆಟಲ್ವಾಡ್​ಗೆ ಮಧ್ಯಂತರ ಜಾಮೀನು: ಪಾಸ್‌ಪೋರ್ಟ್​ ಒಪ್ಪಿಸಲು ಸುಪ್ರೀಂಕೋರ್ಟ್​ ಸೂಚನೆ
author img

By

Published : Sep 2, 2022, 6:03 PM IST

ನವದೆಹಲಿ: 2002ರ ಗುಜರಾತ್ ಗಲಭೆ ಕುರಿತಂತೆ ಆಧಾರರಹಿತ ಮಾಹಿತಿ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಅವರಿಗೆ ಸುಪ್ರೀಂಕೋರ್ಟ್​​ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಜೂನ್​ 25ರಂದು ಮುಂಬೈನಲ್ಲಿ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ತಂಡ ಬಂಧಿಸಿತ್ತು. ಈ ಮೊದಲು ಜಾಮೀನು ಕೋರಿ ತೀಸ್ತಾ ಸೆಟಲ್ವಾಡ್‌ ಅಹಮದಾಬಾದ್‌ ಸೆಷನ್ಸ್ ನ್ಯಾಯಾಲಯ ಹಾಗೂ ಗುಜರಾತ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸೆಷನ್ಸ್ ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿತ್ತು. ನಂತರ ಹೈಕೋರ್ಟ್​ಗೆ ಹೋಗಿದ್ದರು. ಆದರೆ, ಮಧ್ಯಂತರ ಜಾಮೀನಿನ ಯಾವುದೇ ಆದೇಶವನ್ನು ನೀಡದೇ ಹೈಕೋರ್ಟ್ ಅರ್ಜಿಯನ್ನು ಸುದೀರ್ಘ ಅವಧಿಗೆ ಮುಂದೂಡಿತ್ತು. ಹೀಗಾಗಿ ಅವರು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದರು.

ಇಂದು ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್​ ಮತ್ತು ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವು ಅಗತ್ಯ ಕಸ್ಟಡಿ ವಿಚಾರಣೆ ಪೂರ್ಣಗೊಂಡಿರುವುದರಿಂದ ಮಧ್ಯಂತರ ಜಾಮೀನಿನ ವಿಚಾರಣೆ ನಡೆಸಬೇಕಾಗಿತ್ತು. ಇದೇ ವೇಳೆ ಜಾಮೀನು ಅರ್ಜಿಯು ಗುಜರಾತ್ ಹೈಕೋರ್ಟ್‌ನಲ್ಲಿ ಇನ್ನೂ ಬಾಕಿ ಉಳಿದಿದೆ ಎಂಬುವುದನ್ನೂ ಗಮನಿಸಿದ ನ್ಯಾಯಪೀಠವು, ನಾವು ತೀಸ್ತಾ ಸೆಟಲ್ವಾಡ್ ಅವರಿಗೆ ಮಧ್ಯಂತರ ಜಾಮೀನು ನೀಡುತ್ತೇವೆ ಎಂದು ತಿಳಿಸಿತು.

ಇದನ್ನೂ ಓದಿ: ಚಿನ್ನದ ಹೊಳಪಿನಂತೆ ಸತ್ಯ ಪುಟಿದೆದ್ದು ಬಂದಿದೆ.. ಆರೋಪ ಮಾಡಿದವರು ಕ್ಷಮೆ ಕೇಳಲಿ: ಅಮಿತ್ ಶಾ ಆಗ್ರಹ

ಅಲ್ಲದೇ, ಜಾಮೀನು ಅರ್ಜಿಯನ್ನು ನಿರ್ಧರಿಸಲು ಹೈಕೋರ್ಟ್‌ಗೆ ಸುಪ್ರೀಂಕೋರ್ಟ್​ ಸೂಚಿಸಿದೆ. ಆದರೆ, ಈಗ ಸೆಟಲ್ವಾಡ್ ಮಧ್ಯಂತರ ಜಾಮೀನಿನ ಮೇಲೆ ಹೊರ ಬರುತ್ತಾರೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದ್ದು, ತಮ್ಮ ಪಾಸ್‌ಪೋರ್ಟ್​ನ್ನು ವಿಚಾರಣಾ ನ್ಯಾಯಾಲಯಕ್ಕೆ ಒಪ್ಪಿಸುವಂತೆ ನಿರ್ದೇಶಿಸಿದೆ. ಜೊತೆಗೆ ತನ್ನ ಆದೇಶದಿಂದ ಹೈಕೋರ್ಟ್ ಪ್ರಭಾವಿತವಾಗದೇ ಸಾಮಾನ್ಯವಾಗಿಯೇ ಜಾಮೀನು ಅರ್ಜಿಯನ್ನು ನಿರ್ಧರಿಸುತ್ತದೆ ಎಂದೂ ಸುಪ್ರೀಂ ಸ್ಪಷ್ಟಪಡಿಸಿದೆ.

ಈ ವಿಚಾರಣೆ ವೇಳೆ ಗುಜರಾತ್ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಈಗಾಗಲೇ ಹೈಕೋರ್ಟ್​ ಮುಂದೆ ಈ ಪ್ರಕರಣ ಇದೆ. ಹೀಗಾಗಿ ಜಾಮೀನು ನೀಡಬೇಡಿ ಎಂದು ವಾದ ಮಂಡಿಸಿದರು. ಈ ವೇಳೆ ತೀಸ್ತಾ ಸೆಟಲ್ವಾಡ್‌ ಜೂನ್ 25ರಿಂದ ಬಂಧನದಲ್ಲಿದ್ದಾರೆ. ನ್ಯಾಯಾಂಗ ಬಂಧನದ ನಂತರವೂ ಏಳು ದಿನಗಳ ಕಸ್ಟಡಿಯಲ್ ವಿಚಾರಣೆಯನ್ನು ತನಿಖಾ ತಂಡ ನಡೆಸಿದೆ ಎಂಬುವುದನ್ನು ಸುಪ್ರೀಂಕೋರ್ಟ್ ಗಮನಿಸಿತು.

ಇದನ್ನೂ ಓದಿ: ತೀಸ್ತಾ ಸೆಟಲ್ವಾಟ್​ರನ್ನು ವಶಕ್ಕೆ ಪಡೆದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.