ETV Bharat / bharat

ಕರ್ನಾಟಕ ಹೈಕೋರ್ಟ್​ಗೆ ಐವರು ಜಡ್ಜ್​ಗಳ​ ನೇಮಕಕ್ಕೆ ಸುಪ್ರೀಂಕೋರ್ಟ್​ ಅನುಮೋದನೆ - ಸುಪ್ರೀಂಕೋರ್ಟ್​ ಕೊಲಿಜಿಯಂ ಸಭೆ

ಕರ್ನಾಟಕ ಹೈಕೋರ್ಟ್‌ಗೆ ಹೊಸದಾಗಿ ಐವರು ನ್ಯಾಯಮೂರ್ತಿಗಳ ನೇಮಕ ಮಾಡಲು ಸಲ್ಲಿಸಿದ ಪ್ರಸ್ತಾವನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ. ​ಈ ಸಂಬಂಧ​ ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

SC Collegium meeting for judges in the karnatka high court

author img

By

Published : Jul 20, 2022, 5:08 PM IST

Updated : Jul 20, 2022, 5:37 PM IST

ನವದೆಹಲಿ: ಕರ್ನಾಟಕ ಹೈಕೋರ್ಟ್​​ಗೆ ಹೊಸದಾಗಿ ಐವರು ನ್ಯಾಯಮೂರ್ತಿಗಳ ನೇಮಕಕ್ಕೆ ಸುಪ್ರೀಂಕೋರ್ಟ್​ ಅನುಮೋದನೆ ನೀಡಿದೆ. ಜುಲೈ 19ರಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದಲ್ಲಿ ಈ ಸಭೆ ನಡೆಸಲಾಯಿತು.

SC Collegium meeting for judges in the karnatka high court
ಕರ್ನಾಟಕ ಮುಖ್ಯ ನ್ಯಾಯಮೂರ್ತಿ ನೇಮಕಕ್ಕೆ ಸುಪ್ರೀಂಕೋರ್ಟ್​ ಕೊಲಿಜಿಯಂ ಸಭೆ

ಈ ಸಭೆಯಲ್ಲಿ ಅನಿಲ್​ ಭೀಮಶೇನ್​​ ಕಟ್ಟಿ, ಗುರುಸಿದ್ಧಯ್ಯ ಬಸವರಾಜ, ಚಂದ್ರಶೇಖರ್​​​ ಮೃತ್ಯಂಜಯ ಜೋಶಿ,ಉಮೇಶ್​​ ಮಂಜುನಾಥ್​ಭಟ್ಟ ಅಡಿಗ ಹಾಗೂ ತಲ್ಕಾಡ ಗಿರಿಗೌಡ ಶಿವಶಂಕ್ರೆ ಗೌಡ ಅವರನ್ನು ಹೈಕೋರ್ಟ್​​ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಅನುಮೋದನೆ ನೀಡಲಾಗಿದೆ.

ಈ ನಡುವೆ, ಮುಖ್ಯನ್ಯಾಯಮೂರ್ತಿ ರಿತುರಾಜ್​​ ಅವಸ್ತಿ ಅವರು ಜುಲೈ 2ರಂದು ನಿವೃತ್ತಿಯಾಗಿದ್ದು, ಸದ್ಯ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಕಾಯಂ ಸಿಜೆ ನೇಮಕದ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ಅಗತ್ಯ ವಸ್ತುಗಳ ಜಿಎಸ್​​ಟಿ ಏರಿಕೆ: ಕೇಂದ್ರದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ, ಸರ್ಕಾರದ ವಿರುದ್ಧ ಘೋಷಣೆ

Last Updated : Jul 20, 2022, 5:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.