ETV Bharat / bharat

ಕಾರ್ತಿ ಚಿದಂಬರಂ ವಿದೇಶ ಪ್ರವಾಸಕ್ಕೆ ಸುಪ್ರೀಂ ಅನುಮತಿ - ಕಾರ್ತಿ ಚಿದಂಬರಂಗೆ ವಿದೇಶಕ್ಕೆ ಹಾರಲು ಒಪ್ಪಿಗೆ ಕೊಟ್ಟ ಸುಪ್ರೀಂ

ವಿದೇಶಕ್ಕೆ ಪ್ರಯಾಣ ಬೆಳೆಸುವ ಸ್ಥಳ, ಎಲ್ಲಿ ವಾಸ ಮಾಡ್ತೀರಿ ಎಂಬ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಈ ಸಂಬಂಧ 2 ಕೋಟಿ ರೂ. ಮುಂಗಡ ಪಾವತಿಸುವಂತೆ ಷರತ್ತು ವಿಧಿಸಿ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ವಿದೇಶಕ್ಕೆ ಪ್ರಯಾಣ ಬೆಳಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

SC allows Karti Chidambaram to travel abroad
ಕಾರ್ತಿ ಚಿದಂಬರಂಗೆ ವಿದೇಶಕ್ಕೆ ಹಾರಲು ಒಪ್ಪಿಗೆ ಕೊಟ್ಟ ಸುಪ್ರೀಂ
author img

By

Published : Feb 22, 2021, 12:51 PM IST

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ವಿದೇಶಕ್ಕೆ ಪ್ರಯಾಣ ಬೆಳಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.

ಈ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್​​ ಅಶೋಕ್​ ಭೂಷಣ್​ ನೇತೃತ್ವದ ಪೀಠ, ವಿದೇಶಕ್ಕೆ ಪ್ರಯಾಣ ಬೆಳೆಸುವ ಸ್ಥಳ, ಎಲ್ಲಿ ವಾಸ ಮಾಡ್ತೀರಿ ಎಂಬ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಈ ಸಂಬಂಧ 2 ಕೋಟಿ ರೂ. ಮುಂಗಡ ಪಾವತಿಸುವಂತೆ ಷರತ್ತು ವಿಧಿಸಿ, ವಿದೇಶಕ್ಕೆ ಪ್ರಯಾಣ ಬೆಳೆಸಲು ಅನುಮತಿ ನೀಡಿದೆ.

ಕಾರ್ತಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿದ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಎಸ್​.ವಿ. ರಾಜು, ಈ ಹಿಂದೆ ವಿದೇಶ ಪ್ರಯಾಣ ಬೆಳೆಸಲು ಪಿ. ಚಿದಂಬರಂ ಅವರಿಗೂ ಅವಕಾಶ ನೀಡಲಾಗಿತ್ತು. ಆದರೆ, ಅವರಿಗೆ 10 ಕೋಟಿ ರೂ. ಮುಂಗಡ ಹಣವನ್ನ ಕೋರ್ಟ್​ಗೆ ಕಟ್ಟುವಂತೆ ಸೂಚಿಲಾಗಿತ್ತು ಎಂಬುದನ್ನ ಕೋರ್ಟ್ ಗಮನಕ್ಕೆ ತಂದರು.

ಇದಕ್ಕೆ ಉತ್ತರ ನೀಡಿದ ಕಾರ್ತಿ ಚಿದಂಬರಂ ಪರ ವಕೀಲ ಕಪಿಲ್​ ಸಿಬಲ್​​, ಈ ನಿಬಂಧನೆಗಳು ಸರಿಯಲ್ಲ, ಅವರು ಈ ದೇಶದ ಸಂಸದ. ದೇಶದಿಂದ ಎಲ್ಲೂ ಓಡಿಹೋಗಲು ಆಗಲ್ಲ ಎಂದು ಪ್ರತಿಪಾದಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.