ETV Bharat / bharat

ಶೇ 50 ಮೀಸಲಾತಿ ತೀರ್ಪು ಮರುಪರಿಶೀಲಿಸಲು ಸುಪ್ರೀಂ ಸಮ್ಮತಿ: ರಾಜ್ಯ ಸರ್ಕಾರಗಳಿಗೆ ನೋಟಿಸ್

ಮರಾಠ ಮೀಸಲಾತಿ ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಶೇ 50 ಮೀಸಲಾತಿ ಕೋಟಾವನ್ನು ಏರಿಕೆ ಮಾಡಬೇಕೇ? ಎಂದು ರಾಜ್ಯ ಸರ್ಕಾರಗಳಿಗೆ ಕೇಳಿದೆ.

SC
ಸುಪ್ರೀಂ ಕೋರ್ಟ್
author img

By

Published : Mar 8, 2021, 4:16 PM IST

ನವದೆಹಲಿ: ಸುಮಾರು ಮೂರು ದಶಕಗಳ ಹಿಂದಿನ ಶೇ 50ರಷ್ಟು ಮೀಸಲಾತಿ ಪ್ರಮಾಣದ ಮಹತ್ವದ ತೀರ್ಪನ್ನು ಮರುಪರಿಶೀಲಿಸಲು ಒಪ್ಪಿಗೆ ನೀಡಿರುವ ಸುಪ್ರೀಂಕೋರ್ಟ್, ಈ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವಂತೆ ಎಲ್ಲಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್​ ನೀಡಿದೆ.

ಇಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಮರಾಠ ಮೀಸಲಾತಿ ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿತು. ಅಸ್ತಿತ್ವದಲ್ಲಿರುವ ಶೇ 50 ಮೀಸಲಾತಿ ಕೋಟಾವನ್ನು ಏರಿಕೆ ಮಾಡಬೇಕೇ ಎಂದು ರಾಜ್ಯ ಸರ್ಕಾರಗಳಿಗೆ ಪ್ರಶ್ನಿಸಿದ್ದು, ಕೇಂದ್ರದ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ (ಒಬಿಸಿ) ನೀಡುವ ಮೀಸಲಾತಿ ಪ್ರಮಾಣದ ತಿದ್ದುಪಡಿಯ ಬಗ್ಗೆ ಅಭಿಪ್ರಾಯ ತಿಳಿಸಲು ಕೋರಿದೆ.

ಇದನ್ನೂ ಓದಿ: ಈ ಗಿಳಿಯನ್ನು ಎಲ್ಲಾದ್ರೂ ನೋಡಿದ್ದೀರಾ?.. ಹುಡುಕಿಕೊಟ್ಟವರಿಗೆ 10 ಸಾವಿರ ರೂ. ಬಹುಮಾನ

1992 ರಲ್ಲಿ ಇಂದ್ರಾ ಸಹಾನಿ ನೇತೃತ್ವದ 9 ನ್ಯಾಯಾಧೀಶರ ಪೀಠವು ನೀಡಿದ್ದ ಶೇ 50 ಮೀಸಲಾತಿ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ. ಮರಾಠಾ ಮೀಸಲಾತಿ ಪ್ರಕರಣವು ಕೇವಲ ಒಂದು ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಇದರಲ್ಲಿ ದೇಶದ ಎಲ್ಲಾ ರಾಜ್ಯಗಳ ಅಭಿಪ್ರಾಯ ಬೇಕಿದೆ ಎಂದು ಹೇಳಿ ಮಾರ್ಚ್​ 15ಕ್ಕೆ ವಿಚಾರಣೆ ಮುಂದೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.