ನವದೆಹಲಿ : ಅಫ್ಘಾನಿಸ್ತಾನವನ್ನು ಒಳಗೊಂಡ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆರು ವಾರಗಳ ಕಾಲ ಮುಂದೂಡಿದೆ.
ಪ್ರಸ್ತುತ ಪರಿಸ್ಥಿತಿ ಬಿಗಡಾಯಿಸಿರುವ ಕಾರಣ ಆ ದೇಶದ ರಾಯಭಾರ ಕಚೇರಿಯಿಂದ ಸೂಚನೆಗಳನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಅಫ್ಘಾನಿಸ್ತಾನದ ಪರ ವಕೀಲ ಈಜಾಜ್ ಮಕ್ಬೂಲ್ ತಿಳಿಸಿದ್ದಾರೆ. ಆದ್ದರಿಂದ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆರು ವಾರಗಳ ಕಾಲ ಮುಂದೂಡಿದೆ.
ಅಫ್ಘಾನಿಸ್ತಾನದ ರಾಯಭಾರ ಕಚೇರಿ ಮತ್ತು ದೆಹಲಿ ನಿರ್ಮಾಣ ಕಂಪನಿಯ ನಡುವಿನ ವಿವಾದಕ್ಕೆ ಸಂಬಂಧಿಸಿದ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ಯುಎಸ್ ಸೈನ್ಯವನ್ನು ಹಿಂತೆಗೆದುಕೊಂಡ ನಂತರ, ತಾಲಿಬಾನ್ ದೇಶವನ್ನು ವಶಪಡಿಸಿಕೊಂಡಿದೆ. ಅದರ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಅನೇಕ ಜನರು ಜೀವ ಬೆದರಿಕೆಯಿಂದಾಗಿ ದೇಶ ತೊರೆಯಬೇಕಾಯಿತು.
ಓದಿ: ಕಬ್ಬಿಣದ ಸರಳುಗಳ ಹೊತ್ತಿದ್ದ ಟಿಪ್ಪರ್ ಪಲ್ಟಿ : 13 ಕಾರ್ಮಿಕರ ದುರ್ಮರಣ